ಇಂದು ಬಲ್ದೋಟ ಅತಿಕ್ರಮಣ ಬಸಾಪುರ ಕೆರೆ ಉಳಿಸಲು ಬೃಹತ್ ಹೋರಾಟ
Today there is a massive struggle to save the Baldota encroachment Basapura lake
ಲೋಕದರ್ಶನ ವರದಿ
ಕೊಪ್ಪಳ 04: ಬಲ್ದೋಟ ಎಐಎಸ್‌ಎಲ್ ಅತಿಕ್ರಮಣದಿಂದ ಬಸಾಪುರ ಕೆರೆ ಸುಮಾರು 44 35 ಎಕರೆಯನ್ನು ಕೆರೆ ಒತ್ತು ವರಿ ಜಮೀನನ್ನು ಬಿಡಿಸಲು ಜನ ಮತ್ತು ಜಾನುವಾರು ಗಳು ನೀರು ಕುಡಿಯಲು ಮುಕ್ತ ಗೊಳಿಸಲು ಒತ್ತಾಯಿಸಿ ನಾಳೆ ಮೇ 5 ರ ಮಠಳವಾರ ದಂದು ಬೃಹತ್ ಪ್ರತಿಭಟನೆ ಮತ್ತು ಹೋರಾಟ ನಡೆಯಲಿದೆ ಎಂದು ರೈತ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಭೀಮಸೇನ್ ಕಲಿಕೇರಿ ತಿಳಿಸಿದ್ದಾರೆ, ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಈ ಕುರಿತು ತಮ್ಮ ನಿರ್ಧಾರ ಪ್ರಕಟಿಸಿದರು ,ಸರ್ಕಾರ ಕೂಡಲೇ ನಗರದ ಸುಮಾರು ಒಂದುವರೆ ಲಕ್ಷ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಲದೋಟ ಬಿ ಎಸ್ ಪಿ ಎಲ್ ಕಾರ್ಖಾನೆಯ 54,000 ಕೋಟಿ ಹೂಡಿಕೆಯ ವಿಸ್ತೀರ್ಣ ರದ್ದು ಮಾಡಬೇಕು ಹಾಗೂ 2011 ರಿಂದ ನಡೆಯುತ್ತಿರುವ ಎಂ ಎಸ್ ಪಿ ಎಲ್ ಪೆಲ್ಲೆಟ್ ಘಟಕ ಕೂಡಲೇ ತೆಗಿತಗೊಳಿಸಬೇಕು ಅರ್ಧದಷ್ಟು ನಗರ ಜನರ ಜೀವ ಕಾಪಾಡಲು ಇದನ್ನು ಕೂಡಲೇ ಬಂದು ಮಾಡಬೇಕು ಎಂದು ಒತ್ತಾಯಿಸಿದರು, ಮಂಗಳವಾರದಂದು ಕೆರೆ ಉಳಿಸಿ ಹೋರಾಟದಲ್ಲಿ ಸಾವಿರಾರು ಕುರಿ ಜಾನುವಾರು ಸಹಿತ ನೀರು ಕುಡಿಯಲು ನಡೆಸುವ ಹೋರಾಟ ಯಶಸ್ವಿಗೆ ವಿವಿಧ ಸಂಘಟನೆಗಳು ಸಹಕಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ್ ಕಲಿಕೇರಿ ಮನವಿ ಮಾಡಿಕೊಂಡರು, ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮೂಕಪ್ಪ ಏನ್ ಮೇಸ್ತ್ರಿ ,ತಿಪ್ಪೇಸ್ವಾಮಿ ಹಿರೇಮಠ, ಶೇಕಪ್ಪ ಮೈನಹಳ್ಳಿ, ಯಮನೂರ್ಪ ಹಾಲಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 