ಅಕ್ರಮವಾಗಿ ಹೆರಾಯಿನ್ ಮಾರಾಟ: ಮೂವರ ಬಂಧನ
Three arrested for illegally selling heroin

ಬೆಳಗಾವಿ 28: ಹೆರಾಯಿನ್ ಮಾದಕ ವಸ್ತುಗಳ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಅವರಿಂದ ವಸ್ತು, ವಾಹನ ವಶಪಡಿಸಿಕೊಂಡಿದ್ದಾರೆ.
ನಗರದ ಸಮರ್ಥ ನಗರ ನಿವಾಸಿ ಅನಿಕೇತ ರಾಮಾ ಲೋಹಾರ (27), ಜಯನಗರ ಮಚ್ಛೆ ನಿವಾಸಿ ಅಲ್ತಮಶ್ ಅಯೂಬಖಾನ ಪಠಾಣ. (25) ಮತ್ತು ಮಚ್ಛೆ, ಟಿಪ್ಪುಸುಲ್ತಾನ ನಗರ ನಿವಾಸಿ ಸದ್ದಾಮಹುಸೇನ ಸರ್ದಾರ ಪಠಾಣ. ಬಂಧಿತ ಆರೋಪಿಗಳಾಗಿದ್ದಾರೆ.
ಮೂವರು ಆರೋಪಿತರು ಮಾರ್ಕೇಟ್ ಪೊಲೀಸ್ ಠಾಣಾ ಹದ್ದಿಯ ಬೆಳಗಾವಿ ಸಮರ್ಥ ನಗರ 7ನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್‌ಐ ಹುಸೆನಸಾಬ ಕೇರೂರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳಿಂದ ರೂ.48,400 ಮೌಲ್ಯದ 60.36 ಗ್ರಾಂ ದಷ್ಟು ಹೆರಾಯಿನ್, ಅ.ಕಿ ರೂ. 1,00,000 ಮೌಲ್ಯದ 1 ಅಟೋ ರಿಕ್ಷಾ (ನಂ. ಕೆಎ-22/ ಡಿ-4120) ಹೀಗೆ ಒಟ್ಟು ರೂ.1,48,400 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 