ಮಾಸ್ಕೋ, ನ 12 : ಚಿಕಾಗೋದಲ್ಲಿ ಅತಿ ಹೆಚ್ಚು ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಓಹರ ಮತ್ತು ಮಿಡ್ ವೇ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣಗಳಲ್ಲಿ ಸಾವಿರಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ, ಸೋಮವಾರ ಓಹರ ವಿಮಾನ ನಿಲ್ದಾಣದಿಂದ 1094 ಹಾಗೂ ಮಿಡ್ ವೇ ಯಿಂದ 98 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಚಿಕಾಗೋ ನಗರದ ಉತ್ತರ ಹಾಗೂ ಮಧ್ಯಭಾಗದಲ್ಲಿ ಭಾರಿ ಮಂಜು ಸುರಿಯಲಿದ್ದು, ನೆಲದ ಮೇಲ್ಮೈ ಮೇಲೆ ಮೂರರಿಂದ ಆರು ಇಂಚುಗಳ ಮಂಜನ್ನು ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಬಿಸಿ ವರದಿಗಾರನ ವರದಿ ಪ್ರಕಾರ, ಓಹರ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಮಂಜು ತುಂಬಿದ್ದ ಕಾರಣ ಅಲ್ಲಿ ಸಿಲುಕಿದ್ದ ಅಮೆರಿಕ ಏರ್ ಲೈನ್ಸ್ ನ ಒಂದು ವಿಮಾನವನ್ನು ಹೊರತೆಗೆಯಲಾಯಿತು.