ಧಾರಾಕಾರ ಮಳೆ: ಅಗ್ರಾಣಿ ನದಿಗೆ ನೀರು ಬಂದು ರೈತರಿಗೆ ಅನುಕೂಲ
Torrential rain: Water flows into Agrani River, benefiting farmers
ಸಂಬರಗಿ 26: ಗಡಿಭಾಗದ ಗ್ರಾಮದ ಅಗ್ರಾಣಿ ನದಿ ಪ್ರತಿ ವರ್ಷ ನೀರಿಲ್ಲದೆ ಬತ್ತಿ ಹೋಗುತ್ತಿತ್ತು. ಈ ವರ್ಷ ರೋಹಿಣಿ ನಕ್ಷತ್ರ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಮಹಾರಾಷ್ಟ್ರದಲ್ಲಿ ಒಂದು ವಾರ ಸತತ ಧಾರಾಕಾರ ಮಳೆಯಿಂದ ಅಗ್ರಾಣಿ ನದಿಗೆ ನೀರು ಬಂದು ರೈತರಿಗೆ ಅನುಕೂಲವಾಗಿದೆ. ಆದರೆ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿದ ಪರಿಣಾಮದಿಂದ ಕೂಲಿಕಾರರಿಗೆ ತೊಂದರೆಯಾಗಿದೆ.
ಗಡಿಭಾಗದ ಅಗ್ರಾಣಿ ನದಿ ತೀರದ 30 ಗ್ರಾಮಗಳಿದ್ದು ಆ ಗ್ರಾಮಕ್ಕೆ ಅಗ್ರಾಣಿ ನದಿ ನೀರು ಬಂದ ಪರಿಣಾಮ ಖೀಳೆಗಾಂವ, ಪಾಂಡೆಗಾಂವ, ಸಂಬರಗಿ, ಶಿರೂರು, ಅಜೂರ, ಕಿರಣಗಿ, ಕಲ್ಲೋತ್ತಿ, ಶಿವನೂರ, ತಾಂವಶಿ, ಅಬ್ಬಿಹಾಳ, ಮಾಯನಟ್ಟಿ ಇನ್ನಿತರ ಗ್ರಾಮಗಳಿಗೆ ಅನೂಕೂಲವಾಗಿದೆ. ಆದರೆ ನಿರಂತರ ಸುರಿಯುತ್ತಿರುವ ಮಳೆಯಿಂದ ಕೂಲಿಕಾರರಿಗೆ ಕೆಲಸ ವಿಲ್ಲದಂತಾಗಿದ.ೆ ಅಗ್ರಾಣಿ ನದಿಗೆ ಮೇ 24ರಂದು ನೀರು ಹರಿಯುತ್ತಿದೆ. ಹಲವಾರು ವರ್ಷಗಳಿಂದ ಪ್ರಥಮ ಬಾರಿಗೆ ಅಗ್ರಾಣಿ ನದಿಗೆ ಜೂನ್ ತಿಂಗಳಲ್ಲಿ ನೀರು ಬರುತ್ತಿದೆ. ಅಗ್ರಾಣಿ ತೀರದಲ್ಲಿರುವ ಕೊಳವೆಬಾವಿ ಹಾಗೂ ತೆರೆದ ಬಾವಿಗಳಿಗೆ ಸ್ವಲ್ಪ ಮಟ್ಟಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಸತತವಾಗಿ ಮಳೆ ಸುರಿತಾಯಿರುವ ಮಳೆಯಿಂದ ರೈತರ ಕೆಲಸಗಳೆಲ್ಲವೂ ಸ್ಥಗಿತವಾಗಿವೆ. ಆದರೆ ಮಳೆ ಈಗ ಸ್ವಲ್ಪ ವಿಶ್ರಮಿಸಿದರೆ ಬಿತ್ತನೆ ಕಾರ್ಯಗಳೆಲ್ಲ ಸುಗಮವಾಗಿ ಸಾಗುತ್ತವೆ. ಹೀಗೆ ಒಂದು ವಾರ ಮಳೆ ಮುಂದುರಿದರೆ ಮಾತ್ರ ಮುಂಗಾರು ಬೆಳೆ ಬಿತ್ತನೆ ವಿಳಂಬವಾಗುವ ಸಾಧ್ಯತೆಯಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 