ಇಂದು ವಿಶ್ವ ಆದಿವಾಸಿ ದಿನಾಚರಣೆ : ಹೆಚ್‌.ಪಿ.ಶಿಕಾರಿ ರಾಮು

ಇಂದು ವಿಶ್ವ ಆದಿವಾಸಿ ದಿನಾಚರಣೆ : ಹೆಚ್‌.ಪಿ.ಶಿಕಾರಿ ರಾಮು Today is World Adivasi Day : HP Shikari Ramu

ಇಂದು ವಿಶ್ವ ಆದಿವಾಸಿ ದಿನಾಚರಣೆ : ಹೆಚ್‌.ಪಿ.ಶಿಕಾರಿ ರಾಮು 

ಕಂಪ್ಲಿ 10: ಮೂಲ ಆದಿವಾಸಿ ಬುಡಕಟ್ಟುಗಳ ಬಹು ಬೇಡಿಕೆಗಳನ್ನು ಈಡೇಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂಬ ಹಿನ್ನಲೆ ಸಮಸ್ಯೆಗಳನ್ನು ಈಡೇರಿಸಬೇಕೆಂದು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತುವತಿಯಿಂದ ಆ.11ರಂದು ಮನವಿ ಪತ್ರ ಸಲ್ಲಿಸುವ ಮೂಲಕ ವಿಶ್ವ ಆದಿವಾಸಿ ದಿನಾಚರಣೆ ಆಚರಿಸಲಾಗುವುದು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತುನ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್‌.ಪಿ.ಶಿಕಾರಿ ರಾಮು ತಿಳಿಸಿದ್ದಾರೆ. 

ಅವರು ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, 31ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ವಿಶ್ವಸಂಸ್ಥೆ ಎಲ್ಲಾ ತಮ್ಮ ಸಮುದಾಯಗಳನ್ನು ಸಬಲೀಕರಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಅಂತರಾಷ್ಟ್ರೀಯ ಸ್ಥಳೀಯ ಜನರ ನಿಲುವು ಮತ್ತು ಆದಿವಾಸಿ ಜನರ ಎಲ್ಲಾ ಹಕ್ಕುಗಳನ್ನು ರಕ್ಷಿಸುವ ಭವಿಷ್ಯ ರೂಪಿಸುವದಾಗಿದೆ. ಪ್ರತಿ ವರ್ಷದಲ್ಲಿ ಆಗಸ್ಟ್‌ 9ರಂದು ವಿಶ್ವ ಆದಿವಾಸಿ ದಿನಾಚರಣೆ ಮಾಡಿಕೊಂಡು ಬರಲಾಗಿದೆ. ಆದರೆ, ಈ ಸಲ ಆಗಸ್ಟ್‌ 9 ರಂದು ಎರಡನೇ ಶನಿವಾರದ ರಜೆ ಇರುವುದರಿಂದ ಇದರ ಬದಲಾಗಿ ಆಗಸ್ಟ್‌ 11 ರಂದು ಕಂಪ್ಲಿ ತಾಲೂಕಿನಲ್ಲಿರುವ ದಂಡಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವ ಮೂಲಕ ದಿನಾಚರಣೆ ಆಚರಿಸಲಾಗುವುದು. ಮೂಲ ಆದಿವಾಸಿ ಬುಡಕಟ್ಟು ಸಮುದಾಯದವರು ಭಾಗವಹಿಸಿ ವಿಶ್ವ ಆದಿವಾಸಿ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.