ಲೋಕದರ್ಶನವರದಿ
ಮಹಾಲಿಂಗಪುರ: ಸಮೀಪದ ಸ್ಯದಾಪೂರ ಗ್ರಾಮದಲ್ಲಿ ಇಂದು ದಿ.17 ರಂದು ಅಮೋಘಸಿದ್ದೇಶ್ವರ ಜಾತ್ರೆ ಜರುಗಲಿದ್ದು ತನ್ನಿಮಿತ್ಯ ಇಂದು ಬೆಳಿಗ್ಗೆ 5 ಕ್ಕೆ ರುದ್ರಾಭಿಷೇಕ ಮುಂಜಾನೆ 10 ಗಂಟೆಗೆ ಶ್ರಿ ಶಿವಲಿಂಗೇಶ್ವರ,ಶ್ರೀ ಮಾರುತಿದೇವರ,ಶ್ರೀ ಯಲ್ಲಮ್ಮದೇವಿಯ ಪಲ್ಲಕ್ಕಿ,ನಂದಿಕೋಲ,ಕರಡಿಮೇಳ,ಹಾಗೂ ಡೊಳ್ಳಿನ ವಾಲಗದೊಂದಿಗೆ ಸ್ಯದಾಪೂರ ಗ್ರಾಮದಿಂದ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸುವವು.
ಪವಾಡ ಪುರುಷರ ಬೆಟ್ಟಿ ಕಾರ್ಯಕ್ರಮ: ಮಧ್ಯಾಹ್ನ 3 ಕ್ಕೆ ಸೈದಾಪೂರಕ್ಕೆ ಆಗಮಿಸುವ ಪವಾಡಪುರುಷರಾದ ನಾಗರಾಳ ಗ್ರಾಮದ ಗುರು ಸೋಮಲಿಂಗೇಶ್ವರ ಪಲ್ಲಕ್ಕಿ,ಅಮೋಘಸಿದ್ದೇಶ್ವರ ಪಲ್ಲಕ್ಕಿ,ಕೆಸರಗೊಪ್ಪ ಶ್ರೀ ಮಾಧುಲಿಂಗನ ಪಲ್ಲಕ್ಕಿ,ನಾಗನೂರ ಗ್ರಾಮದ ಕರಣಿಮಲಕಾರಸಿದ್ದ ಪಲ್ಲಕ್ಕಿ,ಹಾರೂಗೇರಿಯ ಅರಣ್ಯ ಸಿದ್ದೇಶ್ವರ ಪಲ್ಲಕ್ಕಿ ಗಳನ್ನು ಮುತ್ತೈದೆಯರ ಆರತಿ ಹಾಗೂ ಸಕಲ ವಾದ್ಯಗಳೊಂದಿಗೆ ಬರಮಾಡಿಕೊಳ್ಳುವದು.ನಂತರ ವಾಲಗ ಗರ್ಜನೆ ಹಾಗು ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ನಂತರ ಮಹಾಪ್ರಸಾದ ಜರುಗುವದು.
ರಾತ್ರಿ 10-30 ಕ್ಕೆ ಗ್ರಾಮದ ಸುತ್ತಮುತ್ತಲಿನ ಕಲಾವಿದರಿಂದ ಸುಪ್ರಸಿದ್ದ ಡೊಳ್ಳಿನ ಪದಗಳು ಇರುತ್ತವೆ.ನಾಳೆ ದಿ.18 ರಂದು ಮುಂಜಾನೆ ಮಹಾಮಂಗಳಾರತಿಯೊಂದಿಗೆ ಭಂಡಾರ ಒಡೆಯುವ ಕಾರ್ಯಕ್ರಮವಿದ್ದು ಸಕಲ ಸದ್ಭಕ್ತರು ಆಗಮಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಸ್ಯದಾಪೂರ ಶ್ರೀ ಅಮೋಘಸಿದ್ದೇಶ್ವರ ಸದ್ಭಕ್ರ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ