ಬೆಂಗಳೂರು, ಏ.10, ದೆಹಲಿಯ ನಿಜಾಮುದ್ದೀನ್‌ನಿಂದ ನಗರಕ್ಕೆ ವಾಪಾಸ್ಸಾಗಿ ಹಜ್ ಭವನದ ಕ್ವಾರೆಂಟೈನ್‌ನಲ್ಲಿಡಲಾಗಿದ್ದ 300 ಮಂದಿ ತಬ್ಲೀಘಿಗಳ ಪೈಕಿ ಮೂವರಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದೆ.ನಗರದ ಹಜ್ ಭವನದಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದ 300 ಮಂದಿ ತಬ್ಲೀಘಿಗಳಲ್ಲಿ ಹಲವರು ಕ್ವಾರೆಂಟೈನ್ ಮುಗಿಸಿದ್ದು ನೆಗೆಟಿವ್ ಬಂದಿದ್ದರಿಂದ ಅವರೆಲ್ಲರನ್ನು ಮನೆಗೆ ಕಳುಹಿಸಲಾಗಿದೆ. ಆದರೂ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.ಕ್ವಾರೆಂಟೈನ್ ನಲ್ಲಿದ್ದು ವೈದ್ಯಕೀಯ ವರದಿ ನೆಗೆಟಿವ್ ಬಂದು ಮನೆಗಳಿಗೆ ವಾಪಾಸ್ ತೆರಳಿರುವವರ ಮೇಲೆ ನಿಗಾ ಇಡಲಾಗಿದೆ. ಇವರು ಸೋಂಕು ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕದಲ್ಲಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮನೆಗೆ ವಾಪಾಸ್ ತೆರಳಿರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.