ಹವಾನಾ, ಜ 29, ಕೆರೆಬಿಯನ್ ಸಮುದ್ರದಲ್ಲಿ ಪ್ರಬಲ ಭೂಕಂಪನವಾಗಿದ್ದು ಇದರಿಂದ ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಅಂತಾರಾಷ್ಟ್ರೀಯ ಸುನಾಮಿ ಮಾಹಿತಿ ಕೇಂದ್ರ ತಿಳಿಸಿದೆ. ಕ್ಯೂಬಾ, ಮೆಕ್ಸಿಕೋ, ಬಿಲೈಜೆ, ಹೋಂಡುರಾಸ್, ಜಮೈಕಾ ಮತ್ತು ಕೇಮ್ಯಾನ್ ದ್ವೀಪ ಪ್ರದೇಶಗಳಲ್ಲಿ ಒಂದು ಮೀಟರ್ ವರೆಗೆ ಸುನಾಮಿ ಅಲೆ ಬೀಸುವ ಸಾಧ್ಯತೆ ಇದೆ ಎಂದು ಕೇಂದ್ರ ಇದಕ್ಕೂ ಮುನ್ನ ತಿಳಿಸಿತ್ತು.ಜಮೈಕಾದ ಲುಸಿಯಾದ ನೈಋತ್ಯದ ಉತ್ತರ ಭಾಗದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು ಈಗ ಸುನಾಮಿ ಅಪಾಯ ಇಲ್ಲ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.