ವೃತ್ತಿರಂಗಭೂಮಿ ಪರಂಪರೆಯನ್ನು ಉಳಿಸಿಕೊಳ್ಳಬೆಕಾಗಿದೆ: ಡಾ. ಪ್ರಕಾಶ ಗರುಡ

ಲೋಕದರ್ಶನ ವರದಿ

ಬೆಳಗಾವಿ 26:  ಇಂದಿನ ತಾಂತ್ರಿಕ ಯುಗದಲ್ಲಿ ವೃತ್ತಿ ರಂಗಭೂಮಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕಾಲವಿದು. ತನ್ನ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಮೊದಲು ನಟರಿಗೆ  ನೇರವಾಗಿ ಸಿಳ್ಳೆ ಹೊಡೆಯುವುದು, ಚಪ್ಪಾಳೆ ತಟ್ಟುವುದು,  ಒನ್ಸಮೋರ್ ಎನ್ನುವುದರ ಮೂಲಕ ಪ್ರೇಕ್ಷಕರು ತಮ್ಮ ಸಂತೋಷ ವ್ಯಕ್ತ ಪಡಿಸುತ್ತಿದ್ದರು. ಇಂದು ಸುಧಾರಿಸಿದವರೆಂಬ ಭ್ರಮೆಯಲ್ಲಿ  ಪ್ರತಿಕ್ರಿಯೆ ನೀಡಿದರೆ ತಾವೆಲ್ಲಿ ಸಣ್ಣವರಾಗಿ ಬಿಡುತ್ತೇವೆಯೋ ಎಂಬ ಭಯದಲ್ಲಿ ಮೂಕರಾಗುತ್ತಿದ್ದಾರೆ. ನಾಟಕವನ್ನು ಸಂಪೂರ್ಣವಾಗಿ ಆಸ್ವಾದಿಸುವುದನ್ನು ಕಲಿಯಬೇಕೆಂದು ಖ್ಯಾತ ನಿದರ್ೇಶಕ ಪ್ರಕಾಶ ಗರುಡ ಇಂದಿಲ್ಲಿ ಹೇಳಿದರು.

ನಗರದ ರಂಗಸಂಪದ, ರಂಗಾಯಣ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ  ಎಸ್.ಪಿ. ಕಚೇರಿ ಹತ್ತಿರವಿರುವ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಿನ್ನೆ ಸಾಯಂಕಾಲ ಹಮ್ಮಿಕೊಳ್ಳಲಾಗಿದ್ದ "ಶ್ರೀ ರಾಮ ಪಾದುಕಾ ಪಟ್ಟಾಭಿಷೆಕ" ನಾಟಕ ಪ್ರದರ್ಶನ ನಡೆಯಿತು. ನಾಟಕದ ನಿದರ್ೇಶಕರಾದ ಡಾ. ಪ್ರಕಾಶ ಗರುಡ  ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ. ಬಸವರಾಜ ಜಗಜಂಪಿ, ಖ್ಯಾತ ರಂಗಕಮರ್ಿ  ಗರುಡ ಸದಾಶಿವರಯರ ನಾಟಕಗಳ ಕುರಿತಾಗಿಯೇ ನಾನು ಸಂಶೋದನೆ ಮಾಡಿದ್ದು. ಗರುಡ ಸದಾಶಿವರಾಯರ,  ಶ್ರೀಪಾದರಾವ ಗರುಡ, ಡಾ. ಪ್ರಕಾಶ ಗರುಡ  ಹೀಗೆ ಮೂರು ತಲೆಮಾರುಗಳಿಂದ ರಂಗಭೂಮಿಗಾಗಿ ತಮ್ಮ ಜೀವನವನ್ನು ಮುಡುಪಿಟ್ಟಿದೆ. ರಂಗಭೂಮಿಗೆ ಇವರ  ಕೊಡುಗೆ ಅಪಾರವೆಂದು ಹೇಳಿದರು.

ಗರುಡ ಸದಾಶಿವರಾಯರ ರಚನೆಯ "ಶ್ರೀರಾಮ ಪಾದುಕಾ ಪಟ್ಟಾಭಿಷೇಕ"  ಸಂಗೀತ ಪ್ರಧಾನವಾದ ನಾಟಕ. ಗರುಡ ಸದಾಶಿವರಾಯರ ಮೂಲ ಸಂಗೀತದ ಶ್ರೀಪಾದರಾವ ಸಂಗೀತ ನಿದರ್ೇಶನದಲ್ಲಿ ಸುಮಾರು ಇಪ್ಪತ್ತೈದಕ್ಕಿಂತ ಹೆಚ್ಚು ಗೀತೆಗಳಿದ್ದು. ಮೆಲಕು ಹಾಕುವ ಸಂಗೀತ ಪ್ರೇಕ್ಷಕರನ್ನು ಕೊನೆವರೆಗೂ ಸೆರೆಹಿಡಿದಿತ್ತು.  3 ಗಂಟೆಯ ನಾಟಕ ಹೇಗೆ ಕೂಡುವುದೆಂಬ ನಿಟ್ಟುಸಿರು ಬಿಟ್ಟವರಿಗೆ 3 ತಾಸುಗಳು ಕಳೆದುದೇ ಗೊತ್ತಾಗಲಿಲ್ಲ. ಅರ್ಥಪೂರ್ಣ ಸಂಭಾಷನೆ,  ಸುಮಧುರ ಸಂಗೀತ, ನೈಜ ಅಭಿನಯದಿಂದ  ರಾಮಾಯಣ ಕಾಲಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವಲ್ಲಿ ನಾಟಕ ಯಶಸ್ವಿಯಾಯಿತು. ಎಲ್ಲ ಪಾತ್ರಧಾರಿಗಳೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದವು. ಅದರಲ್ಲಿ  ವಿಶೇಷವಾಗಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡ ಅಕ್ಷತಾ ಕುಮಟಾ ಮೊದಲ ಭಾಗ ಮುಗ್ಧ ತಾಯಿಯಾಗಿ, ನಂತರ ಪುತ್ರಮೋಹಿಯಾಗಿ ಕೊನೆಯಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ ತಾಯಿಯಾಗಿ ಹೀಗೆ ಮೂರೂ ಹಂತದಲ್ಲಿ ತಮ್ಮ ನೈಜ, ಉತ್ತಮ ಅಭಿನಯದಿಂದ ಎಲ್ಲ  ಮನ ಗೆದ್ದರು. 

ನಾಟಕ ರಚನೆ ಗರುಡ ಸದಾಶಿವರಾಯರು ಹಿನ್ನೆಲೆ ಸಂಗೀತ  ಮೂಲ ಗರುಡ ಸದಾಶಿವರಾಯರದ್ದು ಈ ನಾಟಕಕ್ಕೆ ಶ್ರೀಪಾದರಾವ ಗರುಡ, ನಿದರ್ೇಶನ ಪ್ರಕಾಶ ಗರುಡ, ಬೆಳಕು ನಾಗರಾಜ ಪಾಟೀಲ ಅವರದಿತ್ತು.

ಡಾ. ಎ. ಎಲ್. ಕುಲಕಣರ್ಿ ಕಲಾವಿದರು, ಪ್ರಸ್ತುತ ನಾಟಕದ ನಿದರ್ೇಶಕರನ್ನು ವೇದಿಕೆ ಕರೆದು ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು. ಪ್ರೊ. ಎಂ. ಎಸ್. ಇಂಚಲ, ಶಿರೀಷ ಜೋಡಿ,  ಅಶೋಕ ಮಳಗಲಿ, ರಮೇಶ ಅನಿಗಳ, ಸುಭಾಷ ಏಣಗಿ, ಸಿ.ಜಿ. ಮುನವಳ್ಳಿ, ರಘುನಾಥ ಮುತಾಲಿಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇಂಥ ಅಧಿಕಾರಿಗಳು ನಮಗೆ ಬೇಕಾ?

ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾನು ತಂಡದೊಂದಿಗೆ ಬಂದಾಗ  ಸಹಕಾರವೆನ್ನುವುದೇ ಇಲಾಖೆಯವರಿಂದ ಕಂಡು ಬರಲಿಲ್ಲ. ಎಷ್ಟೇ ವಿನಂತಿ ಮಾಡಿಕೊಂಡರೂ ಗೆಸ್ಟ್ ಹೌಸ ಕೀ ಸಿಗಲಿಲ್ಲ? ಕುಮಾರ ಗಂಧರ್ವ ರಂಗಮಂದಿರ  ಒಳ್ಳೆಯ ರಂಗಮಂದಿರವಿದೆ. ಕಲಾವಿದರಿಗೆ ಸರಿಯಾಗಿ ಉಪಯೋಗಕ್ಕೆ  ಬರುತ್ತಿಲ್ಲ.  ಕಲಾವಿದರನ್ನು ಗೌರವಿಸದ ಇಂಥ ಅಧಿಕಾರು ಬೇಕಾ? ಇದನ್ನು  ಖಂಡಿಸಬೇಕು  ಎಂದು ಧಾರವಾಡ ರಂಗಾಯಣದ ನಿದರ್ೇಶಕರಾದ ಪ್ರಮೋದ ಶಿಗ್ಗಾಂವಿ ಕಿಡಿ ಕಾರಿದರು.