ಜೂನ್. 16 ರಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ
Tourism Minister H.K. Patil's tour of Koppal district on June 16
ಕೊಪ್ಪಳ 14: ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಅವರು ಜೂನ್. 16 ಮತ್ತು 17. ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜೂನ್. 16 ರಂದು ಬೆಳಿಗ್ಗೆ 9 ಗಂಟೆಗೆ ಗದಗ ರಸ್ತೆ ಮೂಲಕ ಸಚಿವರು ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿ. ಬೆಳಿಗ್ಗೆ 10:30 ರಿಂದ 12 ಗಂಟೆಗಳವರೆಗೆ ಅಂಜನಾದ್ರಿ ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನ ವೀಕ್ಷಣೆ ಮಾಡುವರು.
ಮಧ್ಯಾಹ್ನ 12 ಗಂಟೆಯಿಂದ 12:30 ರವರೆಗೆ ಅಂಜನಾದ್ರಿ ಅಭಿವೃದ್ಧಿ ಕುರಿತು ಪಿಪಿಟಿ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡುವರು. ಮಧ್ಯಾಹ್ನ 12:30 ರಿಂದ 1 ಗಂಟೆಯವರೆಗೆ ಅಂಜನಾದ್ರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 1:30 ಕ್ಕೆ ಅಂಜನಾದ್ರಿಯಿಂದ ರಸ್ತೆ ಮೂಲಕ ಹುಚ್ಚಪ್ಪಯ್ಯನ ಮಠಕ್ಕೆ ಪ್ರಯಾಣಿಸುವರು. ಮಧ್ಯಾಹ್ನ 1:30 ರಿಂದ 2 ಗಂಟೆಗಳವರೆಗೆ ಗಂಗಾವತಿ ತಾಲ್ಲೂಕಿನ ಹುಚ್ಚಪ್ಪಯ್ಯನ ಮಠ ಮತ್ತು ಅಂಬಿಗರ ಬಾಗಿಲು ವೀಕ್ಷಣೆ ಮಾಡುವರು. ಮಧ್ಯಾಹ್ನ 2:30 ಕ್ಕೆ ಹುಚ್ಚಪ್ಪಯ್ಯನ ಮಠದಿಂದ ರಸ್ತೆ ಮೂಲಕ ಚಿಂತಾಮಣಿ ಮಠಕ್ಕೆ ಪ್ರಯಾಣಿಸಿ ಮಧ್ಯಾಹ್ನ 3 ರಿಂದ 3:30 ರವರೆಗೆ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ಚಿಂತಾಮಣಿ ಮಠ (ನರಸಿಂಹ ದೇವಾಲಯ) ವೀಕ್ಷಣೆ ಮಾಡುವರು. ಮಧ್ಯಾಹ್ನ 3:30 ರಿಂದ 4:30 ರವರೆಗೆ ಕಾಯ್ದಿರಿಸಿದೆ. ಸಂಜೆ 4:30 ಕ್ಕೆ ಚಿಂತಾಮಣಿ ಮಠದಿಂದ ರಸ್ತೆ ಮೂಲಕ ಗಗನ್ ಮಹಲ್ ಪ್ರಯಾಣ ಬೆಳೆಸಿ ಸಂಜೆ 4:40 ರಿಂದ 4:50 ರವರೆಗೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿರುವ ಗಗನ್ ಮಹಲ್ ವೀಕ್ಷಣೆ ಮಾಡುವರು. ಸಂಜೆ 4:50 ಕ್ಕೆ ಗಗನ್ ಮಹಲನಿಂದ ರಸ್ತೆ ಮೂಲಕ ಬಹದ್ದೂರ್ ಬಂಡೆ ಕೋಟೆಗೆ ಪ್ರಯಾಣಿಸುವರು. ಸಂಜೆ 5 ರಿಂದ 5:30 ರವರೆಗೆ ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡೆ ಕೋಟೆ ವೀಕ್ಷಣೆ ಮಾಡುವರು. ಸಂಜೆ 5:30 ಕ್ಕೆ ಬಹದ್ದೂರ್ ಬಂಡೆ ಕೋಟೆಯಿಂದ ರಸ್ತೆ ಮೂಲಕ ಕೊಪ್ಪಳಕ್ಕೆ ಪ್ರಯಾಣ ಬೆಳೆಸುವರು. ಸಂಜೆ 6 ಗಂಟೆಗೆ ಕೊಪ್ಪಳ. ಸಂಜೆ 7: 30 ಕ್ಕೆ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಭೇಟಿ ಮಾಡುವರು. ರಾತ್ರಿ 8 ಗಂಟೆಗೆ ಶ್ರೀ ಗವಿಸಿದ್ದೇಶ್ವರ ಮಠದಿಂದ ಹೊಸಪೇಟೆಗೆ ಪ್ರಯಾಣ ಬೆಳೆಸಿ ವೈಕುಂಠ ವಸತಿ ಗೃಹದಲ್ಲಿ ವಾಸ್ತವ್ಯ ಮಾಡುವರು.
ಜೂನ್. 17 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ರಸ್ತೆ ಮೂಲಕ ಗಂಗಾವತಿ ತಾಲ್ಲೂಕಿನ ಹಿರೆಬೆಣಕಲಗೆ ಆಗಮಿಸಿ ಬೆಳಿಗ್ಗೆ 11 ರಿಂದ 12 ಗಂಟೆಗಳವರೆಗೆ ಹಿರೇಬೆಣಕಲ್ ಪ್ರಾಗೈತಿಹಾಸಿಕ ನೆಲೆಗಳ ವೀಕ್ಷಣೆ ಮಾಡುವರು ನಂತರ ಮಧ್ಯಾಹ್ನ 12:30 ರಿಂದ 1 ಗಂಟೆಗಳವರೆಗೆ ಹಿರೆಬೆಣಕಲನಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಕಾಯ್ದಿರಿಸಿದೆ. ಸಂಜೆ 4 ಗಂಟೆಗೆ ಗಂಗಾವತಿಯಿಂದ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 