ಇಂದು ಬೈಲಹೊಂಗಲ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ
Today is the eighth Kannada literary conference in Bailhongal taluk
ಬೈಲಹೊಂಗಲ 05: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಜನೇವರಿ 6 ರಂದು ಬೈಲಹೊಂಗಲ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಪ್ರೊ. ಕೆ.ಎಸ್.ಕೌಜಲಗಿ ಆಯ್ಕೆಯಾಗಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದು ನೇಗಿನಹಾಳ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆ 7.30ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ರೋಹಿಣಿ ಬಾ. ಪಾಟೀಲ, ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಶ್ರೀಶೈಲ ಮೆಟಗುಡ್ಡ, ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾದೇವಿ ಕೋಟಗಿ, ಉಪಾಧ್ಯಕ್ಷ ದೀಪಾ ಬೈಲವಾಡ ಹಾಗೂ ಸರ್ವ ಸದಸ್ಯರು ಮೆರವಣಿಗೆಯನ್ನು ಉದ್ಘಾಟಿಸುವರು. ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರರಾದ ಹನಮಂತ ಶಿರಹಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೀವ ಜುನ್ನೂರ, ಪುರಸಭೆಯ ಮುಖ್ಯಾಧಿಕಾರಿಗಳಾದ ವೀರೇಶ ಹಸಬಿ, ಡಿವೈಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯರಾದ ವಿದ್ಯಾವತಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಸಿ.ವೈ. ತುಬಾಕಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಡಿ. ಹಿರೇಮಠ, ಪಿ.ಎಂ.ಪೋಷಣ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಸ್. ಕುಡವಕ್ಕಲಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೆಳಿಗ್ಗೆ 10.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ತೋಂಟದಾರ್ಯ ಶಾಖಾ ಮಠ, ಮುಂಡರಗಿ ಹಾಗೂ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು, ಬೈಲಹೊಂಗಲ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು ಹಾಗೂ ನೇಗಿನಹಾಳ ಗ್ರಾಮದ ಸಿದ್ದಾರೂಢಮಠದ ಅದ್ವೈತಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಕಿತ್ತೂರು ಶಾಸಕರಾದ ಬಾಬಾಸಾಹೇಬ ದೇ. ಪಾಟೀಲ ಅಧ್ಯಕ್ಷತೆ ವಹಿಸುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಶಾಂತಿನಾಥ ದಿಬ್ಬದ ಅವರು ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅವರಿಗೆ ಧ್ವಜ ಹಸ್ತಾಂತರಿಸುವರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಖ್ಯಾತ ಚಲನಚಿತ್ರ ನಟ-ನಿರ್ಮಾಪಕ ಶಿವರಂಜನ ಬೋಳಣ್ಣವರ, ದೂರದರ್ಶನ-ಆಕಾಶವಾಣಿ ಮತ್ತು ರಂಗಭೂಮಿ ಕಲಾವಿದ ಸಿ.ಕೆ ಮೆಕ್ಕೇದ, ಹಿರಿಯ ಪತ್ರಕರ್ತ ಈಶ್ವರ ಹೋಟಿ, ತಾಲೂಕಾ ಪತ್ರಕರ್ತರ ಸಂಘ ಅಧ್ಯಕ್ಷ ಮಹಾಂತೇಶ ಸಿ.ತುರಮರಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಕಸಾಪ ಮಾರ್ಗದರ್ಶನ ಮಂಡಳಿ ಸದಸ್ಯರಾದ ಎಸ್.ಡಿ. ಗಂಗಣ್ಣವರ, ಮಹಾರುದ್ರ್ಪ ನಂದೆನ್ನವರ, ಗ್ರಾಪಂ ಅಧ್ಯಕ್ಷ ಮಹಾದೇವಿ ಕೋಟಗಿ, ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮಡಿವಾಳಪ್ಪ ಕಲ್ಲೋಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮಧ್ಯಾಹ್ನ 12.30 ಕ್ಕೆ ನಡೆಯುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಪ್ರೊ. ಸಿ.ವಿ ಜ್ಯೋತಿ ವಹಿಸುವರು. ಕ.ರಾ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಡಾ. ಗಜಾನಂದ ಸೊಗಲನ್ನವರ ಆಶಯ ನುಡಿಗಳನ್ನಾಡುವರು. ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಸಾಹಿತ್ಯ ಕ್ಷೇತ್ರಕ್ಕೆ ಬೈಲಹೊಂಗಲ ತಾಲೂಕಿನ ಕೊಡುಗೆ ಎಂಬ ವಿಷಯದ ಬಗ್ಗೆ ಹಾಗೂ ಬೆಳಗಾವಿ ಮಹಾಂತೇಶ ನಗರ ರಹವಾಸಿಗಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಮತಿ ನಿರ್ಮಲಾ ಬಟ್ಟಲ ಸ್ವಾತಂತ್ರ್ಯ ಹೋರಾಟದಲ್ಲಿ ಬೈಲಹೊಂಗಲ ತಾಲೂಕಿನ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಕ.ರಾ.ಸ.ನೌ.ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಕುಡಸೋಮಣ್ಣವರ, ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಶರೀಫಸಾಹೇಬ ನದಾಫ, ಬೆಳಗಾವಿ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್. ಎಸ್. ಕಿವಡಸಣ್ಣವರ ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಎಂ. ಆರ್ ಮೆಳವಂಕಿ ಕಸಾಪ ಗೌರವ ಕಾರ್ಯದರ್ಶಿ ಡಾ. ಪ್ರಕಾಶ ಮೆಳವಂಕಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನೇಸರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಫಕೀರನಾಯ್ಕ ಗಡ್ಡಿಗೌಡರ ವಹಿಸುವರು. ಸಾಹಿತಿ ಡಾ. ಮಲ್ಲಿಕಾರ್ಜುನ ಛಬ್ಬಿ ಆಶಯ ನುಡಿಗಳನ್ನಾಡುವರು. ಮಕ್ಕಳ ಸಾಹಿತಿ ರಾಜೇಂದ್ರಸ್ವಾಮಿ ಹಿರೇಮಠ, ಮುಖ್ಯಶಿಕ್ಷಕ ಡಾ. ಪ್ರಕಾಶ ಭೂತಾಳಿ, ರವಿ ಮೆಳವಂಕಿ, ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಫಕೀರಸ್ವಾಮಿಮಠ, ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಡಿವಾಳಪ್ಪ ಆರ್. ಬೋವಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷೆ ಮೀನಾಕ್ಷಿ ಎಸ್. ಸುತಗಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಬೀಸಾಬ್ ಇ. ಖುದ್ದುನವರ, ಮಹಾಂತೇಶ ಎಸ್. ಮುದಕನಗೌಡರ, ಮಹಾಂತೇಶ ಬಸಪ್ಪ ಬಾಳಿಗಟ್ಟಿ, ಶಿಂಗಮ್ಮ ಕೋರಿಮಠ, ಸಾವಿತ್ರಿ ಹೊತ್ತಿಗಿಮಠ, ನಾಗರಾಜ ಗೋವಿ, ಸಿದ್ದು ನೇಸರಗಿ, ಚಂದ್ರಶೇಖರ ಕೊಪ್ಪದ, ಆನಂದ ಮಾಲಗಿತ್ತಿಮಠ, ಎಸ್.ಎಲ್. ತಲ್ಲೂರ, ವಿಜಯಲಕ್ಷ್ಮೀ ದೇಸಾಯಿ, ಗೋದಾವರಿ ಪಾಟೀಲ, ಉಮೇಶ ತಿಗಡಿ , ಶ್ರೇಯಾ ಧರೆಪ್ಪನವರ, ಸವಿತಾ ಪೂಜೇರಿ, ಸುರೇಶ ಇಂಚಲ, ಚಂದ್ರಕಾಂತ ಸಣ್ಣನಾಯ್ಕರ, ಅಮಜವ್ವ ಬೋವಿ, ಸಂತೋಷ ಯಕ್ಕುಂಡಿ, ಪುಂಡಲೀಕ ನಿಕ್ಕಮ್ಮನವರ, ಪ್ರತೀಕ್ಷಾ ಹುದ್ದಾರ, ಶ್ವೇತಾ ಕಾಡನ್ನವರ, ಐ.ಎಸ್ ಅಂಗಡಿ, ಗಿರಿಜಾ ಬಿಳಮರಿ, ವಿನೋದಾ ಪರಮನಾಯ್ಕರ ಕವನ ವಾಚಿಲಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ನಡೆಯುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಅ.ಭಾ.ಶ.ಸಾ. ಪರಿಷತ್ತಿನ ಮಹಿಳಾ ಘಟಕದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪ್ರೇಮಕ್ಕ ಅಂಗಡಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎಸ್. ಜೋಡಗೇರಿ, ಸಮಾಜ ಸೇವಕ ರಫೀಕ ಬಡೇಘರ್, ನಿವೃತ್ತ ಮುಖ್ಯೋಪಾದ್ಯಾಯ ವೈ.ಎಲ್ ತಳವಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಾಸ್ತಿಹೊಳಿ, ದಂತ ವೈದ್ಯ ಡಾ. ಜಗದೀಶ ಹಾರೂಗೊಪ್ಪ, ವಕೀಲರಾದ ಬಸವಕುಮಾರ ಲಕ್ಕನಗೌಡರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಾ. ಸುಭಾಷ ನೇಗಿನಹಾಳ (ವೈದ್ಯಕೀಯ), ಪಿ.ಡಿ ದಿವಾಣದ (ಶಿಕ್ಷಣ), ಶ್ರೀಮತಿ ನಾಗಲಾಂಬಿಕಾ ದುಂ. ಮೆಳವಂಕಿ (ಶಿಕ್ಷಣ), ಬಾಬು ಕಟ್ಟಿ (ಸಹಕಾರ), ಡಾ. ಜಗದೀಶ ಹಲಸಗಿ (ವೈದ್ಯಕೀಯ), ಸಿದ್ದಾರ್ಥ ಮರೇದ (ಉದ್ದಿಮೆ), ಈರ್ಪ ಅಂಗಡಿ (ಕೃಷಿ), ಪ್ರಭು ಮರಿತಮ್ಮನವರ (ಕೃಷಿ), ಗದಿಗೆಯ್ಯ ವಿ ಹಿರೇಮಠ (ರಂಗಭೂಮಿ), ಶ್ರೀಮತಿ ಶೋಭಾ ಗಾಣಗಿ (ಆರೋಗ)್ಯ, ಸುಂದರಾಬಾಯಿ ನಿಲಜಗಿ (ಆರೋಗ್ಯ), ಶ್ರೀಮತಿ ಪ್ರೇಮಾ ಬಬಲಿ (ಆರೋಗ್ಯ), ಡಾ. ಬಾಬು ನಾಯ್ಕ (ವೈದ್ಯಕೀಯ), ಸದೆಪ್ಪ ಗರಗದ (ಪತ್ರಿಕೋದ್ಯಮ), ನೂರುದ್ದೀನ್ ಗೋರೆಖಾನ್ (ಸಂಗೀತ), ವೀರ್ಪ ಕೃಷ್ಣಾ ಪತ್ತಾರ (ಭಜನಾ ಕಲೆ), ಧರೆಪ್ಪ ಅರ್ಜುನ ಪಾಟೀಲ (ಕ್ರೀಡೆ), ಭರಮಪ್ಪ ಸತ್ಯನ್ನವರ (ಜಾನಪದ ಕಲೆ), ಭರತ ಗಂಟಿ (ದೇಶಸೇವೆ), ಶ್ರೀಮತಿ ಜಾನಕಿ ಭದ್ರನ್ನವರ
(ಸಾಹಿತ್ಯ), ಡಾ. ಚಂದ್ರಶೇಖರ ಗಣಾಚಾರಿ (ಶಿಕ್ಷಣ), ಬಸವರಾಜ ಬಸಪ್ಪ ಕುಡಸೋಮಣ್ಣವರ (ಕ್ರೀಡೆ), ಚನ್ನಪ್ಪ ಬೆಳಗಾವಿ (ಬಯಲಾಟ), ದಸ್ತಗೀರ ಜಮಾದಾರ (ಉದ್ದಿಮೆ), ರಾಚಯ್ಯ ಬನ್ನೂರ (ಶಿಕ್ಷಣ), ಈರ್ಪ ಪಟ್ಟೇದ (ಸಮಾಜ ಸೇವೆ), ಪ್ರಕಾಶ ಮೂಗಿ (ಸಮಾಜ ಸೇವೆ), ಶ್ರೀಮತಿ ಲಕ್ಷ್ಮೀ ಲೋಕೂರ (ಸಾವಯವ ಕೃಷಿ), ಶ್ರೀಮತಿ ಶಬಾನಾ ಅಣ್ಣಿಗೇರಿ (ಸಾಹಿತ್ಯ), ಮಹಾಂತೇಶ ಪತ್ತಾರ (ಕುಶಲಕಲೆ), ಕಲ್ಲಪ್ಪ ನೇಗಿನಹಾಳ (ಕೃಷಿ), ಮಕ್ತುಂಹುಸೇನ ಗೋರೆಖಾನ (ಕಲ), ಆನಂದ ವಾಲಿ (ಕೃಷಿ), ಡಾ. ಎಂ.ಬಿ ತಲ್ಲೂರ (ಶಿಕ್ಷಣ), ಶಿವಾನಂದ ಕೋಟಗಿ (ಸಹಕಾರ), ಮಹೇಶ ಇಟ್ನಾಳ (ಚಿತ್ರಕಲೆ), ಸಿ.ವಿ ಕಟ್ಟಿಮನಿ (ಸಾಹಿತ್ಯ), ಎ.ಬಿ ಉಪ್ಪಾರ (ಚಿತ್ರಕಲೆ), ಅಲ್ಲಾಭಕ್ಷ ಕುಡಚಿ (ಕಲೆ), ಮಾರುತಿ ಕೆಳಗೇರಿ ( ಸಮಾಜ ಸೇವೆ), ಈರಣ್ಣ ಹೊಂಡಪ್ಪನವರ (ಕ್ರೀಡೆ), ಗೂಡುಸಾಬ ಬಸ್ತವಾಡ (ಕೃಷಿ), ಮಲ್ಲಿಕಾರ್ಜುನ ಹುಂಬಿ (ಕೃಷಿ), ದೇವೇಂದ್ರ್ಪ ಸಂಗಮಿ (ಕೃಷಿ) ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ವಿರೂಪಾಕ್ಷ ವಾಲಿ, ಚಂದ್ರಯ್ಯ ಯರಗಟ್ಟಿಮಠ, ಉದಯ ಕೊಳೇಕರ, ಬಸವರಾಜ ಕಲಾದಗಿ, ರವಿಕುಮಾರ ಹುಲಕುಂದ, ಸಿ.ವೈ ಮೆಣಸಿನಕಾಯಿ, ಶರೀಪ್ ನದಾಫ, ಕುಮಾರ ರೇಷ್ಮಿ, ಮಹಾಂತೇಶ ರಾಜಗೋಳಿ, ಮಹಾಂತೇಶ ರೇಷ್ಮಿ, ಯೂನೂಸ ಬಡೇಘರ, ಪ್ರಕಾಶ ಬೆಳಗಾವಿ, ಮಂಜುನಾಥ ಜ್ಯೋತಿ, ಶಿವಾನಂದ ಮೆಟ್ಯಾಲ, ಚಂದ್ರಕಾಂತ ಹೈಬತ್ತಿ, ಗಂಗಪ್ಪ ಗುಜನಟ್ಟಿ, ಎಂ.ಬಿ ಚೋಬಾರಿ, ಪ್ರಕಾಶ ಕೆಳಗಿನಮನಿ, ಭೀಮಸೇನ ಕಮ್ಮಾರ, ಮಹಾಂತೇಶ ಹಿರೇಮಠ, ಕಿಶನ್ ರಾಯಪ್ಪಗೋಳ, ಈರನಗೌಡ ಶೀಲವಂತರ, ಶಾನೂಲ ಮತ್ತೆಖಾನ, ಚೈತನ್ ಹಿರೇಮಠ, ಸೋಮಲಿಂಗ ಬೋವಿ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು.
ಸಾಯಂಕಾಲ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ವಹಿಸುವರು. ಪ್ರೊ. ಕೆ.ಎಸ್. ಕೌಜಲಗಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ದೇ. ಪಾಟೀಲ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಕಾಶೀನಾಥ ಇನಾಮದಾರ, ಸಹ ಕಾರ್ಯದರ್ಶಿ ಪ್ರಕಾಶ ತಿಗಡಿ, ಸಂಘಟನಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಕಸಾಪ ಮಾಜಿ ತಾಲೂಕಾಧ್ಯಕ್ಷರಾದ ಗೌರಾದೇವಿ ತಾಳಿಕೋಟಿಮಠ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಮಲ್ಲಿಕಾರ್ಜುನ ಕೋಳಿ, ನೇಗಿನಹಾಳ ಬಿಡಿಐ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ. ಎಫ್. ಮುರಗೋಡ, ಹೊಳಿಹೊಸೂರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮನಗೌಡ ಮುದಕನಗೌಡರ, ಬಿಡಿಐ ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಕಾಂತ ಮೆಳವಂಕಿ,
ಸಿಆರ್‌ಪಿ ಮಾಲತೇಶ ಜಕಲಿ, ನೇಗಿನಹಾಳ ಸ.ಹಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಆರ್.ಆರ್. ತೋರಣಗಟ್ಟಿ, ಹೊಳಿಹೊಸೂರ ಸ.ಹಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಪಿ.ಬಿ ಬೋಳೆತ್ತಿನ, ಕೇಸರಕೊಪ್ಪದ ಸರಕಾರಿ ಪ್ರೌಢಶಾಲೆೆಯ ಪ್ರಧಾನ ಗುರುಗಳಾದ ವಿ.ಎಫ್ ಮರಿತಮ್ಮನವರ, ಹೊಸ ಕುರಗುಂದ ಸ.ಹಿ.ಪ್ರಾ ಶಾಲೆಯ ಪ್ರಧಾನ ಗುರುಗಳಾದ ಶ್ರೀಮತಿ ಜಿ.ಎಫ್. ಮಡಿವಾಳರ, ಹಳೇ ಕುರಗುಂದ ಸ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಕುಮಾರಿ ಎಸ್.ಎಫ್ ಚನ್ನಪ್ಪಗೌಡರ, ನೇಗಿನಹಾಳದ ಸ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಪಿ.ಎ ಯಲಿಗಾರ, ಸ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಎಫ್.ಬಿ ಜುಂಜರಿ, ಹೊಳಿಹೊಸೂರ ಸ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಜಿ.ಆರ್. ಕುಲಕರ್ಣಿ, ಸ.ಉ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಎಂ.ಜಿ ಬಾಗೇವಾಡಿ, ಸ.ಉ.ಕಿ.ಪ್ರಾ.ಮಾ ಶಾಲೆಯ ಪ್ರಧಾನ ಗುರುಗಳಾದ ಎ.ಬಿ ಚೌರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಾಯಂಕಾಲ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕನ್ನಡ ನುಡಿ ಹಬ್ಬಕ್ಕೆ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಎಲ್ಲ ಗ್ರಾಮ ಪಂಚಾಯತಿ ಸರ್ವಸದಸ್ಯರು, ತಾಲೂಕಿನ ಎಲ್ಲ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕಿನ ಎಲ್ಲ ಮಾಧ್ಯಮ ಪ್ರತಿನಿಧಿಗಳು, ಪರಿಷತ್ತಿನ ಸದಸ್ಯರು ಹಾಗೂ ನಾಡಿನ ಎಲ್ಲ ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 