ಪಟ್ಟಣ ಪಂಚಾಯತದಿಂದ 530 ಕುಟುಂಬಗಳಿಗೆ ನಮೂನೆ 3 ಕೊಡಿಸಲು ಮನವಿ

ಪಟ್ಟಣ ಪಂಚಾಯತದಿಂದ 530 ಕುಟುಂಬಗಳಿಗೆ ನಮೂನೆ 3 ಕೊಡಿಸಲು ಮನವಿ Town Panchayat requests 530 families to provide Form 3

ಪಟ್ಟಣ ಪಂಚಾಯತದಿಂದ 530 ಕುಟುಂಬಗಳಿಗೆ ನಮೂನೆ 3 ಕೊಡಿಸಲು ಮನವಿ 

ಕಾರವಾರ 03: ಮುಂಡಗೋಡ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಟ್ಟಣ ಪಂಚಾಯತ ದಿಂದ ನಮೂನೆ-3 ಕೊಡಿಸಬೇಕು ಎಂದು ಆಗ್ರಹಿಸಿ ಗಾಂಧಿ ನಗರ ಕೊಳಚೆ ಪ್ರದೇಶದ ನಿವಾಸಿಗಳ ಅಭಿವೃದ್ಧಿ ಸಂಘ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿತು. 

ಮನವಿಯಲ್ಲಿ ಗಾಂಧಿನಗರ ನಿವಾಸಿಗಳ ಸಮಸ್ಯೆಗಳನ್ನು ವಿವರವಾಗಿ ಬಿಚ್ಚಿಡಲಾಗಿದೆ.29 ಜುಲೈ 2022 ರಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಮುಲೈ ಮುಹಿಲನ್ ಎಂ.ಪಿ ಅವರು ಮುಂಡಗೋಡ ನಗರದ ಪಟ್ಟಣ ಪಂಚಾಯತ ವ್ಯಾಪ್ತಿಯ ಗಾಂಧಿನಗರದಲ್ಲಿ 530 ಕುಟುಂಬಗಳು ವಾಸವಾಗಿರುವ, ಗಾಂಧಿನಗರವನ್ನು ಕೊಳಚೆ ಪ್ರದೇಶವೆಂದು ಘೋಷಿಸಿರುತ್ತಾರೆ. ಸದರಿ ಆದೇಶದಲ್ಲಿ ಸದರಿ ಕೊಳಚೆ ಪ್ರದೇಶದಲ್ಲಿ ವಾಸವಾಗಿರುವ 530 ಕುಟುಂಬಗಳ ಯಜಮಾನನ ಹೆಸರುಗಳನ್ನು ಹಾಗೂ ಪೂರ್ವಕ್ಕೆ ಅರಣ್ಯ ಪ್ರದೇಶ, ಪಶ್ಚಿಮಕ್ಕೆ ನೆಹರೂನಗರ ಬಡಾವಣೆ, ಉತ್ತರಕ್ಕೆ ಇಂದಿರಾನಗರ ಬಡಾವಣೆ ಹಾಗೂ ದಕ್ಷಿಣಕ್ಕೆ ಗಾಂಧಿನಗರ ಉದ್ಯಾನವನ ಅಂತಾ ಗಡಿಗಳನ್ನು ಗುರುತಿಸಿ ಸ.ನಂ 186 ಹಿಸ್ಸಾ ಅ ಅಂದಾಜು ವಿಸ್ತೀರ್ಣ 25 ಎಕರೆ ಎಂದು ತಿಳಿಸಿದ್ದಾರೆ. ದಿನಾಂಕ 06 ಸೆಪ್ಟಂಬರ್ 2022 ರಂದು, ಮುಂಡಗೋಡ ಪಟ್ಟಣ ಪಂಚಾಯತ ದಿಂದ ಗಾಂಧಿನಗರ ಕೊಳಚೆ ಪ್ರದೇಶವು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರಿಗೆ ಹಸ್ತಾಂತರ ಮಾಡಿರುತ್ತಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿ ವಿಭಾಗ ಕಚೇರಿಯ ಕಾರ್ಯಪಾಲಕ ಅಭಿಯಂತರರು, ಗಾಂಧಿನಗರ ಕೊಳಗೇರಿ ನಿವಾಸಿಗಳಿಗೆ, ಹಕ್ಕು ಪತ್ರಗಳನ್ನು ವಿತರಣೆಮಾಡಿ, ಫಲಾನುಭವಿಗಳಿಂದ ಇತರೆ ವರ್ಗದವರಿಂದ ರೂ. 2000 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಂದ ರೂ. 1000 ಡಿ.ಡಿ ಮೂಲಕ ಪಡೆದು ಫಲಾನುಭವಿಗಳಿಗೆ ಕ್ರಯ ಪತ್ರಮಾಡಿ ಕೊಟ್ಟಿರುತ್ತಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.  

ಸದರಿ ಕ್ರಯ ಪತ್ರಗಳನ್ನು ಮುಂಡಗೋಡ ಉಪನೋಂದಣಿ ಕಛೇರಿಯಲ್ಲಿ ನೊಂದಣಿ ಮಾಡಿಕೊಂಡು, ಮುಂಡಗೋಡ ಪಟ್ಟಣ ಪಂಚಾಯತಿಗೆ ಸದರಿ ಹಕ್ಕು ಪತ್ರ ಹಾಗೂ ಕ್ರಯಪತ್ರಗಳನ್ನು ಪ್ರತಿಗಳನ್ನು ಸಲ್ಲಿಸಿ. ಪಟ್ಟಣ ಪಂಚಾಯತ ಆಸ್ತಿ ಪುಸ್ತಕದಲ್ಲಿ ನಮೂದಿಸಿಕೊಂಡು ನಮೂನೆ-3 ನೀಡಲು ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸದರಿ ಅರ್ಜಿಗಳಿಗೆ ಅನುಗುಣವಾಗಿ ಹಲವರಿಗೆ ಈ ಹಿಂದೆ ಇದ್ದಂತಹ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು, ನಮೂನೆ-3 ಸಹ ವಿತರಿಸಿದ್ದಾರೆ. ಬಾಕಿ ಉಳಿದ ಎಲ್ಲರಿಗೂ ನಮೂನೆ-3 ನೀಡಲು ಕೋರಿ ಹೋರಾಟವನ್ನು ಮಾಡಿದ್ದು, ಹೋರಾಟಕ್ಕೆ ಮಣಿದ ಪಟ್ಟಣ ಪಂಚಾಯತದವರು ನಮೂನೆ-3 ಎಲ್ಲಾ 530 ಕುಟುಂಬಗಳಿಗೂ ನೀಡಲಾಗುವುದು ಎಂದು ತಿಳಿಸಿದ್ದರು. ಸರ್ಕಾರ ಅಧಿಕೃತವಾಗಿ ನಮ್ಮ ಗಾಂಧಿನಗರವನ್ನು ಕೊಳಗೇರಿ ಅಂತಾ ಘೋಷಿಸಿದೆ. ಕ್ರಮ ಬದ್ಧವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕ ಪತ್ರಗಳನ್ನು ಹಾಗೂ ಕ್ರಯ ಪತ್ರಗಳನ್ನು ಪಡೆದು ಉಪನೋಂದಣಿ ಕಛೇರಿಯಲ್ಲಿ ನೋಂದುಮಾಡಿಕೊಂಡಿದ್ದರೂ ಸಹ , ಮುಂಡಗೋಡ ಪಟ್ಟಣ ಪಂಚಾಯತದಲ್ಲಿ ಹಿಂದಿನ ಮುಖ್ಯಾಧಿಕಾರಿಗಳು, ಕೆಲವರಿಗೆ ಮಾತ್ರ ನಮೂನೆ-3 ನೀಡಿದ್ದು, ಇಂದಿನ ತನಕ ಎಲ್ಲಾ ನಿವಾಸಿಗಳಿಗೂ ನಮೂನೆ-3 ನೀಡಿರುವುದಿಲ್ಲ. ನಾವು ಹೋರಾಟ ಮಾಡಿದರೂ ಕೇವಲ ಲಿಖಿತ ಭರವಸೆಗಳನ್ನು ಕೊಡುತ್ತಿದ್ದಾರೆ ಹೊರತು ನಮೂನೆ-3 ಕೊಡುತ್ತಿಲ್ಲ. ಪ್ರಸ್ತುತದಲ್ಲಿ ಇರುವ ಮುಖ್ಯಾಧಿಕಾರಿಗಳು, ಗಾಂಧಿನಗರದ ಕೊಳಗೇರಿ ರವಾಸಿಗಳಿಗೆ ನಮೂನೆ-3 ನೀಡುವುದು ಹಾಗೂ ರಿನಿವಲ್ ಮಾಡುವುದನ್ನು ಸಂಪೂರ್ಣ ಬಂದುಮಾಡಿದ್ದಾರೆ. ಇದರಿಂದ ಅತಿ ಹೆಚ್ಚು ಎಸ್‌.ಸಿ , ಮತ್ತು ಎಸ್‌.ಟಿ ,ಹಿಂದುಳಿದ ವರ್ಗಗಳ ಬಡುವರು ವಾಸವಾಗಿರುವ ಗಾಂಧಿನಗರ ಕೊಳಚೆ ರವಾಸಿಗಳಿಗೆ ಬೇರೆ ಸೌಲಭ್ಯಗನ್ನು ಪಡೆಯಲು ಅನಾನುಕೂಲವಾಗಿದೆ.  

ದಯಾಳುಗಳಾದ ತಾವು ಕಾನೂನು ಬದ್ದವಾಗಿ ಹಕ್ಕುಗಳನ್ನು ಹೊಂದಿರುವ ಗಾಂಧಿನಗರ ಕೊಳಗೇರಿ ನಿವಾಸಿಗಳಾದ ನಮಗೆಲ್ಲರಿಗೂ ಮುಂಡಗೋಡ ಪಟ್ಟಣ ಪಂಚಾಯತ ದಿಂದ ನಮೂನೆ-3 ಕೊಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಸಂಘ ಮನವಿ ಮಾಡಿಕೊಂಡರು.ಗಾಂಧಿ ನಗರ ಕೊಳಚೆ ಪ್ರದೇಶದ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಪ್ಪ ಕೊರವರ, ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಏಲಕಪಾಟಿ, ದಲಿತ ಸಮುದಾಯದ ಹಿರಿಯ ಮುಖಂಡ, ಅಶೋಕ ಛಲವಾದಿ, ನಿಂಗಪ್ಪ ಛಲವಾದಿ, ರಾಮು ಕೊರವರ ಕಾರವಾರ ತಾಲೂಕು ಅಧ್ಯಕ್ಷ, ಮುಂಡಗೋಡ ತಾಲೂಕು ಅಧ್ಯಕ್ಷ ಚಂದ್ರ​‍್ಪ ಅಸುಂಡಿ, ನಗರ ಅಧ್ಯಕ್ಷರು ಮುಂಡಗೋಡ, ರಾಜು ಬಿ, ಮಂಜು, ಹಾಜರಿದ್ದರು.