ಬೆಳೆಗಾರರ ಚಿತ್ತ ಈಗ ಸಕ್ಕರೆ ಕಾರ್ಖಾನೆಗಳ ದರ ನಿಗದಿಯತ್ತ

ಪ್ರಸಕ್ತ ವರ್ಷದ ಕಬ್ಬಿನ ಹಂಗಾಮಿಗೆ ದಿನಗಣನೆ ಆರಂಭ 

ಮಾಂಜರಿ /ಸಂತೋಷಕುಮಾರ ಕಾಮತ  

ಮಾಂಜರಿ 04: ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ವಿಜಾಪುರ  ಬಾಗಲಕೋಟೆ ಜಿಲ್ಲೆಕಬ್ಬು ಉತ್ಪಾದನೆ ಹಾಗೂ ನುರಿಸುವಿಕೆಯಲ್ಲಿ ಪ್ರಮುಖವಾಗಿದ್ದು, ಹೀಗಾಗಿ ಪ್ರಸಕ್ತ ವರ್ಷದ ಕಬ್ಬು ಹಂಗಾಮಿಗೆ ಸಿದ್ಧತೆಗಳು ಜೋರಾಗಿವೆ.  

ಕಳೆದ ವರ್ಷ ಬರ ಕಂಡಿದ್ದ ರೈತರು ಈ ಬಾರಿ ಉತ್ತಮ ಮಳೆಯಿಂದ ಕಬ್ಬಿನ ಇಳುವರಿ ಹೆಚ್ಚಾಗುವ ನೀರೀಕ್ಷೆಯಲ್ಲಿದ್ದಾರೆ. ಆದರೆ ಎಫ್‌ಆರ​‍್ಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿಗದಿ ಬಗ್ಗೆ ಆಕ್ಷೆ?ಪವಿದ್ದು, ಕಾರ್ಖಾನೆಗಳ ದರ ನಿಗದಿಯತ್ತ ರೈತರು ದೃಷ್ಟಿ ನೆಟ್ಟಿದ್ದಾರೆ  

ನ.15 ರಿಂದ ಕ್ರಶಿಂಗ್‌:  

ಜಿಲ್ಲೆಯಲ್ಲಿ ಸದ್ಯ 24 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಹೊಸದಾಗಿ ಮತ್ತು ಬಂದ್ ಆಗಿದ್ದ  ಕಾರ್ಖಾನೆ ಪುನಾರಂಭಗೊಂಡಿದ್ದು ಈ ಬಾರಿ ಕಬ್ಬು ನುರಿಸಲಿದೆ. ಹೀಗಾಗಿ ಮತ್ತೊಂದು ಕಾರ್ಖಾನೆ ಕಬ್ಬು ನುರಿಸುವ ಪಟ್ಟಿಯಲ್ಲಿ ಸೇರಲಿದೆ. ಕಳೆದ ವರ್ಷ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 1, 72, 97, 022 ಮೆ.ಟನ್ ಕಬ್ಬು ನುರಿಸಿವೆ. ಈ ವರ್ಷವೂ ಇಷ್ಟೆ? ಪ್ರಮಾಣದಲ್ಲಿ ಕಬ್ಬು ನುರಿಸುವ ಗುರಿಯಿದೆ. ಸರಕಾರ ನ.15 ರಿಂದ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲು ಆದೇಶಿಸಿದೆ. ನ.15 ರೊಳಗೆ ಪ್ರತಿ ಟನ್ ಕಬ್ಬಿಗೆ ದರ ನಿಗದಿಯಾದರೆ ಹಂಗಾಮು ಸುಲಲಿತವಾಗಿ ನಡೆಯಲಿದೆ.  

ದರಕ್ಕೆ ರೈತರ ಆಕ್ಷೇಪ:  

ಕೇಂದ್ರ ಸರಕಾರ ಎಫ್‌ಆರ​‍್ಿ ದರವನ್ನು 3, 400 ರೂ.ಗಳಿಗೆ ನಿಗದಿಗೊಳಿಸಿದ್ದು ರೈತರ ಆಕ್ರೊ?ಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಪ್ರತಿ ಟನ್ಗೆ 3, 150 ರೂ. ನಷ್ಟಿದ್ದ ದರವನ್ನು 250 ರೂ. ನಷ್ಟು ಹೆಚ್ಚಿಸಲಾಗಿದೆ. ಆದರೆ ಇಳುವರಿ ಪ್ರಮಾಣ ಶೇ.10.25ಕ್ಕೆ ನಿಗದಿಗೊಳಿಸಿದ್ದು ಅವೈಜ್ಞಾನಿಕ ಎನ್ನುವುದು ರೈತರ ವಾದ. ಕಳೆದ ಮೂರು ವರ್ಷಗಳಿಂದ ಇಳುವರಿಯ ಮಾನದಂಡ ಹೆಚ್ಚಿಸಿದ ಕಾರಣ ಇಳುವರಿ ಪ್ರಮಾಣ ಕಡಿಮೆಯಾದಾಗ ರೈತರು ಹಾನಿ ಅನುಭವಿಸಿದ್ದಾರೆ. ಹೀಗಾಗಿ ಶೇ.9.5 ಇಳುವರಿಯುಳ್ಳ ಕಬ್ಬಿನ ಪ್ರತಿ ಟನ್ಗೆ 4, 500 ರೂ. ನಿಗದಿಗೊಳಿಸಿ ಎಂಬುದು ಪ್ರಬಲ ಬೇಡಿಕೆ. ಜತೆಗೆ ಹಲವು ಕಾರ್ಖಾನೆಗಳು ಬಾಕಿ ಪಾವತಿಸಬೇಕಿದ್ದು, ಎರಡೂ ಬೇಡಿಕೆ ಈಡೇರಿಕೆಗೆ ರೈತರು ಮನವಿ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಯಾವ ನಿರ್ಧಾರ ತಳೆಯುತ್ತವೆ ಎಂಬ ವಿಚಾರದ ಮೇಲೆ ದರ ಘೋಷಣೆಯಾಗಲಿದೆ.  

ಉದ್ಯೋಗ ಸೃಷ್ಟಿ  

ಕಬ್ಬಿನ ಹಂಗಾಮು ಎಂದರೆ ಉದ್ಯೊ?ಗಗಳ ಸೃಷ್ಟಿ ಎಂದೇ ಬಿಂಬಿತ. ಜಿಲ್ಲೆಯಾದ್ಯಂತ ಐದು ತಿಂಗಳು ಕಬ್ಬು ಕೃಷಿ ಸಕ್ರಿಯವಾಗುತ್ತದೆ. ಕಬ್ಬು ಸಾಗಣೆಗಾಗಿ ಬರುವ ಗ್ಯಾಂಗ್ಗಳು, ಟ್ರ್ಯಕ್ಟರ್ ಮಾಲೀಕರು, ಕಾರ್ಖಾನೆಗಳ ಬಳಿ ಹೋಟೆಲ್ ನಡೆಸುವವರು, ಸಾವಿರಾರು ಕಾರ್ಮಿಕರು ಕೆಲಸ ಗಳಿಸುತ್ತಾರೆ. ಜಿಲ್ಲೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ.  

ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿಕಬ್ಬಿನ ದರ ಸಮರ​‍್ಕವಾಗಿ ನೀಡಲು ಆಗ್ರಹಿಸಿದ್ದೆ?ವೆ. ಸರಕಾರ ಇಳುವರಿ ಹೆಚ್ಚಿಸಿ ದರ ಹೆಚ್ಚಿಸಿದ್ದೆ?ವೆ ಎಂದು ಹೇಳಿಕೊಳ್ಳುವುದು ಅವೈಜ್ಞಾನಿಕ. ರೈತರ ಹಾನಿ ಸರಿದೂಗಿಸಿ ಸಮರ​‍್ಕ ದರ ಘೋಷಣೆಯಾಗಬೇಕು ಎಂದು ಮಾಜಿ ಸಂಸದ ಹಾಗೂ ಶೇತಕರಿ ಸಂಘಟನೆಯ ಮುಖ್ಯಸ್ಥ ರಾಜು ಶೇಟ್ಟಿ , ಕಬ್ಬು ಬೆಳೆಗಾರರ ಮುಖಂಡ ಹೇಳಿದ್ದಾರೆ.