ಜೀವನದ ಆದರ್ಶಗಳನ್ನು ಎತ್ತಿ ಹಿಡಿದವರು ವಚನಕಾರ್ತಿಯರು

 ಜೀವನದ ಆದರ್ಶಗಳನ್ನು ಎತ್ತಿ ಹಿಡಿದವರು ವಚನಕಾರ್ತಿಯರು  Those who uphold the ideals of life are the Vachanakartis.

ಲೋಕದರ್ಶನ ವರದಿ 


ಜೀವನದ ಆದರ್ಶಗಳನ್ನು ಎತ್ತಿ ಹಿಡಿದವರು ವಚನಕಾರ್ತಿಯರು  

ಹಾವೇರಿ 15 :ಅಂದಿನ ಸಮಾಜದಲ್ಲಿ ತುಂಬಿದ್ದ ಜಾತಿಯ ವಿಷಮತೆ, ಢಾಂಭಿಕತೆ, ಸಾಂಪ್ರದಾಯ, ಅರ್ಥಹೀನ ವಿಚಾರಗಳನ್ನು ಧೈರ್ಯದಿಂದ, ಖಡಾ ಖಂಡಿತವಾಗಿ, ನಿಷ್ಠುರವಾಗಿ ಟೀಕಿಸಿ ಜೀವನದ ಆದರ್ಶಗಳನ್ನು ಎತ್ತಿ ಹಿಡಿದವರು ವಚನಕಾರ್ತಿಯರು ಎಂದು ಪ್ರಭುಸ್ವಾಮಿ ಮಠ ಗುರುಸಿದ್ಧ ಸ್ವಾಮೀಜಿಯವರು ಹೇಳಿದರು.  

      ತಾಲೂಕಿನ ಅಗಡಿ ಗ್ರಾಮದ ಅಕ್ಕಿಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಾಲ್ಕುದಿನಗಳವರೆಗೆ ಏರಿ​‍್ಡಸಿರುವ ‘ಗುರುವಿನ ನಡೆಗೆ ಓಣೆಯ ಕಡೆಗೆ’ ಕಾರ್ಯಕ್ರಮವನ್ನು ಗುರುವಾರ ಬಸವರಾಜ ಶಿವಣ್ಣನವರು ಬಡಾವಣೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

     ಜಾತಿ, ಧರ್ಮಗಳ ಸಂಘರ್ಷದಲ್ಲಿ ಸಮಾಜ ನಲುಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಾಡಿನಲ್ಲಿ ಅಯೋಮಯ ವಾತಾವರಣದಿಂದ ಮನೆ ಮನಗಳು ಕಲುಷಿತಗೊಂಡಿದೆ. ರೋಗ ಗ್ರಸ್ಥ ಸಮಾಜಕ್ಕೆ ಬಸವಾದಿ ಶರಣರ ವಚನಗಳು ದಿವ್ಯ ಓಷಧಗಳಾಗಿವೆ ಎಂದು ಸ್ವಾಮೀಜಿ ತಿಳಿಸಿದರು.   

      ಜೈ ಮಾನವ ಸೇವಾ ಸಂಸ್ಥೆಯ ಕಾರ್ಯದರ್ಶಿ ಮೌಲನ ಮುಸ್ತಫಾ ನಈಮಿ ವಚನಗಳಲ್ಲಿ ಸಾಮರಸ್ಯ ಕುರಿತು ಮಾತನಾಡಿ, 12ನೇ ಶತಮಾನದಲ್ಲಿ ನಡೆದ ಸಾಹಿತಿಕ ಚಳುವಳಿಯ ಮೌಲಿಕ ದಾಖಲೆಯಾಗಿ ಉಳಿದಿರುವ ಸೊತ್ತೆಂದರ ವಚನ ಸಾಹಿತ್ಯ. ಇದು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಅಂದಿನ ಪರಿಸರ, ಜನಜೀವನದ ಅಸ್ತು-ವ್ಯಸ್ತಯ ಶೋಷಣೆಗೊಳಗಾದ ಬದುಕು,  ಬತ್ತಿದ ಜೀವನೋತ್ಸಾಹ ಇವೆಲ್ಲ ವಚನಕಾರರ ಹೃದಯ ಚಿಂತನೆಗೆ ಕಾರಣಗಳಾದವು ಎಂದು ಹೇಳಿ ಗುರುಲಿಂಗ ಸ್ವಾಮೀಜಿಯವರು ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. 

     ಗುರುಲಿಂಗ ಸ್ವಾಮೀಜಿ ಮಾತನಾಡಿ, ಪರಿವರ್ತನೆ ಎನ್ನುವುದು ಬಹಿರಂಗ ಕ್ರಿಯೆಯಾದರೆ ಸಾಲದು. ಅಂತರಂಗದ ಪರಿವರ್ತನೆ ಆಗಬೇಕು. ಈಗ ಮಠವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಸದ್ಭಕ್ತರೇ ಮಠದ ಸಂಪತ್ತು. ಮಕ್ಕಳು ವಚನಗಳನ್ನ ಪಚನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

      ಎಲ್ಲಮ್ಮದೇವಿ ದೇವಸ್ಥಾನದ ಅಧ್ಯಕ್ಷೆ ಎಲ್ಲಮ್ಮ ಶ್ಯಾವಿ, ಗ್ರಾಮ ಪಂಚಾಯತಿಯ ನಾಗರತ್ನ ಮಣೇಗಾರ, ಬಸವರಾಜ ಕಡ್ಲಿ, ಮಂಜಯ್ಯ ಹಿರೇಮಠ, ಶಿವಣ್ಣ ಜವಳಿ, ಬಸವರಾಜ ಯಾತಗಿ, ರವೀಂದ್ರ​‍್ಪ ಹಳ್ಳಳ್ಳಿ, ಪ್ರಭಣ್ಣ ಪಟ್ಟಣಶೆಟ್ಟಿ, ಸುಭಾಸ ಬಸಗಣ್ಣಿ, ಮಹಾದೇವಕ್ಕ ಜವಳಿ ಮುಂತಾದವರು  ವೇದಿಕೆಯಲ್ಲಿದ್ದರು.  

     ಬುದಗಟ್ಟಿ ಭಜನಾ ಸಂಘದವರಿಂದ ಭಜನೆ ನಡೆಯಿತು. ಕೇಶವ ಅಕ್ಕಿ ಸ್ವಾಗತಿಸಿದರು, ಉಪನ್ಯಾಸಕ ಗುಡ್ಡಪ್ಪ ಚಟ್ರಮ್ಮನವರ ನಿರೂಪಿಸಿದರು, ರಾಘವೇಂದ್ರ ಈಳಗೇರ ವಂದಿಸಿದರು. ಒಂದು ಮತ್ತು ಎರಡನೇ ವಾರ್ಡಿನ ಸದಸ್ಯರಿಂದ ಪ್ರಸಾದ ಸೇವೆ ನಡೆಯಿತು.ಯಿ