ಮೂರು ದಿನದ ಪ್ರತಿಭಟನೆ: 304 ಜನರ ಸಾವು ..!!

ಟೆಹರಾನ್ ಡಿ, 17ಇರಾನ್‌ನಲ್ಲಿ  ತೈಲಬೆಲೆ  ಹೆಚ್ಚಳ ವಿರೋಧಿಸಿ  ದೇಶಾದ್ಯಂತ ನವೆಂಬರ್ ನಲ್ಲಿ ನಡೆದ ಮೂರು ದಿನದ  ಪ್ರತಿಭಟನೆ,ನಂತರದ  ಹಿಂಸಾಚಾರದಲ್ಲಿ   ಕನಿಷ್ಠ 304 ಜನರು ಮೃತಪಟ್ಟಿದ್ದಾರೆ  ಎಂದು  ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ ಸತ್ಯ ಸಂಗತಿ ಬಹಿರಂಗ ಪಡಿಸಿದೆ. 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ಯುವಕರು ಸೇರಿದಂತೆ ಒಟ್ಟಾರೆ 208 ಸಾವು ಸಂಭವಿಸಿದೆ ಎಂದು ಈ ಮೊದಲು ಅಂದಾಜು ಮಾಡಲಾಗಿತ್ತು . ಆದರೆ ಅದಕ್ಕಿಂತಲೂ  ಹೆಚ್ಚಿನ ಸಾವು  ನೋವು  ವರದಿಯಾಗಿದೆ ಆದರೆ ಇದನ್ನೂ ಇರಾನ್ ಸರಕಾರ "ಸಂಪೂರ್ಣ ಸುಳ್ಳು" ಎಂದು ತಳ್ಳಿಹಾಕಿದೆ.ಅಧಿಕಾರಿಗಳು ಪ್ರತಿಭಟನಾಕಾರರನ್ನು "ಹತ್ಯಾಕಾಂಡ" ಮಾಡಿದ ನಂತರ, ಅವರ  ಸಾವುಗಳನ್ನು ಮುಚ್ಚಿಹಾಕಲು "ವ್ಯಾಪಕ-ಪ್ರಮಾಣದ ಸಂಚು ಮಾಡಿದ್ದರು ಎಂಬ ಭಯಾನಕ ಸಾಕ್ಷ್ಯ ಸಂಗ್ರಹಿಸಿರುವುದಾಗಿ ಅಮ್ನೆಸ್ಟಿ ಸಂಸ್ಥೆ ಹೇಳಿಕೊಂಡಿದೆ. "ನವೆಂಬರ್ 15 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದ ನಂತರ ಇರಾನ್ ಅಧಿಕಾರಿಗಳು ಭೀಕರ ದೌರ್ಜನ್ಯ ನಡೆಸುತ್ತಿದ್ದಾರೆ" ಎಂದು ಲಂಡನ್ ಮೂಲದ ಹಕ್ಕುಗಳ ಕಾವಲು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿತ್ತು.  ಇರಾನ್  ನಿರ್ದಯ ದಮನದ ಬಗ್ಗೆ ಮಾತನಾಡುವುದನ್ನು ತಡೆಯಲು. ಸಾವಿರಾರು ಪ್ರತಿಭಟನಾಕಾರರು ಮತ್ತು ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳನ್ನು" ಬಂಧಿಸಲಾಗಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ  ಆದರೆ ಇದುವರೆಗೆ ಕೇವಲ ಐವರು ಮಾತ್ರ ಮೃತಪಟ್ಟಿದ್ದಾರೆ ಎಂದೂ ಸರಕಾರಿ ಮೂಲಗಳು ಹೇಳಿವೆ