ಅಕ್ರಮ ಮರಳು ಸಾಗಾಟ ಟಿಪ್ಪರ್ ವಶ

ಅಕ್ರಮ ಮರಳು ಸಾಗಾಟ ಟಿಪ್ಪರ್ ವಶ   Tipper seized for illegal sand transportation

ಲಕ್ಷ್ಮೇಶ್ವರ 23: ತಾಲೂಕಿನ ಬಟ್ಟೂರು ಬಡ್ನಿ ಸೂಗಿಹಾಳ ಹುಲ್ಲೂರು ಅಮರಾಪುರ ಹಾಗೂ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮಗಳ ಸರ್ಕಾರಿ ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮರಳು ಸಾಗಾಟ ದಂಧೆ ನಿರಂತರವಾಗಿ ನಡೆಯುತ್ತಿದೆ.  ಇವರಿಗೆ ಯಾವ ಅಧಿಕಾರಿಗಳ ಭಯವು ಇಲ್ಲ. ಹೀಗಾಗಿ ಅಕ್ರಮ ಮರಳು ಸಾಗಾಟ ದಂಧೆಕೋರರು ಹಗಲು ರಾತ್ರಿ ಎನ್ನದೆ ಎಗ್ಗ ಇಲ್ಲದೆ ಮರಳು ದಂಧೆ ಹಾಗೂ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ತಾಲೂಕಿನ ರಸ್ತೆಗಳು ಹಾಳಾಗುತ್ತಿವೆ ಇವರಿಗೆ ಹೇಳೋರು ಕೇಳೋರು ಯಾರು ಇಲ್ಲಾ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಹಿನ್ನೆಲೆ ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಉಮೇಶ್ ಮಾಡಳ್ಳಿ ಅವರು ತಾಲೂಕಿನ ಸೂರಣಗಿ ಗ್ರಾಮದ ಹತ್ತಿರ ಯಾವುದೇ ಪರವಾಣಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಒಂದನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.