ಗಾಜಾದಿಂದ ಮೂರು ರಾಕೆಟ್‌ ಉಡಾವಣೆ

ಜೆರುಸಲೆಮ್, ಜನವರಿ 31,ದಕ್ಷಿಣ ಇಸ್ರೇಲ್‌ನ ಗಾಜಾ ಪಟ್ಟಿಯಿಂದ ಗುರುವಾರ ರಾತ್ರಿ ಮೂರು ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ  ತಿಳಿಸಿದೆ.ರಾಕೆಟ್ ವಿರೋಧಿ ಐರನ್ ಡೋಮ್ ವ್ಯವಸ್ಥೆಯ ಮೂಲಕ  ಎರಡು ರಾಕೆಟ್‌ಗಳನ್ನು ನಿರ್ಬಂದಿಸಲಾಗಿದೆ  ಎಂದೂ  ಮಿಲಿಟರಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೂರನೇ ರಾಕೆಟ್ ಸ್ಡೆರೋಟ್ ಪಟ್ಟಣದ ಸಪಿರ್ ಅಕಾಡೆಮಿಕ್ ಕಾಲೇಜು  ಮೈದಾನಕ್ಕೆ ಅಪ್ಪಳಿಸಿ ಬೆಂಕಿ ಘಟನೆಗೆ ಕಾರಣವಾಗಿದೆ  ಎಂದೂ  ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಯಾವುದೇ ಗುಂಪು ತಕ್ಷಣ ರಾಕೆಟ್ ಉಡಾವಣೆ  ಜವಾಬ್ದಾರಿ ಹೊತ್ತುಕೊಂಡಿಲ್ಲ ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ ಶಾಂತಿ ಯೋಜನೆಯೇ  ಈ ಪ್ರದೇಶದಲ್ಲಿನ ಉದ್ವಿಗ್ನತೆಗೆ ಕಾರಣವಾಗಿದೆ.  ಇದು  ಇಸ್ರೇಲ್ ಪರವಾಗಿದೆ, ಮೇಲಾಗಿ   ಪಕ್ಷಪಾತದಿಂದ ಕೂಡಿದೆ ಎಂದೂ  ಪ್ಯಾಲೆಸ್ಟೀನ್ ಪ್ರಬಲವಾಗಿ ಆರೋಪಿಸಿದೆ.