ಲೋಕದರ್ಶನವರದಿ
ರಾಣೇಬೆನ್ನೂರು23: ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿ ಮತ್ತೊಂದು ಸಾವು-ಬದಕಿನ ಮಧ್ಯ ಹೋರಾಡುತ್ತಿದೆ. ಈ ಎತ್ತು ಗ್ರಾಮದ ಮಂಜಪ್ಪ ನಿಂಗಪ್ಪ ನಂದ್ಯಾಲ ಅವರಿಗೆ ಸೇರಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಭಾರಿ ಪ್ರಮಾಣದಲ್ಲಿ ಅಪ್ಪಳಿಸಿದ ಸಿಡಿಲಿಗೆ ಸ್ಥಳದಲ್ಲಿಯೇ ಒಂದು ಎತ್ತು ಸಾವನ್ನಪ್ಪಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪಶು ವೈದ್ಯಾಧಿಕಾರಿ ಡಾ|| ನಾಗರಾಜ ಅವರು ಎತ್ತಿಗೆ ಸೂಕ್ತ ಚಿಕಿತ್ಸೆ ನೀಡಿದರು.