ಬಾವಿ ನೀರಿಗೆ ವಿಷ ಬೆರಸಿದ ಆರೊಪ; ಸಾವಿರಾರು ಮೀನು, ಆಮೆಗಳು ಸಾವು

ಬಾವಿ ನೀರಿಗೆ ವಿಷ ಬೆರಸಿದ ಆರೊಪ; ಸಾವಿರಾರು ಮೀನು, ಆಮೆಗಳು ಸಾವು Thousands of fish and turtles die after well water is contaminated with poison

ಸಂಬರಗಿ, 17 ; ಶಿವನೂರಿನಲ್ಲಿ ಮಾಜಿ ಸೈನಿಕ ರಮೇಶ್ ಸೀತಾರಾಮ್ ಚವ್ಹಾಣ್ ಅವರ ಬಾವಿಯ ನೀರಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಬೆರೆಸಿದ ಪರಿಣಾಮ ಸಾವಿರಾರು ಮೀನುಗಳು ಮತ್ತು ಆಮೆಗಳು ಸಾವನ್ನಪ್ಪಿವೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಘಟನೆ ವಿವರ, ರಮೇಶ್ ಸೀತಾರಾಮ್ ಚವ್ಹಾಣ್ ತಮ್ಮ ಕೆಲಸದ ನಿಮಿತ್ತ ಬೇರೆ ಗ್ರಾಮಕ್ಕೆ ಹೋಗಿದ್ದರು. ಮರಳಿ ಊರಿಗೆ ಬಂದಾಗ ಅವರು, ಬಾವಿಯಲ್ಲಿ ನೋಡಿದಾಗ ಸಾವಿರಾರು ಮೀನುಗಳು ಮತ್ತು ಆಮೆಗಳು ಮೃತಪಟ್ಟಿದ್ದಾವೆ ನೀರಿನ ಬಣ್ಣ ಬದಲಾಗಿರುವುದನ್ನು ಅವರು ಕಂಡುಕೊಂಡರು.  

ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣ, ಪಿಎ??? ಮಲ್ಲಿಕಾರ್ಜುನ್ ಉಪ್ಪಾರ್ ಸ್ಥಳಕ್ಕೆ ಧಾವಿಸಿ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಅದನ್ನು ಪರೀಕ್ಷಿಸಿದಾಗ, ಅದರಲ್ಲಿ ವಿಷ ಕಂಡುಬಂದಿದೆ. ಯಾರು ವಿಷ ಬೆರೆಸಿದ ಮತ್ತು ಏಕೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಬಾವಿಯಲ್ಲಿರುವ ನೀರನ್ನು ಕುಡಿಯಲು ಹಾಗೂ ಜಾನವರಗೆ ಕುಡಿಯಲು ಬಳಸಲಾಗುತ್ತಿತ್ತು. ಈ ಬಾವಿಗೆ ವಿಷ ಬೆರೆಸಿದವರ ಬಗ್ಗೆ ಪೊಲೀಸರು ವಿವರವಾಗಿ ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲವಾಗಿದೆ.  ಮಾಜಿ ಸೈನಿಕರ ಸಂಘದ ಸ್ಥಾಪಕ ಅಧ್ಯಕ್ಷ ಗುರ​‍್ಪ  ಮಗ್ದುಮ್ ಸೇರಿದಂತೆ ಹಲವಾರು ಮಾಜಿ ಸೈನಿಕರ ಮನೆಗಳಿಗೆ ಭೇಟಿ ನೀಡಿ ಅವರನ್ನು ಪ್ರಶ್ನಿಸಿದರು. ಯಾರು ವಿಷ ಬೆರೆಸಿದ ಆರೋಪದ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.