ಗೋವಿನಜೋಳ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ನಿರ್ವಹಣೆಗೆ ಸಲಹೆಗಳು
ಹಾವೇರಿ: ಹಾವೇರಿ ತಾಲೂಕಿನ ಹಾವೇರಿ, ಕರ್ಜಗಿ ಹಾಗೂ ಗುತ್ತಲ ವ್ಯಾಪ್ತಿಯ ಗ್ರಾಮಗಳಲ್ಲಿ ಏಕದಳ ಧಾನ್ಯ ಬೆಳೆಗಳಲ್ಲಿ ವಿದೇಶಿ ಪಾಲ್ ಆಮರ್ಿ ವರ್ಮ, ಸೈನಿಕ ಹುಳು ಹೊಸ ಪ್ರಭೇದ (ಸ್ಪೊಡೋಪ್ಟೆರಾ ಫ್ರೂಜಿಪೆರಡಾ) ಕೀಟದ ಬಾಧೆ ಕಂಡು ಬಂದಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಕೀಟ ನಿರ್ವಹಣಾ ಕ್ರಮಗಳನ್ನು ತಿಳಿಸಲಾಗುತ್ತಿದೆ. ರೈತರು ಕೃಷಿ ಇಲಾಖೆಯನ್ನು ಸಂಪಕರ್ಿಸಲು ಸಹಾಯಕ ಕೃಷಿ ನಿದರ್ೆಶಕ ಕರಿಯಲ್ಲಪ್ಪ ಅವರು ತಿಳಿಸಿದ್ದಾರೆ.
ಕೀಟದ ಜೀವನ ಚಕ್ರ : ಪತಂಗವು ರಾತ್ರಿ ವೇಳೆ ಚಟುವಟಿಕೆಯಿಂದ ಕೂಡಿದ್ದು ಬೂದು ಮತ್ತು ಕಂದು ಬಣ್ಣದಾಗಿರುತ್ತದೆ. ಹಿಂದಿನ ರೆಕ್ಕೆಗಳು ಬಿಳಿ ಬಣ್ಣದಿಂದ ಕೂಡಿದ್ದು ಸಣ್ಣದಾದ ಕಪ್ಪು ಗೆರೆಯು ರೆಕ್ಕೆಯ ಅಂಚಿನಲ್ಲಿರುತ್ತದೆ.
ಮೊಟ್ಟೆಯಿಂದ ಹೊರಬರುವ ಮರಿಹುಳುಗಳು ಮೊದಲು ಎಲೆಗಳನ್ನು ಕೆರೆದು ತಿನ್ನತ್ತವೆ ನಂತರ ಕಾಂಡ ಕೊರೆಯುವ ಕೀಟದಂತೆ ಸುಳಿಗಳಲ್ಲಿ ಸಣ್ಣ ಸಣ್ಣ ರಂದ್ರಗಳನ್ನು ಮಾಡಿ ಎಲೆಗಳನ್ನು ತಿಂದು ನಾಶಪಾಡಿಸುತ್ತವೆ.
ನಿಯಂತ್ರಣ ಕ್ರಮಗಳು: ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು, ಕೀಟದ ಉಪಸ್ಥಿತಿ ಮತ್ತು ಹರಡುವಿಕೆ ಬಗ್ಗೆ ನಿಗಾ ವಹಿಸುವುದು. ಗುಂಪಾಗಿ ಇಟ್ಟಿರುವ ಮೊಟ್ಟೆ ಹಾಗೂ ಮರಿಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು.ತತ್ತಿ ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮನ್ನು ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಪಡಿಸುವುದು.
ರಾಸಾಯನಿಕ ನಿಯಂತ್ರಣ ಕ್ರಮಗಳು:
ಪ್ರಥಮ ಸಿಂಪರಣೆ : ಶೇ. 5% ರಷ್ಟು ಬಾಧೆಯನ್ನು ಗಮನಿಸಿದಾಗ ಸಸಿಯಿಂದ ಮೊದಲ ಸುಳಿ ಹಂತ ಕಂಡುಬಂದಾಗ ಮೊದಲ ಹಂತದ ಕೀಡೆಗಳನ್ನು ನಿರ್ವಹಿಸಲು, ಶೇ 5ರ ಬೇವಿನ ಬೀಜದ ಕಷಾಯ (ಎನ್.ಎಸ್.ಕೆ.ಇ) ಅಥವಾ 5 ಮಿ.ಲೀ ಅಜಾಡಿರೆಕ್ಟಿನ್ (1500 ಪಿಪಿಎಮ್) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.
ದ್ವಿತೀಯ ಸಿಂಪರಣೆ : (ಮಧ್ಯಮ ಸುಳಿ ಹಂತದಿಂದ ಕೊನೆಯ ಸುಳಿ ಹಂತದವರೆಗೆ): ಬೆಳೆಯು ಶೇ. 10 ರಿಂದ 20 ರಷ್ಟು ಹಾನಿಗೊಳಗಾದಾಗ 2ನೇ ಮತ್ತು 3ನೇ ಹಂತದ ಮರಿಹುಳುಗಳನ್ನು ನಿರ್ವಹಣೆ ಮಾಡಲು 0.2 ಗ್ರಾಂ ಎಮಾಮೆಕ್ಟಿನ್ ಬೆಂಜೋಯೇಟ್(ಒಲ್ಯಾಕ್ಸ್) 5 ಎಸ್.ಜಿ. ಅಥವಾ 0.2 ಮಿ.ಲೀ. ಸ್ಪೈನೋಸ್ಯಾಡ್ 45 ಎಸ್.ಸಿ ಅಥವಾ 0.5 ಮಿ.ಲೀ. ಸ್ಪೈನೋಟೊರಾಮ್(ಡೆಲಿಗೇಟ್) 12 ಎಸ್.ಸಿ. ಅಥವಾ 0.2 ಮಿ.ಲೀ ಕ್ಲೋರ್ಯಾಂಟ್ರಿನಿಲಿಪ್ರೋಲ್(ಕೊರಾಜಿನ್) 18.5 ಎಸ್.ಸಿ ಅಥವಾ ಬಾರಾಜೈಡ್ನ್ನು 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 