ತಂಬಾಕು ಸೇವನೆಯಿಂದ ಮಹಾಮಾರಿ ರೋಗ : ವೈ.ಎಂ.ಪೂಜಾರ
Tobacco consumption is a pandemic: Y.M. Pujar
ಇಂಡಿ 30 : ತಂಬಾಕು ಮೂಲ ಉತ್ಪನ್ನಗಳಾದ ಗುಟ್ಕಾ, ಪಾನಪರಾಗ, ಬಿಡಿ, ಸಿಗರೇಟು, ಸೇವನೆಯಿಂದ ಕ್ಯಾನ್ಸರ, ಲಕ್ವಾ, ಹಾರ್ಟ್ ಅಟ್ಯಾಕ್ಕೆದಂತಹ ಮಹಾಮಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರ ಹೇಳಿದರು.
ಅವರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಸಮಿತಿ ರಚಿಸಿ. ಈಗಾಗಲೇ ತಾಲೂಕಿನ ಜನಸಂಖ್ಯೆಯಲ್ಲಿ 2,000 ಕ್ಕಿಂತ ಕಡಿಮೆ ಇರುವ ಆಯ್ದ ಗ್ರಾಮಗಳು ಆಯ್ಕೆ ಮಾಡಿಕೊಂಡು ಅದರಲ್ಲಿ ಹಂಚಿನಾಳ ಗ್ರಾಮ ಆಯ್ದುಕೋಳ್ಳಲಾಗಿದೆ. ಈ ಗ್ರಾಮದಲ್ಲಿ ಸಮಿತಿ ನಿರ್ಮಿಸಿದ ಉದ್ದೇಶವೆಂದರೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವದಲ್ಲದೇ ಎಷ್ಟೋ ಕುಟುಂಬಗಳು ನಾಶವಾಗಿದ್ದರಿಂದ ಇವುಗಳನ್ನು ಇಂದಿನಿಂದಲೇ ನಿರ್ಮೂಲನೆ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ನಂತರ ಗ್ರಾಮದಲ್ಲಿರುವ 2 ಅಂಗಡಿಯ ಮಾಲೀಕರು ಹಾಗೂ ಮಕ್ಕಳ ಸಿಹಿ ತಿಂಡಿ ಮಾರುತ್ತಿದ್ದ ಅಂಗಡಿ ಮಾಲೀಕರಿಗೂ ಮನವರಿಕೆ ಮಾಡಿ ಅವರಿಂದಲೇ ತಂಬಾಕು ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ಮಾಡಿಸಿ ಅಲ್ಲಿಯೇ ಇದ್ದ ಶಾಲಾ ಮಕ್ಕಳಿಂದ ಗುಲಾಬಿ ಹೂ ಕೊಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ವಿದ್ಯಾಧರ ಮಂಗಳೂರೆ, ಹೂವಣ್ಣ ಚೌಡಿಯಾಳ, ಅಂಗಡಿಯ ಮಾಲೀಕರುಗಳಾದ ಸದ್ದಾಮ ರೇವುರ, ಚಾಂದಸಾಬ, ಅರವಿಂದ ತಳವಾರ, ಬಾಬು ಹೊಸಮನಿ, ಮುಖ್ಯ ಗುರುಗಳಾದ ಭೀಮರಾಯ ಜಮಖಂಡಿ, ಸಮುದಾಯ ಆರೋಗ್ಯಾಧಿಕಾರಿ ಸದ್ದಾಂ ಹುಸೇನ ನಾಗುರ, ಆರೋಗ್ಯನಿರಕ್ಷಣಾಧಿಕಾರಿ ದೇವೇಂದ್ರ್ಪ ಪತ್ತಾರ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ ಕೂಟನೂರ, ರಾಧಿಕಾ ವಾಲಿಕರ, ಆಶಾ ಕಾರ್ಯಕರ್ತೆ ಅನ್ನಪೂರ್ಣ ತೊನಿಶಾಳ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ದೇವೇಂದ್ರ್ಪ ಪತ್ತಾರ ಸ್ವಾಗತಿಸಿದರು, ಸದ್ದಾಮ ಮಹುಸೇನ ನಿರೂಪಿಸಿದರು, ಭೀಮರಾಯ ಜಮಖಂಡಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 