ದೈವಿಕ ಶಕ್ತಿ ಒಲಿಸಿಕೊಳ್ಳಲು ನಿರ್ಮಲ ಭಕ್ತಿ-ಭಾವ ಬೇಕು...
To attract divine power, pure devotion is required...
ವಿಜಯಪುರ 30: ದೇವರಲ್ಲಿ ನಿರ್ಮಲ ಭಕ್ತಿಯಿಟ್ಟು ಧ್ಯಾನ, ತಪಸ್ಸು, ಭಜನೆ ಮತ್ತು ದೈವತ್ವ ಶಕ್ತಿಯನ್ನು ಒಲಿಸಿಕೊಳ್ಳುವಲ್ಲಿ ಮನದಲ್ಲಿ ಸಮಚಿತ್ತದಿಂದ ಏಕೋಭಾವದಿಂದ ಪ್ರಾರ್ಥಿಸಿದರೆ ಲಕ್ಷ್ಮೀ ನಮಗೆ ಅನುಗ್ರಹಿಸುತ್ತಾ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ದೊರೆಯುತ್ತದೆ. ಎಂದರು. ಸಂಪಾದಿಸಿದ ಆದಾಯದಲ್ಲಿಯೇ ಸಂಸಾರ ನಡೆಸಿ, ದೇವಸ್ಥಾನಗಳಿಗೆ ತನು-ಮನ-ಧನದ ಮೂಲಕ ಸಹಾಯ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಧ್ಯಾನ ತರಬೇತುದಾರಿಣಿ ಸರೋಜಾ ಬಾಗಲಕೋಟ ಅವರು ಸಲಹೆ ನೀಡಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾಎ ಕಾಲನಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ: 30-09-2025 ರಂದು ಹಮ್ಮಿಕೊಂಡ ಲಲಿತ ಸಹಸ್ರ ನಾಮಾವಳಿ ಪಠಣ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ, ಕೋವಿಡ್ ನಂತರ ಜೀವನವೆಂದರೆ ಏನು ಎಂಬುದನ್ನು ಜನ ಅರಿತಿದ್ದಾರೆ. ಸಾಮಾಜಿಕ., ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅದರ ಜೊತೆಗೆ ಸಮೂಹ ಮಾಧ್ಯಮ, ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಯಲ್ಲಿಯೂ ನಮ್ಮ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಆಚರಿಸುತ್ತಾ, ಅದು ಮುಂದಿನ ಯುವ ಪೀಳಿಗೆ ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಮತ್ಸರ, ಲೋಭಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ, ಅರಿವೇ ಗುರು ನುಡಿಯೇ ಜೋರ್ತಿಲಿಂಗವೆಂಬ ಬಸವಣ್ಣವರ ವಚನವನ್ನು ಪರಿಪಾಲಿಸಬೇಕು ಎಂದು ಹೇಳಿದರು.ದೇವಸ್ಥಾನ ಸಮೀತಿ ಕಾರ್ಯದರ್ಶಿ ಶ್ರೀಮತಿ ಶೋಭಾ ಚವ್ಹಾಣ ಅವರು ಮಾತನಾಡಿ, ಕೊಡುಗೈ ದಾನಿಗಳ ಸಹಾಯ, ಸಹಕಾರದಿಂದ ಈ ಲಕ್ಷ್ಮೀ ದೇವಸ್ಥಾನವು ಅಭಿವೃದ್ಧಿ ಹೊಂದಲು ಕಾರಣವಾಗಿದ್ದು. ನಮ್ಮ ಎಲ್ಲ ಹಬ್ಬಗಳಲ್ಲಿ ವಿಶೇಷವಾಗಿ ಧಾರ್ಮಿಕ-ಸಾಮಾಜಿಕ, ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಮಾಯವಾಗುತ್ತಿರುವ ನಮ್ಮ ಜಾತ್ರೆ, ನವರಾತ್ರಿ, ಗಣೇಶ ಚತುರ್ಥಿ ಉತ್ಸವಗಳನ್ನು ಆಚರಿಸುತ್ತಾ, ನಮ್ಮ ಭಾರತೀಯ ಸಂಸ್ಕೃತಿ, ಜಾನಪದ ಸೊಗಡು, ಹಳ್ಳಿ ಸಂಪ್ರದಾಯ, ಆಚರಣೆ-ಪದ್ಧತಿಗಳನ್ನು ಉಳಿಸಿ-ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸೇವಾ ಸಮೀತಿ ಉಪಾಧ್ಯಕ್ಷೆ ಶಕುಂತಲಾ ಅಂಕಲಗಿ, ಮೀನಾಕ್ಷಿ ಗುಣಕಿ, ಗಂಗೂಬಾಯಿ ಪಾಟೀಲ, ಪಾರ್ವತಿ ಪೂಜಾರಿ, ಶಾಂತಾ ಪಾಟೀಲ, ಶ್ರೀದೇವಿ ಖೊದ್ನಾಪೂರ, ದಾನಮ್ ಹಿರೇಮಠ, ಜ್ಯೋತಿ ಕನಮಡಿ, ನೀಲಮ್ಮ ಬಿರಾದಾರ, ಜಯಶ್ರೀ ಕೆಂಗಲಗುತ್ತಿ, ಶ್ವೇತಾ ನಂದಾವರ, ಗೀತಾ ಮೆಣಸಂಗಿ, ಕಲಾವತಿ ಬಿದರಿ, ಗೀತಾ ಎಚ್ಚಿ, ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಲಲಿತ ಸಹಸ್ರ ನಾಮಾವಳಿ ಪಠಣ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ನವರಸಪುರದ ಸುತ್ತಮುತ್ತಲಿನ ಬಡಾವಣೆಗಳ ನೂರಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡು ಆ ದೇವಿತೆ ಭಕ್ತಿ ಭಾವದಿಂದ ಸಾಮೂಹಿಕವಾಗಿ ನಾಮಸ್ತುತಿ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 