ನವವೃಂದಾವನಕ್ಕೆ ರಕ್ಷಣೆ ನೀಡಲು ಮನವಿ
ಲೋಕದರ್ಶನ ವರದಿ
ಕೊಪ್ಪಳ 19: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನಗಡ್ಡೆಯಲ್ಲಿನ ವ್ಯಾಸರಾಜತೀರ್ಥರ ಮೂಲ ವೃಂದಾವನ ಧ್ವಂಸಗೊಳಿಸಿದ್ದನ್ನು ಖಂಡಿಸಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರು, ಕೂಡಲೇ ನವವೃಂದಾವನಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಸಂಸತ್ ಕಲಾಪ ನಡೆಯುತ್ತಿರುವ ವೇಳೆ ಸಂಸತ್ನಲ್ಲೇ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿರುವ ಸಂಸದರು, ವ್ಯಾಸರಾಜತೀರ್ಥರು ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯರಿಗೆ ರಾಜಗುರುಗಳಾಗಿದ್ದರು. ಅಲ್ಲದೆ ಮಾಧ್ವ ಪರಂಪರೆಯ ಸಮುದಾಯಗಳಿಗೆ ಇವರು ಶ್ರೇಷ್ಠ ಯತಿಗಳು ಇಂತಹ ಮಹಾನ್ ಸಂತನ ಮೂಲ ವೃಂದಾವನವನ್ನು ಬುಧವಾರ ರಾತ್ರಿ ಯಾರೋ ದುಷ್ಕಮರ್ಿಗಳು ಧ್ವಂಸ ಮಾಡಿದ್ದಾರೆ. ಇದು ಹಿಂದೂ ಸಮುದಾಯಕ್ಕೆ ಆದ ಅವಮಾನ, ಇದರಿಂದಾಗಿ ವ್ಯಾಸರಾಜತೀರ್ಥರ ಆರಾಧಕರಿಗೆ ತೀವ್ರ ನೋವುಂಟಾಗಿದೆ. ಇಲ್ಲಿ 9 ಯತಿಗಳ ವೃಂದಾವನಗಳಿದ್ದು, ಮತ್ತೆ ಈ ರೀತಿ ಆಗದಂತೆ ಕೇಂದ್ರ ಸಕರ್ಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಧ್ವಂಸ ಮಾಡಿದ ಪ್ರಕರಣದ ಕುರಿತು ಈಗಾಗಲೇ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಪಕ್ಕದಲ್ಲೇ ಯುನೆಸ್ಕೋ ಘೋಷಣೆ ಮಾಡಿದ ವಿಶ್ವಪರಂಪರೆ ತಾಣ ಹಂಪೆ ಇದೆ. ಈ ವೃಂದಾವನಗಡ್ಡೆ ಸಹ ಅದೇ ಪರಿಸರದಲ್ಲಿ ಬರುವ ಕಾರಣ ಇದೊಂದು ಐತಿಹಾಸಿಕ, ಧಾಮರ್ಿಕ ಶ್ರದ್ಧಾಕೇಂದ್ರವಾಗಿದೆ. ಇಲ್ಲಿ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಇಂತಹ ಧಾಮರ್ಿಕ, ಐತಿಹಾಸಿಕ ಸ್ಥಳಕ್ಕೆ ಸೂಕ್ತ ರಕ್ಷಣೆ ಇಲ್ಲದಿರುವುದು ಖೇದಕರ ಸಂಗತಿ. ಕೂಡಲೇ ಕೇಂದ್ರ ಸಕರ್ಾಕ ಐತಿಹಾಸಿಕ ಸ್ಥಳವಾದ ನವವೃಂದಾವನಗಡ್ಡೆಗೆ ಭದ್ರತೆ, ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 