ಪ್ರಯಾಗ್ ರಾಜ್, ಫೆ 29 : ಪ್ರಧಾನಿ ನರೇಂದ್ರಮೋದಿ ಅವರು ಶನಿವಾರ ನಗರಕ್ಕೆ ಆಗಮಿಸುವ ಮುನ್ನ ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಲಾಗಿದೆ.
ನಗರದಲ್ಲಿ ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ಉಪಕರಣಗಳು ಮತ್ತು ಸಹಾಯಕ ಸಾಧನಗಳನ್ನು ವಿತರಿಸುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸುತ್ತಿದ್ದಾರೆ.
ಶುಕ್ರವಾರ ಇಲ್ಲಿಗೆ ತಲುಪಿದ ಲಂಡನ್‌ನ ಗಿನ್ನೆಸ್ ವಿಶ್ವ ದಾಖಲೆ ತಂಡ ಇಡೀ ಕಾರ್ಯಕ್ರಮವನ್ನು ದಾಖಲಿಸಿದ್ದು, ಮೂರು ದಾಖಲೆಗಳು ನಿರ್ಮಾಣವಾಗಿವೆ ಎಂದು ಪ್ರಕಟಿಸಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಗಮಿಕ್ ಸಮೀಪದ ಪೆರೇಡ್ ಮೈದಾನದಲ್ಲಿ ‘ಸಮಾಜಿಕ್ ಅಧಿಕಾರಿತ ಶಿವಿರ್’ ಎಂಬ ಶೀರ್ಷಿಕೆಯಡಿ ಸಮಾರಂಭ ನಡೆಯುತ್ತಿದ್ದು, ಪ್ರಧಾನಿಯವರೊಂದಿಗೆ ಉತ್ತರ ್ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಶನಿವಾರ ಭಾಗವಹಿಸಲಿದ್ದಾರೆ.
ಶುಕ್ರವಾರ ಸಂಜೆ 1.8 ಕಿ.ಮೀ ದೂರದ ತ್ರಿಚಕ್ರ ಸೈಕಲ್ ಸ್ಪರ್ಧೆಯಲ್ಲಿ ಮೊದಲ ದಾಖಲೆಯನ್ನು ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ 300 ತ್ರಿಚಕ್ರ ಸೈಕಲ್ ಗಳಲ್ಲಿ ದಿವ್ಯಾಂಗರು ಸಾಹಸ ಮೆರೆದರು.
ಇತರ ಎರಡು ದಾಖಲೆಗಳನ್ನು ಶನಿವಾರ ಬೆಳಿಗ್ಗೆ ನಿರ್ಮಿಸಲಾಗಿದೆ. 600 ವ್ಹೀಲ್ ಚೇರ್ ಗಳು ಮತ್ತು 400 ವ್ಹೀಲ್ ಚೇರ್ ಗಳ ಸ್ಪರ್ಧೆಯಲ್ಲಿ ದಿವ್ಯಾಂಗರು ಪಾಲ್ಗೊಂಡರು.