ಕಲ್ಲಿನ ಕಣಿಯಿಂದಾಗಿ ಕೋಲಾರ ಬ್ರೀಡ್ಜ್ ಅಪಾಯದಲ್ಲಿ
ಕಲ್ಲಿನ ಕಣಿಯಿಂದಾಗಿ ರೈತರಿಗೆ ಸಮಸ್ಯೆ: ಕೂಡಲೇ ಬಂದ್ ಮಾಡಲು ಆಗ್ರಹ
ವಿಜಯಪುರ 03: ಜಿಲ್ಲೆಯ ಕೋಲಾರನ ಸರ್ವೇ ನಂಬರ 718ರಲ್ಲಿ ಕಲ್ಲಿನ ಕಣಿಯಿಂದಾಗಿ ಸುತ್ತಮುತ್ತಲಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹಾಗೂ ಸಮೀಪದಲ್ಲಿರುವ ರಾಜ್ಯದ ಎರಡನೇ ಅತಿ ದೊಡ್ಡ ಸೇತುವೆಗೆ ಕೂಡಾ ಅನಾಹುತ ಸಂಭವಿಸಬಹುದು, ಆದ್ದರಿಂದ ಕೂಡಲೇ ಈ ಕಲ್ಲಿನ ಕ್ವಾರಿಯನ್ನು ಬಂದ್ ಮಾಡಬೇಕೆಂದು ಕೋಲಾರ ಭಾಗದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಅವರು ಇಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಬ್ಲಾಸ್ಟ ಮಾಡುವುದರಿಂದ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ವಾಸಿಸುವ ಗುಡಿಸಲು ಹಾಗೂ ಮನೆಗಳ ಮೇಲೆ ಬೀಳುತ್ತಿದ್ದು, ಇದರಿಂದ ಸಾರ್ವಜನಿಕರು ಭಯದಲ್ಲಿ ಬದುಕುವಂತಾಗಿದೆ, ಕೊಲಾರ ಬ್ರೀಜ್ ಕೂಡಾ ಸಮೀದಲ್ಲಿ ಇರುವುದುರಿಂದ ಈ ಕ್ವಾರಿಯನ್ನು ಬಂಧ ಮಾಡಬೇಕು ಜೊತೆಗೆ ಈ ಭಾಗದಲ್ಲಿ ಮುಂದೆಕೂಡಾ ಯಾರಿಗೂ ಅನುಮತಿ ನೀಡಬಾರದು ಎಂದರು.
ಜಿಲ್ಲಾಧ್ಯ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿ ಆಗುಹೋಗುವ ಸಮಸ್ಯೆಗಳ ಕುರಿತು ನೈಜವಾಗಿ ಪರೀಕ್ಷೆ ಮಾಡಬೇಕು, ಅದರಿಂದ ಆಗುವ ಅನಾಹುತಗಳನ್ನು ಎಚ್ಚೆತ್ತು ಕೂಡಲೇ ಅವುಗಳ ವಿರುದ್ಧ ಕಾನೂನ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಮಲ್ಲಿಕಾರ್ಜುನ ಮಹಾಂತಮಠ, ಕಲ್ಲಪ್ಪ ಗಿಡ್ಡಪ್ಪಗೊಳ, ಶ್ರೀಶೈಲ ಸೊನ್ನದ, ಯಲ್ಲಪ್ಪ ಸೋನ್ನದ, ಶಶಿಕಾಂತ ಬಿರಾದಾರ, ಮಲ್ಲಿಕಾರ್ಜುನ ಸೊನ್ನದ, ವಿರುಪಾಕ್ಷಿ ಅಥಣಿ, ಸಂಗಪ್ಪ ಅಥಣಿ, ಸಂಗಪ್ಪ ಟಕ್ಕೆ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಮನಗೌಡ ಪಾಟೀಲ, ಪುಂಡಲಿಕ ಸೊನ್ನದ, ವಿ,ಎಂ.ಮನ್ನಿಕೇರಿ, ಹಣಮಂತ ಸೋನ್ನದ, ಮಹಾದೇವ ಕದಮ, ಸಂಗಮೆಶ ಹುಣಸಗಿ, ಸುಭಾಸ ಸಜ್ಜನ, ಜಯಸಿಂಗ ರಜಪೂತ, ಲಚ್ಚಾರುಮ ರಜಪೂತ, ಸೇರಿದಂತೆ ಅನೇಕರು ಇದ್ದರು.