ಇಂದು ಸ್ವದೇಶಿ ಚಳುವಳಿ ತತ್ವಗಳನ್ನು ಪಾಲಿಸುವ ಅಗತ್ಯವಿದೆ: ಸಂತೋಷ್ ದಾಸ್
Today, there is a need to follow the principles of the Swadeshi movement: Santosh Das
ಶಿಗ್ಗಾವಿ 14: ಇಂದು ಭಾರತೀಯ ಉತ್ಪನ್ನಗಳನ್ನು ಖರೀದಿಸುವುದು ಕೂಡ ದೇಶ ಸೇವೆಯ ಒಂದು ರೂಪವಾಗಿದೆ. ಸ್ವದೇಶಿ ವಸ್ತುಗಳನ್ನು ಬಳಸಿ, ದೇಶದ ಆರ್ಥಿಕತೆಯನ್ನು ಬಲಪಡಿಸೋಣ ಎಂದು ಫಿನಿಕ್ಸ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಚಾರ್ಯ ಸಂತೋಷ್ ದಾಸ್ ಹೇಳಿದರು.
ಪಟ್ಟಣದ ಫಿನಿಕ್ಸ್ ಇಂಟರ್ನ್ಯಾಷನಲ್ ಶಾಲೆ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡ ಭವ್ಯ ತ್ರಿವರ್ಣ ಧ್ವಜಗಳ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಅವರು, ತಿರಂಗಾ ಹಾರಿಸುವಾಗ ನಾವು ಸ್ವಾತಂತ್ರ್ಯ ಹೋರಾಟಗಾರರ ಶೌರ್ಯವನ್ನು ಮಾತ್ರ ನೆನಪಿಸಿಕೊಳ್ಳುವುದಲ್ಲ, ನಮ್ಮ ದೇಶಕ್ಕೆ ಸೇವೆ ಮಾಡುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳುತ್ತೇವೆ ಅಲ್ಲದೆ, ಸ್ವದೇಶಿ ಚಳುವಳಿಯ ತತ್ವಗಳನ್ನು ಇಂದಿನ ಕಾಲದಲ್ಲಿಯೂ ಪಾಲಿಸುವ ಅಗತ್ಯತೆ ಇದೆ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಮತ್ತು ಭಾರತೀಯರು ವಿದೇಶಿ ಉತ್ಪನ್ನಗಳ ಬದಲು ಭಾರತೀಯ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವ ಉದ್ದೇಶವನ್ನ ಈ ಯಾತ್ರೆಯ ಹೊಂದಿದೆ ಎಂದರು.
ಶಾಲೆಯ ಪಿ.ಆರ್.ಓ ಶಶಾಂಕ ಕೌಜಲಗಿ ಮಾತನಾಡಿ, ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಅದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸುವ ದಿನವಾಗಿದೆ ಎಂದರು.
ಪಟ್ಟಣದ ಪೋಷ್ಟ್ ಆಪೀಸ್‌ನಿಂದ ಆರಂಭವಾದ ತ್ರಿವರ್ಣ ಧ್ವಜಗಳ ತಿರಂಗಾ ಯಾತ್ರೆಯು ಪ್ರಮುಖ ಬೀದಿಗಳನ್ನ ಸಂಚರಿಸಿ ಕಿತ್ತೂರಾಣಿ ಚನ್ನಮ್ಮ ಸರ್ಕಲ್‌ಗೆ ಬಂದು ತಲುಪಿತು.
ಯಾತ್ರೆಯಲ್ಲಿ ವಿದ್ಯಾರ್ಥಿಗಳು ದೇಶಪ್ರೇಮದ ಘೋಷಣೆಗಳನ್ನು ಕೂಗುತ್ತಾ “ಆಗಸ್ಟ್ 15ನ್ನು ಪ್ರತಿಯೊಬ್ಬರೂ ಸಂಭ್ರಮಿಸೋಣ” ಮತ್ತು “ಸ್ವದೇಶಿ ವಸ್ತುಗಳನ್ನು ಬಳಸಿ, ದೇಶದ ಆರ್ಥಿಕತೆಯನ್ನು ಬಲಪಡಿಸೋಣ” ಎಂಬ ಸಂದೇಶಗಳನ್ನು ಫಲಕಗಳ ಮೂಲಕ ಜನತೆಗೆ ಸಂದೇಶ ಸಾರಿದರು, ಯಾತ್ರೆಯಲ್ಲಿ ಫಿನೀಕ್ಸ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 