ಧಾರಾಕಾರ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ
Torrential rain: Life completely disrupted: Manjari News
ಉಕ್ಕಿ ಹರಿಯುತ್ತಿರುವ ನದಿಗಳು* ಅನ್ನದಾತನಿಗೆ ಬೆಳೆಗಳು ಜಲಾವೃತಗೊಳ್ಳುವ ಭೀತಿ* ಮನೆಗಳಲ್ಲಿ ನೀರು ನುಗ್ಗಿ ಜನರ ಜಾಗರಣೆ
ಸಂತೋಷ್ ಕುಮಾರ್ ಕಾಮತ್
ಮಾಂಜರಿ: ಕಳೆದೊಂದು ವಾರದಿಂದ ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಬಾಗ್ ಅಥಣಿ ಕಾಗವಾಡ ನಿಪ್ಪಾಣಿ ಚಿಕ್ಕೋಡಿ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮತ್ತು ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಈಗಾಗಲೇ ಗ್ರಾಮೀಣ ಭಾಗದ ರೈತಾಪಿ ವರ್ಗ ಬೆಳೆದ ಶೇಂಗಾ ಸೋಯಾಬೀನ್, ಉದ್ದು, ಹೆಸರು ಬೆಳೆಗಳು ಸಂಪೂರ್ಣ ಜಲಾವೃತಗೊಳ್ಳುವ ಭೀತಿ ಅನ್ನದಾತ ಎದುರಿಸುವುದಾಗಿದೆ.
ಇನ್ನೂ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಹಲವು ಬಡಾವಣೆಗಳ ನೂರಾರು ಮನೆಗಳಲ್ಲಿ ನೀರು ನುಗ್ಗಿದ ಜನರು ಜಾಗರಣೆ ಮಾಡುವಂತಾಯಿತು. ಸತತ ಎಂಟು ದಿನಗಳ ಕಾಲ ಸುರಿಯುತ್ತಿರುವ ಮಳೆಯಿಂದಾಗಿ ಬೂದಗಂಗಾ ವೇದಗಂಗಾ ಪಂಚಗಂಗಾ ಮತ್ತು ಕೃಷ್ಣ ನದಿ ತೀರದ ಜಮೀನುಗಳು ಸಂಪೂರ್ಣ ಮುಳುಗಡೆಯಾಗಿದ್ದು, ದನಗಳಿವೆ ಬೇವಿನ ಕೊರತೆ ಉಂಟಾಗಿದೆ ಅದೇ ಪ್ರಕಾರ ಚಿಕ್ಕೋಡಿ ಉಪವಿಭಾಗದ ಸುಮಾರು ಎಂಟು ಕೆಳ ಹಂತದ ಸೇತುವೆ ಜಲಾವೃತಗೊಂಡಿವೆ.
ಹಳ್ಳ-ಕೊಳ್ಳಗಳು ಭರ್ತಿ: ಚಿಕ್ಕೋಡಿ ಉಪ ವಿಭಾಗದ ಕಾಗವಾಡ ಅಥಣಿ ನಿಪ್ಪಾಣಿ ರಾಯಬಾಗ್ ಮತ್ತು ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳ ಜಮೀನುಗಳು ನೀರು ನುಗ್ಗಿ ರೈತಾಪಿ ವರ್ಗ ಬೆಳೆದ ಬೆಳೆಗಳು ನಾಶವಾಗುವ ಹಂತಿ ಅವರಿಸಿದೆ. ಕೃಷ್ಣಾ ಮತ್ತು ದೂಧಗಂಗಾ ವೇದಗಂಗಾ ಮತ್ತು ಪಂಚಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ರಾಷ್ಟ್ರದ ವಿವಿಧ ಜಲಾಶಯದಿಂದ ನಿರಂತರವಾಗಿ ಕೃಷ್ಣಾ ನದಿಗೆ ನೀರು ಹರಿ ಬಿಡಲಾಗುತ್ತಿದೆ.
ಶೇ.75 ಮಿ.ಮೀಟರ್ ಹೆಚ್ಚು ಮಳೆ: ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಆ.1ರಿಂದ 13ರವರೆಗೆ ವಾಡಿಕೆಮಳೆ ಶೇ.35ಮಿ.ಮೀ.ನಷ್ಟು ಇದೆ. ಆದರೆ, ನಾಡಿಕೆ ಶೇ.165 ಮಿ.ಮೀ. ಮಳೆ ಬಿದ್ದಿದ್ದು, ಶೇ.75 ಹೆಬ್ಬಾಗಿದೆ. ಇನ್ನೂ ಭಾನುವಾರ ಸೋಮವಾರ ಮತ್ತು ಮಂಗಳವಾರ ರಂದು ಒಂದು ದಿನ ಶೇಕಡ 25 ಮಿಲಿ ಮೀಟರ್ ಮಳೆಯಾಗಿದೆ. ಇದರಿಂದ ಜನ ಬೇಟಿನ ಸಂಕಷ್ಟಕ್ಕೀಡಾದ ಕಾರಣ ಜಿಲ್ಲಾ ಮತ್ತು ತಾಲೂಕ ಆಡಳಿತ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಹೆಸರು ಸೋಯಾಬಿನ್ ಉದ್ದು ಬೆಳೆಗೆ ಬಾರೀ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಸದ್ಯ ಹೇಸರು ಸೋಯಾಬಿನ್ ಬೆಳೆ ರಾಶಿ ಹಂತದಲ್ಲಿದೆ ಕೆಲವರು ಜಮೀನಿನಲ್ಲಿ ಬಿಟ್ಟರೆ ಇನ್ನೂ ಕೆಲವರು ರಸ್ತೆಗಳಲ್ಲಿ ಹೆಸರು ಸೊಯಾಬಿನ್ ಕಾಳುಗಳನ್ನು ವನಗಲು ಹಾಕಿದ್ದು ಸುರಿಯುತ್ತಿರುವ ಮಳೆಯಿಂದ ಇಡಿ ನೀರು ಪಾಲಾಗಿದೆ. ಇದಲ್ಲದೆ, ಹತ್ತಿ ಶೇಂಗಾ ಗೋವಿನ ಜೋಳ ಬೆಳೆಗೂ ಈ ವರುಣ ಕಂಟಕನಾಗಿದ್ದಾನೆ.
ಮಳೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ಶಾಲಾ, ಕಾಲೇಜುಗಳಿಗೆ ಬರಲು ಸಾಧ್ಯವಾಗದೆ ತರಗತಿಗಳಿಗೆ ಗೈರಾಗುವಂತಾಗಿದೆ. ಇನ್ನೂ ಜಿಲ್ಲೆಯ ಹಲವು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹೊಂಡ ನಿರ್ಮಾಣಗೊಂಡ ಕಾರಣ ವಾಹನ ಸಂಬಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.
ಜಿಟಿಜಿಟಿ ಹಾಗೂ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ತಾಲೂಕ ಆಡಳಿತ ಗಮನ ಹರಿಸಬೇಕು. ಕೂಡಲೇ ಜನರ ನೆರವಿಗೆ ಬರಬೇಕು.
ಚಂದ್ರಕಾಂತ್ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತರು
ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಳೆ ಮತ್ತು ಜೀವ ಹಾನಿಯಾಗಿಲ್ಲ. ಮಳೆ ಅವಾಂತರದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಶಿಕ್ಷಣ ಇಲಾಖೆಗೆ ಜಿಲ್ಲಾಡಳಿತದ ಸೂಚಿಸುವುದರಿಂದ ಜಿಲ್ಲೆಯ ಹಲವಾರು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಾಗಿದೆ.
ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿಗಳು ಬೆಳಗಾವಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 