ಬಿ.ಎ 2ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌

ಬಿ.ಎ 2ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌ Toppers in B.A 2nd Sem elective subjects

ಮುಧೋಳ ಅ.13, ; ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಅವರು 2024-25 ನೇ ಸಾಲಿನ ಬಿ.ಎ 2ನೇ ಸೆಮ್ ಗೆ ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. 

ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಶ್ರೀ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಕಲಾ ವಿಭಾಗದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ 2ನೇ ಸೆಮ್ ಕಂಪ್ಯೂಟರ್ ಅಪ್ಲಿಕೇಷನ್ ಫಾರ್ ಮಿಡಿಯಾ ಐಚ್ಚಿಕ ವಿಷಯದಲ್ಲಿ ಸೋನು ಗಡ್ಡಿ (ಶೇ.75.33), ಸುಶ್ಮಿತಾ ಪಾತ್ರೋಟ (ಶೇ.72.66), ತುಂಗಾ ಕಂಬಾರ (ಶೇ.70.66) ಈ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ವಿಭಾಗಕ್ಕೆ ಟಾಪರ್ಸ್‌ ರಾಗಿ ಮಹಾವಿದ್ಯಾಲಯಕ್ಕೆ ಮತ್ತು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ಕೀರ್ತಿ ತಂದಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್‌. ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಕಾಲೇಜುಗಳ ಆಡಳತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕಾಲೇಜುಗಳ ಪದ ನಿಮಿತ್ಯ ಕಾರ್ಯದರ್ಶಿ ಡಾ.ಎಸ್‌.ಎನ್‌.ಗಾಂವಕರ ಹಾಗೂ ಸದಸ್ಯರು ಮತ್ತು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಸಹ ಉಪನ್ಯಾಸಕಿ ಶ್ವೇತಾ ಶಿರಬಡಗಿ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಯವರು ಅಭಿನಂದಿಸಿದ್ದಾರೆ.