ವಾಷಿಂಗ್ಟನ್,
ಡಿ 17 (ಸ್ಫುಟ್ನಿಕ್) ಪ್ಯೋನ್ಗ್ಯಾನ್ ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ
ಉತ್ತರ ಕೊರಿಯಾದ ಮೇಲೆ ನಿಗಾ ವಹಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅನೇಕ ಪ್ರದೇಶಗಳ ಮೇಲೆ ಅಮೆರಿಕ ನಿಗಾ ವಹಿಸಿದೆ, ಆದರೆ ಉತ್ತರ
ಕೊರಿಯಾದ ಮೇಲೆ ಹೆಚ್ಚು ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸೋಹಿ ಉಪಗ್ರಹ ಉಡಾವಣಾ ಸ್ಥಳದಲ್ಲಿ ಕ್ಷಿಪಣಿ ಪರೀಕ್ಷಾರ್ಥ
ಪ್ರಯೋಗ ನಡೆಸಲಾಗಿದೆ ಎಂದು ಉತ್ತರ ಕೊರಿಯಾದ ರಾಷ್ಟ್ರೀಯ ರಕ್ಷಣಾ ವಿಜ್ಞಾನ ಸಂಸ್ಥೆ ಕಳೆದ ವಾರ ತಿಳಿಸಿತ್ತು.
ಕೊರಿಯಾದ ಅಣ್ವಸ್ತ್ರ ಪ್ರಯೋಗಗಳನ್ನು ನಿಲ್ಲಿಸಲು
ಅಮೆರಿಕ ಮುಂದಾಗಿದ್ದು ಇದೀಗ ಮತ್ತೆ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಪುನರಾರಂಭವಾಗಿರುವುದು
ಟ್ರಂಪ್ ಆಡಳಿತಕ್ಕೆ ಬೆದರಿಕೆಯೊಡ್ಡಿವೆ ಎಂದು ಹೇಳಲಾಗಿದೆ. ಅಮೆರಿಕದೊಂದಿಗೆ ಮಾತುಕತೆ ನಿಂತಿದ್ದು ಹಿಂದಿನ ನಡೆಯನ್ನು
ಅಮೆರಿಕ ತೋರುತ್ತಿಲ್ಲ ಎಂದು ಉತ್ತರ ಕೊರಿಯಾ ಬೇಸರ ವ್ಯಕ್ತಪಡಿಸಿದೆ.