ಮನಸು ಕೆಡದಿರಲು ಆತ್ಮಪ್ರತಿ ಶುದ್ಧವಾಗಿರಲಿ -ಬ್ರ. ಕು. ಯೋಗಿನಿ ಅಕ್ಕ
To keep the mind undisturbed, let the self-image remain pure – BK Yogini Akka
ಯಲಬುರ್ಗಾ 15: ಮನುಷ್ಯ ಆರೋಗ್ಯ ದಿಂದ ಇರಬೇಕಾದರೆ ಸಮಯಕ್ಕೆ ಅನುಸಾರ ದೇಹಕ್ಕೆ ಆಹಾರ ನೀಡಿ ವ್ಯಾಯಾಮ ಮಾಡುವರು ಆದರೆ ನಮ್ಮ ಮನಸು ಕೆಡದಂತೆ ಇರಲು ಆತ್ಮ ಪರಿಶುದ್ಧ ವಾಗಿರಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೊಪ್ಪಳದ ಸಂಚಾಲಕಿ ಬ್ರ. ಕು. ಯೋಗಿನಿ ಅಕ್ಕಾ ಹೇಳಿದರು. ಪಟ್ಟಣದ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿಂತೆ, ದುಃಖ, ಅಸಮಾಧಾನ ಹೋಗಲಾಡಿಸಲು ಪ್ರತಿ ನಿತ್ಯ ಸುಖ, ಶಾಂತಿ, ಆನಂದದ ಕ್ಷಣಗಳನ್ನು ವ್ಯರ್ಥ ಮಾಡಿಕೊಳ್ಳದೆ ಜೀವನ ರೂಪಿಸಿಕೊಂಡು ಪ್ರೇಮ ಸಾಗರದಲ್ಲಿ ಎಲ್ಲರನ್ನೂ ನೋಡುವ ಧ್ರಷ್ಟಿಕೋನ ವನ್ನು ಬೆಳಿಸಿಕೊಳ್ಳಬೇಕೆಂದು ಕರೆ ನೀಡುತ್ತಾ ಆರೋಗ್ಯವನ್ನು ಕಾಪಾಡಿ ಕೊಳ್ಳುತ್ತಾ ,ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾ , ಗುಣ ಸಂಪತ್ತು ಬೆಳಿಸಿ ಕೊಳ್ಳುತ್ತಾ , ಶುಭ ಸಂಕಲ್ಪ ಮಾಡುತ್ತಿರುವ ಮಾನವ ದೇವ ಮಾನವನಾಗುತ್ತಾನೆ ಅಂತಹ ಮಾನವೀಯತೆ ಎಲ್ಲರದು ಆಗ ಬೇಕೆಂದು ಆಶಿಸಿಸಿದರು.ಮನಸ್ಥಿತಿ ಅಚಲ ವಾಗಿರಬೇಕು ಆಗಮಾತ್ರ ನಾವು ನಮ್ಮ ವ್ಯಕಿತ್ವ ವನ್ನು ರೂಪಿಸಿ ಕೊಳ್ಳಬಹುದು ಎಂದರು.
ಯಾವುದೇ ನಿಂದನೆಗೆ, ಅಪಮಾನಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಅಪಚಾರ ಬಗೆದವರಿಗೂ ಉಪಕಾರ ಮಾಡಿ ಅವರ ಕರ್ಮ ದಂತೆ ಫಲ ಪ್ರಾಪ್ತಿ ಆಗುವದರಿಂದ ಎಲ್ಲರಿಗೂ ಒಳಿತನ್ನೆ ಮಾಡಿ ಅಪ್ಪಿ ತಪ್ಪಿಯೂ ಕೆಟ್ಟ ಕೆಲಸ ಮಾಡಬೇಡಿ ಎಂದೆನ್ನುತ್ತಾ ಸತ್ಕರ್ಮ ದಿಂದ ಭಾಗ್ಯ ಲಭಿಸಲಿದೆ ಎಂಬವದನ್ನು ಯಾರು ಮರೆಯಬೇಡಿ ಎಂದು ಅಭಿಪ್ರಾಯ ಪಟ್ಟರು. ಈಶ್ವರ್ಪ ಶೆಟ್ಟರ್ ಸ್ಮರಣೆ ಗೈದು ನಿ. ಪ್ರಾಚಾರ್ಯ ಮಂಗಳೇಶ ಜನಾದ್ರಿ ಮಾತನಾಡಿ ಹುಟ್ಟಿದ ಮನುಷ್ಯನಿಗೆ ಸಾವು ಖಚಿತ ಆದರೆ ಬದುಕಿನ ಅವಧಿ ಸದಾ ಜನ ಮಾನಸದಲ್ಲಿ ಉಳಿಯುತ್ತದೆ. ಭೌತಿಕ ವಾಗಿ ಇಲದಿದ್ದರೂ ಮಾನಸಿಕವಾಗಿ ಉಳಿಯಲು ದಾನ, ಧರ್ಮ, ಸತ್ಕರ್ಮ ದಿಂದ ಸಾಧ್ಯ ಅಂತಹ ಬದುಕು ನಮ್ಮೆಲ್ಲರದಾಗ ಬೇಕು ಎಂದರು. ಪ್ರಸನ್ನ ಶೆಟ್ಟರ್, ಸಠಣ್ಣ ಕರಂಡಿ , ಮುತ್ತಯ್ಯ ಮಲ್ಕಸಮುದ್ರ, ಸಂಗಣ್ಣ ಟೆಠನಕಾಯಿ, ವೀರಯ್ಯ ಹಿರೇಮಠ್, ಫಕೀರ್ಪ ಗಾಣಿಗೇರ, ಸಿದ್ದಯ್ಯ, ಚಂದ್ರು, ಆನಂದ ಶೆಟ್ಟರ್, ಶರಣಪ್ಪ ಹಾಗೂ ಹಲವಾರು ಮಾತೆಯರು ಉಪಸ್ತಿತ ರಿದ್ದರು.ಕೊನೆಗೆ ಸಾಮೂಹಿಕ ವಾಗಿ ಎಲ್ಲರೂ ಬ್ರಹ್ಮ ಭೋಜನ ಸವೆದರು ಸ್ಥಳೀಯ ಸಂಚಾಲಕಿ ಬ್ರ. ಕು. ಗೀತಕ್ಕ ಸ್ವಾಗತಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 