ಎಚ್‌.ವೈ.ಮೇಟಿ ನಿಧನಕ್ಕೆ ತೋಂಟದಶ್ರೀ ಸಂತಾಪ

ಎಚ್‌.ವೈ.ಮೇಟಿ ನಿಧನಕ್ಕೆ ತೋಂಟದಶ್ರೀ ಸಂತಾಪ Thontadasri condoles the death of H.Y. Mati

ಆಲಮಟ್ಟಿ 05: ಬಾಗಲಕೋಟೆ ಮತಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಎಚ್‌.ವೈ.ಮೇಟಿ (80) ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಕ್ಕೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ತೋಂಟದ ಡಾ, ಸಿದ್ದರಾಮ ಮಹಾಸ್ವಾಮಿಗಳು,  ಗದಗ ಜೆಟಿವಿಪಿ ಹಾಗೂ ಆಲಮಟ್ಟಿ ಎಸ್‌.ವಿ.ವಿ.ಸಂಸ್ಥೆಯ ಕಾರ್ಯದರ್ಶಿ ಪ್ರೊ ಶಿವಾನಂದ ಪಟ್ಟಣಶೆಟ್ಟರ ಹಾಗೂ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಶಾಲಾ, ಕಾಲೇಜಿನ ಮುಖ್ಯಸ್ಥರು ಸೇರಿದಂತೆ ಸಿಬ್ಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.       ಶಾಸಕರಾಗಿದ್ದ ಎಚ್‌.ವೈ.ಮೇಟಿ ಆಲಮಟ್ಟಿ ಆರಿ​‍್ಬ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಸರಳತೆಭಾವದಿಂದಲೇ ಗುರುತಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಮುಗ್ಧತೆ ತತ್ವ, ಸತ್ವದ ಭಾವ ಇದುವೇ ಮೇಟಿ ಅವರ ಮೇರು ವ್ಯಕ್ತಿತ್ವದ ಚರಿತೆಗಳಾಗಿವೆ. ಗ್ರಾಮೀಣ ಸೊಗಡಿನ ಮುಗ್ಧತೆ ಮೊಗನೋಟಭಾವದ ವಿಶೇಷ ಛಾಪು ಮೇಟಿ ಅವರದ್ದು. ಇದು ಜನಾಕಷಿ9ತ ಕಳಕಳಿ ಮೇಳದಲ್ಲಿ ಮಿಂದಿವೆ. ಸಕಲರನ್ನು ಆತ್ಮೀಯತೆಯಿಂದ ಕಂಡಿರುವ ಮೇಟಿ ಅವರ ಬದುಕಿನ ರಾಜಕೀಯ ವೈವಿಧ್ಯತೆಯನ್ನು ಕಂಡಿವೆ.ಅವರ ಜೀವನ ಶೈಲಿ ಕ್ರಿಯಾಶೀಲ ಪದದಲ್ಲಿ ಹೊರಳಿವೆ. ಜಾತಿ, ಮತ, ಪಂಥ ಎನ್ನದೇ ಜನಸಾಮಾನ್ಯರೊಂದಿಗೆ ಬೆರೆತು ಕಾಯಕ ಗೈದಿರುವ ಅಪರೂಪದ ಜೀವ. ಸೌಮ್ಯತೆ ಭಾವದ ಅವರ ಸರಳ ನಡೆ,ನುಡಿ ಜನಮಾನಸದಲ್ಲಿ ಆಜರಾಮರಾಗಿವೆ. ಎಲ್ಲ ಸಮುದಾಯದವರನ್ನು ತನ್ನವರೆಂದು ಪ್ರೀತಿ, ವಿಶ್ವಾಸದಂದ ಆದರಿಸುತ್ತಾ ಮೂಡಿಸಿರುವ ಹೆಜ್ಜೆ ಗುರುತು ವೈಶಿಷ್ಟ್ಯವಾಗಿವೆ. ಇಂಥ ವಿಶೇಷ ಶೈಲಿಯ ಜನೋಪಕಾರಿ ಶಾಸಕ ನಮ್ಮ ಆಲಮಟ್ಟಿ ಎಸ್‌.ವಿ.ವಿ. ಸಂಸ್ಥೆಯ ವಚನ ಪಿತಾಮಹ ಹಳಕಟ್ಟಿ ಪ್ರೌಢಶಾಲೆಯಲ್ಲಿ 8 ನೇ ಕಲಿತಿರುವುದೇ ಹೆಮ್ಮೆಯ ಸಂಗತಿ. ಸೌಮ್ಯೋತಿಯ ತಮ್ಮ ಆಲೋಚನಾ ವಿಚಾರಗಳ ಸಾಂಗತ್ಯದಿಂದಲೇ ಶಾಸಕರಾಗಿ, ಸಂಸದರಾಗಿ, ಮಂತ್ರಿಗಳಾಗಿ ಅಜಾತಶತ್ರು ಬಿಂಬಿತದೊಂದಿಗೆ ಮೇಟಿ ಅವರು ಬಾಗಲಕೋಟೆ ಜಿಲ್ಲೆಯ ರಾಜಕಾರಣದ ಇತಿಹಾಸದಲ್ಲಿ ಅಚ್ಚಳಿಯ ನೋಟ ಬೀರಿರುವ ಮುಗ್ಧ ಜೀವ ಚೈತ್ರರಾಗಿದ್ದಾರೆ. ಅವರ ಅಕಾಲಿಕ ಅಗಲುವಿಕೆ ನೋವನ್ನುಂಟು ಮಾಡಿದೆ. ಮೇಟಿ ಅವರ ಕುಟುಂಬ ಸದಸ್ಯರಿಗೆ, ಒಡನಾಡಿ ಆಪ್ತರಿಗೆ,ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಜೆಟಿವಿಪಿ ಹಾಗೂ ಎಸ್‌.ವಿ.ವಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ ಶಿವಾನಂದ ಪಟ್ಟಣಶೆಟ್ಟರ ಪ್ರಾಥಿ9ಸಿ ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.    

ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ತಮ್ಮ ಶೋಕ ಸಂದೇಶದಲ್ಲಿ, ನಮ್ಮ ಆಲಮಟ್ಟಿ ಆರಿ​‍್ಬ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ 1960-1961 ರಲ್ಲಿ ಎಚ್‌.ವೈ ಮೇಟಿ ಅವರು 8 ನೇ ತರಗತಿ ಕಲಿತಿದ್ದಾರೆ. ಶಾಲಾ ದಾಖಲಾತಿಯಲ್ಲಿ ಮೇಟಿ ಅವರ ಜನ್ಮದಿನಾಂಕ 18-02-1945 ಇದೆ ಎಂದಿದ್ದಾರೆ. ಎಂ.ಎಚ್‌.ಎಂ.ಪಪೂ ಹಾಗೂ ಪದವಿ ಕಾಲೇಜು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ, ಎಂ.ಎಚ್‌.ಎಂಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್‌.ಆಯ್‌.ಗಿಡ್ಡಪ್ಪಗೋಳ ಸೇರಿದಂತೆ ಉಪನ್ಯಾಸಕರು, ಶಿಕ್ಷಕ ಸಿಬ್ಬಂದಿಗಳು ಮೇಟಿ ಅವರ ನಿಧನಕ್ಕೆ ಶೋಕ ಸಂತಾಪದೊಂದಿಗೆ ಕಂಬನಿ ಮಿಡಿದ್ದಾರೆ.