ಇಂದು ಬಡ ವೃದ್ಧ ಮಹಿಳೆಯ ಸುಸಜ್ಜಿತ ಮನೆ ಗ್ರಹ ಪ್ರವೇಶ: ನಿರ್ಮಾಣಕ್ಕೆ ಆರ್ಥಿಕವಾಗಿ ನೆರವಾದ ಸಹಸ್ರಾರ್ಜುನ ಸೇವಾ ಟ್ರಸ್ಟ್
Today, a poor old woman's well-furnished house enters the planet: Sahasrarjuna Seva Trust provided
ಲೋಕದರ್ಶನ ವರದಿ
ಇಂದು ಬಡ ವೃದ್ಧ ಮಹಿಳೆಯ ಸುಸಜ್ಜಿತ ಮನೆ ಗ್ರಹ ಪ್ರವೇಶ:
ನಿರ್ಮಾಣಕ್ಕೆ ಆರ್ಥಿಕವಾಗಿ ನೆರವಾದ ಸಹಸ್ರಾರ್ಜುನ ಸೇವಾ ಟ್ರಸ್ಟ್
ಗದಗ 03:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 32 ನೇ ವಾರ್ಡಿನಲ್ಲಿ ಬರುವ ದಾಸರ ಓಣಿಯ ಅತ್ಯಂತ ಬಡತನದಲ್ಲಿರುವ ಎಸ್ ಎಸ್ ಕೆ ಸಮಾಜದ ವೃದ್ಧ ಮಹಿಳೆಯಾದ ಸುಶೀಲಾಬಾಯಿ ರವೀಂದ್ರಸಾ ಹಬೀಬ ಆರ್ಥಿಕವಾಗಿ ತುಂಬಾ ಮುಗ್ಗಟ್ಟಿನಲ್ಲಿಯು ತಮ್ಮ ಬುದ್ದಿಮಾಂಧ್ಯ ಮಗಳಾದ ಕುಮಾರಿ ದುರ್ಗಾ ರವೀಂದ್ರಸಾ ಹಬೀಬ ರೊಂದಿಗೆ ದಾಸರ ಓಣಿಯಲ್ಲಿ ತಮ್ಮ ಉಪಜೀವನ ಸಾಗಿಸುತ್ತಿರಲು ಅವರು ವಾಸಿಸುವ ಮನೆಯು ತುಂಬಾ ಹಳೆಯದಾಗಿ ಶೀತಿಲಾವಸ್ಥೆಯಿಂದ ಮಳೆಯಿಂದ ಅಪಾಯಕಾರಿಯಾಗಿ ಕೂಡಿರಲು, ಇದನ್ನರಿದ ಗದಗ ಜಿಲ್ಲಾ ಶ್ರೀ ಸಹಸ್ರಾರ್ಜುನ ಸೇವಾ ಟ್ರಸ್ಟ್ ಗದಗ ಇದರ ಅಧ್ಯಕ್ಷರಾದ ವಿನೋದ ಎ. ಭಾಂಡಗೆಉಪಾಧ್ಯಕ್ಷರಾದ ಅಂಬಾಸಾ ಕೆ. ಪವಾರಗೌರವ ಕಾರ್ಯದರ್ಶಿಗಳಾದ ಪರಶುರಾಮ ಜೆ. ಹಬೀಬ ಸಹ ಕಾರ್ಯದರ್ಶಿಗಳಾದ ವಿನಾಯಕ ಪಿ. ಶಿಲ್ಲಿಂಗ್‌ಖಜಾಂಚಿ ಸಂತೋಷ ಎಚ್. ಭಾಂಡಗೆಟ್ರಸ್ಟ್ ನ ಮಾಜೀ ಅಧ್ಯಕ್ಷರಾದ ವೆಂಕಟೇಶ ಎಫ್. ಕಾಟೀಗರ ಸದಸ್ಯರಾದ ಶ್ರೀನಿವಾಸ ಆರ್. ಭಾಂಡಗೆ ಚೇತನ ವಿ. ಬಾಕಳೆ ವಿನೋದ ಬಿ. ಭಾಂತಗೆ ಷಣ್ಮುಖಸಾ ಪಿ. ಬಸವಾರವರು ಗದಗ ಜಿಲ್ಲಾ ಶ್ರೀ ಸಹಸ್ರಾರ್ಜುನ ಸೇವಾ ಟ್ರಸ್ಟ್ ವತಿಯಿಂದ ಸುಮಾರು ಎರಡು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿ ವೃದ್ಧ ಮಹಿಳೆ ಹಾಗೂ ಬುದ್ದಿಮಾಂದ್ಯ ಮಗಳಿಗೆ ಸುಜ್ಜಿತವಾದ ಸ್ವಂತ ಮನೆಯ ನಿರ್ಮಾಣದಲ್ಲಿ ನೇರವಾಗಿರುವರು.
ಸದರ ಈ ಒಂದು ಸಮಾಜ್ಯೋನ್ಮುಖಿ ಟ್ರಸ್ಟ್ ಆದ ಗದಗ ಜಿಲ್ಲಾ ಶ್ರೀ ಸಹಸ್ರಾರ್ಜುನ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮನೆಯ ಗ್ರಹ ಪ್ರವೇಶವನ್ನು ಕಾಂಗ್ರೇಸ್ ಯುವ ನಾಯಕರು ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಕುಮಾರ ಕೃಷ್ಣಗೌಡ ಎಚ್ ಪಾಟೀಲ್ ಟ್ರಸ್ಟ್ ನ ಅಧ್ಯಕ್ಷರಾದ ವಿನೋದ ಆನಂದಸಾ ಭಾಂಡಗೆ ಹಾಗೂ ಸರ್ವ ಸದಸ್ಯರು, ಬಿ. ಬಿ. ಅಸೂಟಿ, ಗದಗ ನ ಪ್ರಥಮ ದರ್ಜೆಯ ಗುತ್ತಿಗೆದಾರರಾದ ಆಂಜನೇಯ ಕಟಗಿ , ಎಸ್.ಎಸ್.ಕೆ. ಸಮಾಜ, ಬೆಂಗಳೂರು. ರಾಜ್ಯ ಸಹ-ಕಾರ್ಯದರ್ಶಿಗಳಾದ ಪ್ರಕಾಶ. ಆರ್. ಬಾಕಳೆ ಇವರ ಉಪಸ್ಥಿತಿಯಲ್ಲಿ ಇದೇ ಆ. 04ರಂದು ಗ್ರಹ ಪ್ರವೇಶ ಕಾರ್ಯಕ್ರಮ ಜರುಗುವದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 