ನುಡಿದವರು ನಡಿತಾ ಇಲ್ಲ : ಮುರುಘೇಂದ್ರ
Those who spoke, did not act: Murughendra
ಶಿಗ್ಗಾವಿ 12 : ಈ ಸಮಾಜಕ್ಕೆ ಹೇಳಿದ್ದು ನಾಟತಾ ಇಲ್ಲ ನುಡಿದವರು ನಡಿತಾ ಇಲ್ಲ ಏಕೆಂದರೆ ಹಿಂದಿನ ಶರಣರು ನಡಿತಾ ಇದ್ದರೂ ನುಡಿತಾ ಇದ್ದರು ಎಂದು ಶೂನ್ಯ ಸಂಪಾದನ ಮಠ ಗೋಕಾಕ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ನಡೆದ 33 ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಧ್ಯಕ್ಷತೆವಹಿಸಿ ಆರ್ಶಿವಚನ ನೀಡಿ ಮಾತನಾಡಿ ಅವರು ಭಕ್ತಿ ಪಥವ ತೋರಲಿಕ್ಕೆ ಬಂದವರು. ವಚನಗಳನ್ನು ಆಲಿಸಿದನಂತರ ಅವುಗಳನ್ನು ಒಲಿಸಿಕೊಂಡು ಧರ್ಮದ ಕಡೆಗೆ ನಡೆಯಬೇಕು ಅಂದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ತ್ರಿವೀದ ದಾಸೋಹಿ ಧಾರವಾಡ ಮುರುಘಾಮಠ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆರ್ಶಿವಚನ ನೀಡಿ ಮಾತನಾಡಿ ದೂರದರ್ಶನ, ಗಣಕಯಂತ್ರ, ಮೊಬೈಲ್ ಯುಗದಲ್ಲಿ ಎಲ್ಲವುಗಳನ್ನು ತ್ಯಾಗ ಮಾಡಿ ಶರಣ ಸಂಸ್ಕೃತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿರುವುದು ಶ್ಲಾಘನೀಯ ಅಲ್ಲದೇ ಇಂತಹ ಧರ್ಮ ಸಭೆಯಲ್ಲಿ ಪಾಲ್ಗೊಂಡಾಗ ಮಾತ್ರ ಅಂತರಂಗ ಶುದ್ದಿಯ ಜೊತೆಗೆ ಧರ್ಮ ಶುದ್ದಿಯಾಗುತ್ತದೆ. ಅಲ್ಲದೇ ಜ್ಞಾನಕೋಸ್ಕರ ಅನೇಕ ಹೋರಾಟಗಳನ್ನು ಮಾಡಬೇಕು. ಏನಾದರೂ ಹಾಗೂ ಮೊದಲು ಮಾನವನಾಗು ಹಾಗೂ ಮನುಷ್ಯತ್ವ ಹೊಂದಿದ ಜನಾನುರಾಗಿಯಾಗು ಎಂದರು.
ಹಾವೇರಿ ಹೊಸಮಠ ಬಸವಲಿಂಗ ಶ್ರೀಗಳು ಆರ್ಶಿವಚನ ನೀಡಿ ಮಾತನಾಡಿ ಒಬ್ಬ ಗುರು ಸತ್ತ ನಂತರ ಅವನ ಸತ್ಕಾರ ಚಿರಾಯಿಯಾಗಿರುತ್ತದೆ ನಮಗೆ ಆದರ್ಶ ಯಾರು ಎಂದರೆ ಬಸವಣ್ಣನವರು ಸಂಸ್ಕಾರ ಸಂಸ್ಕೃತಿ ಉತ್ಸವ ಆದರ್ಶ ಕಾರ್ಡ ಉಳಿಯಬೇಕು. ಕೊಡುವ ಕೈ ಹೆಚ್ಚಾದಾಗ ಇಂತಹ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮಠ ಮಾನ್ಯಗಳನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯವಾದದು ಎಂದರು. ಬಟಕುರ್ಕಿ ಚೌಕಿಮಠ ಬಸವಲಿಂಗ ಶ್ರೀಗಳು ಆರ್ಶಿವಚನ ನೀಡಿ ಮಾತನಾಡಿ ಜಗತ್ತಿನಲ್ಲಿ ಅನೇಕ ಜನ ಮರಣ ಹೊಂದಿದ್ದಾರೆ ಅವರ ಸ್ಮರಣೆ ಮಾಡುವುದಿಲ್ಲ ಏಕೆಂದರೆ ಸಮಾಜದ ಅಭಿವೃದ್ಧಿಗೋಸ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಶರಣರನ್ನು ಸ್ಮರಿಸುವುದೇ ಶರಣ ಸಂಸ್ಕೃತಿ ಉತ್ಸವ ಎಂದರು. ಸದಮಲ ಜ್ಞಾನಿ ಕುರಿತು ಶ್ರೀ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜರು ಪ್ರವಚನವನ್ನು ನಿರ್ವಹಿಸಿದರು.
ದಿವ್ಯ ಸಾನಿಧ್ಯ ಸಂಗನಬಸವ ಶ್ರೀಗಳು ಹಾಗೂ ಬಸವಲಿಂಗ ದೇವರು ಸಮ್ಮುಖವಹಿಸಿದ್ದರು. ಮಕ್ಕಳ ತಜ್ಞ ವೈದ್ಯರಾದ ಡಾ.ಮಹೇಶ ಜಗದವರ, ಸಂಗೀತ ಸೇವೆಯನ್ನ ಡಾ ಶಿದ್ದಲಿಂಗಪ್ಪ ನರೇಗಲ್ಲ್, ತಬಲಾ ಸಾಥ ಬಸವರಾಜ ವಂದಲಿ, ತತ್ವ ಪದ ಸೇವೆ ಬಸವರಾಜ ಶಿಗ್ಗಾಂವ, ಪಕ್ಕಿರೇಶ ಕೊಂಡಾಯಿ, ಶರೀಫ ಮಾಕ್ಕಪ್ಪನವರ, ಹೇಮಂತ ಭಜಂತ್ರಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪ್ರೋ ಶಶಿಕಾಂತ ರಾಠೋಡ, ಶಿವಾನಂದ ಮ್ಯಾಗೇರಿ, ಮಲ್ಲೇಶಪ್ಪ ಹರಿಜನ, ಸಿ.ಡಿ.ಯತ್ನಳ್ಳಿ, ನಾಗಪ್ಪ ಬೆಂತೂರ, ರಮೇಶ ಹರಿಜನ, ಶಂಭು ಕೇರಿ, ಬಸಲಿಂಗಪ್ಪ ನರಗುಂದ, ಪಿ.ವ್ಹಿ.ತೆಂಬದಮನಿ ಸೇರಿದಂತೆ ಭಕ್ತ ಸಮೂಹ ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ನಾಯ್ಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 