ಇಂದು ಕಾದಂಬರಿಕಾರ ಭೈರ್ಪರಿಗೆ ನುಡಿನಮನ
Today, a word to the novelist Bhairava
ಲೋಕದರ್ಶನ ವರದಿ
ಇಂದು ಕಾದಂಬರಿಕಾರ ಭೈರ್ಪರಿಗೆ ನುಡಿನಮನ
ಬೆಳಗಾವಿ 12: ನಗರದ ಅಕಾಡಮಿ ಆಫ್ ಕಂಪರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್ ಸಂಘಟನೆಯವರು ಇದೇ ದಿನಾಂಕ 13 ಸೋಮವಾರದಂದು ಸಾಯಂಕಾಲ 5-30 ಕ್ಕೆ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಎ.ಸಿ.ಪಿ.ಆರ್. ಸಭಾಭವನದಲ್ಲಿ “ಖ್ಯಾತ ಕಾದಂಬರಿಕಾರ ದಿ. ಡಾ. ಎಸ್. ಎಲ್. ಭೈರ್ಪ- ನುಡಿನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಲೇಖಕರಾದ ಸರಜು ಕಾಟ್ಕರ್ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಮತ್ತು , ಕರ್ನಾಟಕ ಉತ್ತರ ಪ್ರಾಂತದ ಆರ್.ಎಸ್.ಎಸ್. ಪ್ರಾಂತ ನಿರ್ವಾಹಕರಾದ ರಾಘವೇಂದ್ರಜಿ ಕಾಗವಾಡ ಅವರು ಆಗಮಿಸಲಿದ್ದು ನಿವೃತ್ತ ಉಪನ್ಯಾಸಕರಾದ ಡಾ. ರಾಮಕೃಷ್ಣ ಮರಾಠ ಮತ್ತು ಲೇಖಕ ಗುಂಡೇನಟ್ಟಿ ಮಧುಕರ ನುಡಿನಮನ ಸಲ್ಲಿಸಲಿದ್ದಾರೆ.
ಸಾಹಿತ್ಯಾಸಕ್ತರು, ಭೈರ್ಪ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗೌರವ ಕಾರ್ಯದರ್ಶಿ ಮಾರುತಿ ಝಿರಲಿ ಮತ್ತು ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 