ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ: ಮೂವರು ಆರೋಪಿಗಳ ಬಂಧನ
Three accused arrested for selling MDMA
ಬೆಳಗಾವಿ 09: ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ 20,000ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಪೀರನವಾಡಿ ಸಿದ್ಧೇಶ್ವರ ಗಲ್ಲಿ ನಿವಾಸಿ ವಿನೋದ ತಾನಾಜಿ ಹರಾಜಿ, ಬೆಳಗಾವಿ ಕೋನವಾಳ ಗಲ್ಲಿ ನಿವಾಸಿ ಓಂ ಪುರುಷೋತ್ತಮ, ಪೀರನವಾಡಿ ಮಹಾವೀರ ನಗರ ನಿವಾಸಿ ಕೌಶಿಕ ಕಿರಣ ಮುತಗೇಕರ ಬಂಧಿತ ಆರೋಪಿಗಳಾಗಿದ್ದಾರೆ.
ದಿ. 7ರಂದು ಮೂವರು ಆರೋಪಿಗಳು ಹಳೇ ಭಾಜಿ ಮಾರ್ಕೆಟ್ ಹತ್ತಿರ ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ರ್ಮಾಟ್ ಠಾಣೆ ಪಿಎಸ್‌ಐ ವಿಠ್ಠಲ ಹಾವನ್ನವರ ಮತ್ತು ಅವರ ಸಿಬ್ಬಂದಿ ದಳಿ ನಡೆಸಿ 20,000 ರೂ. ಮೌಲ್ಯದ 3.45 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಹಾಗೂ 1,20,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮಾದಕ ವಸ್ತು ಎಲ್ಲಿಂದ ತಂದಿದ್ದೀರಿ ಎಂದು ವಿಚಾರಿಸಿದಾಗ ಬೆಳಗಾವಿ ಸಮರ್ಥ ನಗರ ನಿವಾಸಿ ರುತಿಕ ಪಾಟೀಲ ಬಳಿ ತಂದಿದ್ದಾಗಿ ತಿಳಿಸಿದ್ದಾರೆ. ಪೊಲೀಸರು ನಾಲ್ವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 