ನಾಡಿನಲ್ಲಿ ಉದ್ಯೋಗಗಳ ಕೊರತೆ ಇಲ್ಲ : ಕೌಶಲ್ಯದ ಕೊರತೆ ಇದೆ: ಪ್ರಕಾಶ್ ಕೋಳಿವಾಡ

ನಾಡಿನಲ್ಲಿ ಉದ್ಯೋಗಗಳ ಕೊರತೆ ಇಲ್ಲ : ಕೌಶಲ್ಯದ ಕೊರತೆ ಇದೆ: ಪ್ರಕಾಶ್ ಕೋಳಿವಾಡ  There is no shortage of jobs in the country, there is a shortage of skills: Prakash Koliwada

ರಾಣೇಬೆನ್ನೂರು 07: ಕೇವಲ ಪದವಿಗಳಿಸಿ ಉದ್ಯೋಗ ಅರಸಲು ಹೊರಟರೆ, ಉದ್ಯೋಗ ಸಿಗುವುದು ಬಹಳಷ್ಟು ಕಷ್ಟದ ಕೆಲಸ. ಉದ್ಯೋಗ ದೊರೆಯಬೇಕಾದರೆ ವಿದ್ಯೆಯ ಜೊತೆಗೆ ಮಾತನಾಡುವ ಕೌಶಲ್ಯತೆ ಅಗತ್ಯವಾಗಿ ಬೇಕಾಗುತ್ತದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.  

ಅವರು, ಗುರುವಾರ ಇಲ್ಲಿನ ಪಂಪಾಪತಿ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿ. ಸಿ. ಟ್ರಸ್ಟ್‌  ಆಯೋಜಿಸಿದ್ದ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ, ಶಿಷ್ಯ ವೇತನ ವಿಕಲಚೇತನರಿಗೆ ಸಲಕರಣೆ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  

ಉದ್ಯೋಗದ ಕೊರತೆ ಇಂದು ಎಲ್ಲಿಯೂ ಇಲ್ಲ. ಉದ್ಯೋಗ ಪಡೆಯಬೇಕಾದರೆ ಎಲ್ಲರಿಗೆ ಕೌಶಲ್ಯೆತೆ ಬೇಕು ಎನ್ನುವ ವಾಸ್ತವಿಕತೆ ಅರ್ಥ ಮಾಡಿಕೊಂಡು ವಿವಿಧ ಕೌಶಲ್ಯಗಳಲ್ಲಿ ತಮ್ಮ ಸಾಧನೆ ಮೆರೆಯಬೇಕು ಎಂದರು.  

ತಮ್ಮ ಶಿಕ್ಷಣ ಮತ್ತು ಜೀವನ ಬದುಕಿನ ಅನುಭವದ ಆಧಾರದ ಮೇಲೆ,  ಪ್ರತಿಯೊಬ್ಬರು ಕೌಶಲ್ಯವಂತರಾಗಬೇಕೆನ್ನುವ ಏಕೈಕ ಉದ್ದೇಶದಿಂದ ಪಿಕೆಕೆ, ಸಂಸ್ಥೆ ಆರಂಭವಾಗಿದೆ, ಬೇಸಿಕ್ ಕಂಪ್ಯೂಟರ್, ಬ್ಯೂಟಿ ಪಾರ್ಲರ್, ಟೈಲರಿಂಗ್,ಸ್ಫೂಕನ್  ಇಂಗ್ಲೀಷ್, ಮತ್ತು ಸಂಹನ ಕಲೆ ಕುರಿತು ತರಬೇತಿ ನೀಡಲಾಗುತ್ತದೆ ಪ್ರಯೋಜನ ಪಡೆಯಬೇಕು ಎಂದರು.  

ಧರ್ಮಸ್ಥಳದ  ಧರ್ಮಾಧಿಕಾರಿಗಳು ತಮ್ಮ ದೂರ ದೃಷ್ಟಿ  ಇಟ್ಟುಕೊಂಡು, ಯಾವುದೇ ಜಾತಿ, ಮತ, ಎಂದು ಬಹುದೊಡ್ಡ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ರಾಜ್ಯದ ಮಹಿಳೆಯರು, ಆರ್ಥಿಕ ಸಮಾನತೆ ಕಂಡು ಭದ್ರ ಭವಿಷ್ಯವನ್ನು ರೂಪಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಹೆಗಡೆಯವರ ಕಾರ್ಯವನ್ನು ಸ್ಲಾಘಿಸಿ ಅಭಿನಂದಿಸಿದರು.  

 ಮುಖ್ಯ ಅತಿಥಿಯಾಗಿದ್ದ, ಬಿಜೆಪಿ ಮುಖಂಡ, ಡಾ. ಬಸವರಾಜ ಕೇಲಗಾರ, ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ವಿದ್ಯಾರ್ಥಿಗಳು, ಕೆಲವೇ ಕೆಲವು ವಿಷಯಗಳಿಗೆ ಜೋತು ಬೀಳದೇ ಬೇರೆ ಬೇರೆ ವೃತ್ತಿ  ಶಿಕ್ಷಣದಲ್ಲಿ ತರಬೇತಿ ಪಡೆದು, ಉದ್ಯೋಗ ಮತ್ತು ಆರ್ಥಿಕ ಸಮಾನತೆಗೆ ಮುಂದಾಗಬೇಕು ಎಂದು ಕರೆ ನೀಡಿದರು.  

ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಅವರು, ಮಹಿಳೆ ಆರ್ಥಿಕ ಸಮಾನತೆ ಸಾಧಿಸಿದರೆ ಕುಟುಂಬ ನಿರ್ವಹಣೆ ಸರಳ ಸಾಧ್ಯ.  

ವೀರೇಂದ್ರ ಹೆಗಡೆಯವರು, ಯಾರೊ ದುಡಿಯದೇ ಕುಳಿತು ಉಣ್ಣಬಾರದು,  ಕಾಯಕದ ಮೂಲಕ ಉಳಿತಾಯ ಮತ್ತು ಆರ್ಥಿಕ ಸಮಾನತೆ ಸಾಧಿಸಬೇಕು. ಎನ್ನುವುದು ಅವರ  ಬಹುದೊಡ್ಡ  ಉದ್ದೇಶವಾಗಿದೆ. ಧರ್ಮ ಸಂಸ್ಕೃತಿಯಲ್ಲಿ ಯೋಜನೆಯ ಮೂಲಕ  ತಮ್ಮ ಜೀವನ ಬದುಕನ್ನು  ರೂಪಿಸಿಕೊಂಡು, ಸಮಾನತೆ ಸಾಧಿಸಬೇಕು  ಎಂದರು.  

ಸ್ವಾಗತಿಸಿ ಪ್ರಾಸ್ತಾವಿಕವಾಗಿ  ಮಾತನಾಡಿದ, ತಾಲೂಕ ಯೋಜನಾಧಿಕಾರಿ ಮಂಜುನಾಥ ಗೌಡ ಅವರು, ಜಿಲ್ಲೆ ಮತ್ತು ತಾಲೂಕು,ರಾಜ್ಯದಾದ್ಯಂತ ಸಂಸ್ಥೆಯ ಸದುದ್ದೇಶದ ಮಹತ್ವಪೂರ್ಣ ಯೋಜನೆ ಜಾರಿಯಲ್ಲಿದೆ. ಕೋಟ್ಯಾಂತರ ಮಹಿಳೆಯರು, ಆರ್ಥಿಕ ಸ್ವಾವಲಂಬಿಗಳಾಗಿ, ಧರ್ಮದ ತಳಹದಿಯಲ್ಲಿ, ಬದುಕನ್ನು ಕಟ್ಟಿಕೊಂಡಿದ್ದಾರೆ. ಸ್ವಯಂ ಉದ್ಯೋಗಿಗಳಾಗಿದ್ದಾರೆ ಇದರಿಂದ ಧರ್ಮಾಧಿಕಾರಿಗಳ  ಕನಸು  ಪರಿಪೂರ್ಣವಾಗಿ ನನಸಾಗಿದೆ ಎಂದರು.  

ಕಾರ್ಯಕ್ರಮದಲ್ಲಿ, ಹಿಂದುಳಿದ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ವಿ. ಎಸ್‌.ಹಿರೇಮಠ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ  ಕುಂದಾಪುರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.  

ಸಂಘದ ಪುಷ್ಪಾ ಕೆ, ಪ್ರಾರ್ಥಿಸಿದರು.  ಮಂಜುನಾಥ್ ಎಂ.ಪಿ, ನಿರೂಪಿಸಿ, ದ್ಯಾವಪ್ಪ ವಂದಿಸಿದರು. ಶಾಸಕ ಪ್ರಕಾಶ್ ಕೋಳಿವಾಡ ಅವರು, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ, ವಿಕಲಚೇತನರಿಗೆ ಸಾಧನ ಸಲಕರಣೆಗಳು ವಿತರಿಸಿ ಗೌರವಿಸಿದರು. ಯೋಜನೆಯ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು.