ಮಾಜಿ ಸಚಿವ ಶ್ರೀಮಂತ ಪಾಟೀಲರ ಜನ್ಮ ದಿನದ ಅಂಗವಾಗಿ ಆರೋಗ್ಯ ಮೇಳ, ರಕ್ತದಾನ ಶಿಬಿರದಲ್ಲಿ ಸಾವಿರಾರು ಜನ ಭಾಗಿ
ಅಥಣಿ 31: ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಅಥಣಿ ಶುಗರ್ಸ ಆವರಣದಲ್ಲಿ ಶ್ರೀಮಂತ ಪಾಟೀಲ ಫಂಡೇಶನ್ ದಿಂದ ಆಯೋಜಿಸಿದ್ದ ಮಹಾ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ಕಣ್ಣು, ಹೃದಯ ಸಂಬಂಧಿ ಕಾಯಿಲೆಗಳ ತಜ್ಞ ವೈದ್ಯರಿಂದ ತಪಾಸಣೆ ಮಾಡಿಕೊಂಡಿದ್ದಲ್ಲದೆ ಅವಶ್ಯ ಇರುವ ಅನೇಕರಿಗೆ ಉಚಿತವಾಗಿ ಚಸ್ಮಾ ವಿತರಿಸಿದರು ಜೊತೆಗೆ ತೀವೃ ಹೃದಯ ಸಂಬಂಧಿ ಕಾಯಿಲೆ ಇರುವವರನ್ನು ಉಚಿತ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸ್ಸುಮಾಡಿದರು.
ಮಹಿಳೆಯರಿಗಾಗಿ ಸ್ತ್ರೀ ರೋಗ ತಜ್ಞ ರಿಂದ ಪ್ರತ್ತೇಕ ಸ್ಥಳದಲ್ಲಿ ಸಾವಿರಾರು ಮಹಿಳೆಯರ ತಪಾಸಣೆ ಮಾಡಲಾಯಿತು.ಶುಭ ಹಾರೈಕೆ - ಮಾಜಿ ಸಚಿವ ಶ್ರೀಮಂತ ಪಾಟೀಲರ ಜನ್ಮ ದಿನದ ನಿಮಿತ್ಯ ಕಾಗವಾಡ, ರಾಯಬಾಗ, ಕುಡಚಿ, ಅಥಣಿ ಮತಕ್ಷೇತ್ರ ಸೇರಿದಂತೆ ಪಕ್ಕದ ಮಹಾರಾಷ್ಟ್ರದ ಸಾಂಗಲಿ, ಕೊಲ್ಹಾಪುರ, ಮೀರಜ, ಜತ್ತ ಸೇರಿದಂತೆ ಅನೇಕ ನಗರ, ಮಹಾನಗರಗಳಿಂದ ಶ್ರೀಮಂತ ಪಾಟೀಲರ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಜನ ಸಾಮಾನ್ಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ಮುಖಂಡ ಶ್ರೀಮಂತ ಪಾಟೀಲರಿಗೆ ಹೂ ಗುಚ್ಛ, ಹಾರ, ಶಾಲು ಹಾಕುವ ಮೂಲಕ ಶುಭ ಕೋರಿದರು.ಕಡು ಬಡವರ ಹಿತೈಷಿ - ಸೇವಾ ಮನೋಭಾವುಳ್ಳ ಮಾಜಿ ಸಚಿವ ಶ್ರೀಮಂತ ಪಾಟೀಲರು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಕಡು ಬಡವರ ಹಿತೈಷಿಯಾಗಿ, ಬಡವರ ಬಂಧುವಾಗಿದ್ದಾರೆ.
ಉದ್ಯಮಿಯಾಗಿ, ಪ್ರಾಮಾಣಿಕ ರಾಜಕಾರಣಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನ ಸಾಮಾನ್ಯರ, ಕಡು ಬಡವರ ಹೃದಯದಲ್ಲಿದ್ದಾರೆ ಎಂದು ಕೆ.ಎಮ್.ಎಫ್ ಮಾಜಿ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಹೇಳಿದರು. ಅಭಿವೃದ್ಧಿಯ ಹರಿಕಾರ - ಕಾಗವಾಡ ಮತಕ್ಷೇತ್ರದ ಶಾಸಕರಾಗಿ, ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಇವರು ಹಿಂದುಳಿದ ಕಾಗವಾಡ ಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ, ಗ್ರಾಮೀಣ ಭಾಗದಲ್ಲಿ ರಸ್ತೆ, ರಾಜ್ಯ ಹೆದ್ದಾರಿ, ಅಂತರ್ಜಲ ಸಂರಕ್ಷಣೆಗಾಗಿ ಬಾಂದಾರ ನಿರ್ಮಾಣ ಸೇರಿದಂತೆ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿ ಹೊರ ಹೊಮ್ಮಿದ್ದಾರೆ ಎಂದು ಅವತಾಡೆ ಹೇಳಿದರು.
ಸಾವಿರಕ್ಕೂ ಹೆಚ್ಚು ಜನ ಆರೋಗ್ಯ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಮಾಡಿಕೊಂಡರು ಮತ್ತು ರಕ್ತ ದಾನ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಯುವಕರು ರಕ್ತ ದಾನ ಮಾಡಿದರು. ಈ ಸಂದರ್ಭದಲ್ಲಿ ಸಿಸ್ಮಾ ಅಧ್ಯಕ್ಷ ಯೋಗೇಶ್ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರು, ಶ್ರೀನಿವಾಸ ಪಾಟೀಲ, ಶಿವನೇರಿ ಶುಗರ್ಸ ಅಧ್ಯಕ್ಷ ಸುಶಾಂತ ಪಾಟೀಲ, ಧುರೀಣರಾದ ದಾದಾ ಪಾಟೀಲ, ನಾನಾಸಾಹೇಬ ಅವತಾಡೆ, ದಾದಾ ಶಿಂಧೆ, ಅಭಯ ಅಕ್ಕಿವಾಟೆ, ಈಶ್ವರ ಕುಂಬಾರೆ, ಆರ್.ಎಮ್.ಪಾಟೀಲ, ಬಾಳು ಹಜಾರೆ, ಬೀರ್ಪ ಉಗಾರೆ, ದೀಪಕ ಸೂರ್ಯವಂಶಿ, ಸಿದ್ದು ಪಾಟೀಲ, ಸಂಜೀವ ಜಾಧವ, ಸಂದೀಪ ಪಾಟೀಲ, ಅಬಾಸಾಬ ಚವ್ಹಾಣ, ಸಂಬಾಜಿ ವೀರ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.