ನಾಳೆ ಚಿದಂಬರ ಮಹಾ ಸ್ವಾಮಿಗಳ 267ನೇ ಅವತಾರ ಜಯಂತಿ
Tomorrow is the 267th incarnation anniversary of Chidambaram Mahaswami
ಅಥಣಿ, 08 : ಚಿದಂಬರ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ. ಅಥಣಿ ಶ್ರೀ ಚಿದಂಬರ ಮಹಾ ಸ್ವಾಮಿಗಳ 267ನೇ ಅವತಾರ ಜಯಂತಿ ಮಹೋತ್ಸವ ಶ್ರೀ ಚಿದಂಬರ ಸೇವಾ ಸಮಿತಿ ಆಶ್ರಯದಲ್ಲಿ ನವ್ಹೆಂಬರ 10 ಸೋಮವಾರದಂದು ಅಥಣಿಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.
ಮುಂಜಾನೆ 5.30ಕ್ಕೆ ಕಾಕಡಾರತಿ, 5.45ರಿಂದ 6.45 ರವರೆಗೆ ಶ್ರೀ ಚಿದಂಬರೇಶ್ವರ ನಾಮ ಸ್ನರಣೆ, 7 ರಿಂದ 10 30 ರವರೆಗೆ ರುದ್ರಾಭಿಷೇಕ, 10.45 ರಿಂದ11.45 ರವರೆಗೆ ವಾದಿರಾಜ ಜಂಬಗಿ ಇವರಿಂದ ಕೀರ್ತನೆ, 12 ಗಂಟೆಗೆ ಜನ್ಮೋತ್ಸವ ಸಮಾರಂಭ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನೆರವೇರುವುದು. ಸಂಜೆ 7 ಗಂಟೆಗೆ ಶ್ರೀ ರಾಮದೇವರ ಹಾಗೂ ಶ್ರೀ ಶಿವ ಚಿದಂಬರ ಮಹಾಸ್ವಾಮಿಗಳವರ ಕಾರ್ತಿಕೋತ್ಸವ, ಭಜನೆ, ಸಂಗೀತ ಸೇವೆ, ಮಂತ್ರ ಪುಷ್ಪ, ಮಹಾ ಮಂಗಳಾರತಿಯೊಂದಿಗೆ ಜಯಂತೋತ್ಸವ ಮುಕ್ತಾಯಗೊಳ್ಳಲಿದೆ.
ಈ ಕಾರ್ಯಕ್ರಮಗಳ ಮೊದಲ ದಿನ ನವ್ಹೆಂಬರ 9 ಭಾನುವಾರ ಸಂಜೆ 6 ಗಂಟೆಗೆ ಶ್ರೀ ವಿಠ್ಠಲ ಮಂದಿರದಿಂದ ಕರಡಿ ಮಜಲು, ಭಜನಾ ಮಂಡಳಿಗಳ ಭಜನೆ, ಸುಮಂಗಲೆಯರ ಆರತಿಯೊಂದಿಗೆ ಶ್ರೀ ಶಿವ ಚಿದಂಬರ ಮಹಾ ಸ್ವಾಮಿಗಳ ಭಾವ ಚಿತ್ರವಿರುವ ಪಲ್ಲಕ್ಕಿ ಮೆರವಣಿಗೆ ಶ್ರೀರಾಮ ಮಂದಿರಕ್ಕೆ ಆಗಮಿಸಿ ಸಂಜೆ 7 ಗಂಟೆಗೆ ಅಲಂಕಾರ, ವಿಪ್ರರಿಂದ ವೇದಘೋಷಣೆ, ಸಕಲ ಪೂಜೆಯೊಂದಿಗೆ ಭಾವಚಿತ್ರವನ್ನು ಭಕ್ತರ ಸಮ್ಮುಖದಲ್ಲಿ ಪ್ರತಿಷ್ಢಾಪಿಸಲಾಗುವುದು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 