ಇಂದು ಬಿಸನಾಳ ಬನ್ನೆಮ್ಮದೇವಿಗೆ ಸಂಭ್ರಮದ ಜಾತ್ರೆ
Today is a festive fair for Bisana's Bannemmadevi.
ಲೋಕದರ್ಶನ ವರದಿ
ಮಹಾಲಿಂಗಪುರ 30: ಸಮೀಪದ ಬಿಸನಾಳ ಗ್ರಾಮದಲ್ಲಿ ಆರಾಧ್ಯ ಧೈವ ಬನ್ನೆಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಮಾರುತೇಶ್ವರ ಓಕುಳಿ ಮೇ.1ರಂದು ವಿಜೃಂಭನೆಯಿಂದ ಜರುಗಲಿದೆ. ಜಾತ್ರೆ ನಿಮಿತ್ತ ಈಗಾಗಲೇ ಏ.28 ಮತ್ತು 29ರಂದು 1 ನಿಮಿಷದ ಹೋರಿಗಳ ಗಾಡಾಗಾಡಿ ಸ್ಪರ್ಧೆ, 1 ಹಾಲಲ್ಲಿನ ಹೋರಿಗಳ ಸ್ಪರ್ಧೆ ಜರುಗಿವೆ. ಏ.30 ರಂದು ಓಕುಳಿಯ ಕೊಂಡಪೂಜೆ ಜರುಗಿತು. ಮೇ.1ರಂದು ಶುಕ್ರವಾರ ಬೆಳಗ್ಗೆ ಬನ್ನೆಮ್ಮದೇವಿ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4 ಗಂಟೆಗೆ ಓಕುಳಿ, ನಂತರ ಕುಸ್ತಿ ಸ್ಪರ್ಧೆ, 6 ಗಂಟೆಗೆ ಬನ್ನೆಮ್ಮದೇವಿ ರಥೋತ್ಸವ ಜರುಗುವುದು. ರಥೋತ್ಸವದ ಮುಂದೆ ಕರಡಿಮಜಲು, ಡೊಳ್ಳಿನ ಬಡಿತ ಸೇರಿದಂತೆ ನಾನಾ ವಾದ್ಯಮೇಳ ನಡೆಯಲಿದೆ. ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ಊರಿನ ಮತ್ತು ಜಾತ್ರೆಯ ವಿಹಂಗಮ ನೋಟ ಎಲ್‌ಇಡಿ ಪರದೆಯಲ್ಲಿ ಪ್ರದರ್ಶನಗೊಳ್ಳಲಿದೆ. ರಾತ್ರಿ 10 ಗಂಟೆಗೆ ಧರ್ಮದ ನುಡಿ, ಕ್ರಾಂತಿಯ ಕಿಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೇ. 2ರಂದು ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ ನಡೆಯಲಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಶಿರೋಳ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 