ಗ್ರಾಮೀಣ ಕ್ರೀಢೆ ಕಬ್ಬಡ್ಡಿಗೆ ಮನಸೋಲದವರಿಲ್ಲ: ಸಚಿವ ಆರ್‌.ಭಿ. ತಿಮ್ಮಾಪೂರ

ಗ್ರಾಮೀಣ ಕ್ರೀಢೆ ಕಬ್ಬಡ್ಡಿಗೆ ಮನಸೋಲದವರಿಲ್ಲ: ಸಚಿವ ಆರ್‌.ಭಿ. ತಿಮ್ಮಾಪೂರ  There is no one who is not attracted to the rural sport of Kabaddi: Minister R.B. Thimmapur

ಚಿಮ್ಮಡ 28: ಸಾರಾಯಿ ನಷೆ ಮೂರು ಘಂಟೆಗಳದ್ದಾದರೆ, ಈ ಕಬ್ಬಡ್ಡಿ ನಷೆ ಮೂರು ತಿಂಗಳಕಾಲ ಇರುತ್ತದೆ ಶುದ್ಧ ಗ್ರಾಮೀಣ ಕ್ರೀಢೆಯಾಗಿರುವ ಕಬ್ಬಡ್ಡಿಗೆ ಮನಸೋಲದವರಿಲ್ಲವೆಂದು ಅಬಕಾರಿ ಸಚಿವ ಆರ್‌.ಭಿ. ತಿಮ್ಮಾಪೂರ ಹೇಳಿದರು. 

ಗಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ರವಿವಾರ ಪ್ರಭುಲಿಂಗೇಶ್ವರ ಯುವಕರ ಕ್ರೀಢಾ ಸಂಘದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ "ಚಿಮ್ಮಡ ಕಬ್ಬಡ್ಡಿ ವೈಭವ" ಮುಕ್ತ ಕಬ್ಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಜಾತಿ ಧರ್ಮಗಳ ಬೇಧವಿಲ್ಲದೇ ನಡೆಯುವ ಕ್ರೀಢೆಯಂದರೆ ಅದು ಕಬ್ಬಡ್ಡಿ. ಅದನ್ನ ಸಂಘಟಿಸುವುದು ಸುಲಭದ ಮಾತಲ್ಲ, ನನ್ನ ರಾಜಕೀಯ ಜೀವನದಲ್ಲಿ ಕಬ್ಬಡ್ಡಿ ಮಹತ್ವದ ಪಾತ್ರ ವಹಿಸಿದೆ ಎಂದ ಅವರು ತಮ್ಮ ಪ್ರೌಢಾವಸ್ತೆಯಲ್ಲಿ ಕಬ್ಬಡ್ಡಿಯೊಂದಿಗಿನ ಒಡನಾಟವನ್ನು ಎಳೆ ಎಳೇಯಾಗಿ ಬಿಚ್ಚಿಟ್ಟರು.  

ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ ಕ್ರೀಡೆಗೆ ನಾನು ಯಾವತ್ತೂ ಬೆಂಬಲಿಸುತ್ತೇನೆ ಗ್ರಾಮದ ಯುವಕರ ಅಪೆಕ್ಷೆಯಂತೆ ಗ್ರಾಮದಲ್ಲಿ ಇನ್ನೊಂದು ಗರಡಿ ಮನೆ ನಿರ್ಮಾಣಕ್ಕೆ ಮಂಜುರಾತಿ ದೊರೆತಿದ್ದು ಅನುದಾನ ಈಗಾಗಲೆ ಮಂಜುರಾಗಿದ್ದು ಅನುದಾನ ಬಳಕೆಯಲ್ಲಿ ನೇನಾದರು ಸಮಸ್ಯೆಯಾದರು ನನ್ನ ಅನುದಾನದಲ್ಲಿ ಮತ್ತೆ ಹತ್ತು ಲಕ್ಷ ನೀಡಿ ಗರಡಿಮನೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆಂದರು. 

ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಕೀರ್ತಿಗಣೇಶ, ಡಾ; ಎ.ಆರ್‌. ಬೆಳಗಲಿ, ಎಲ್ಲನಗೌಡ ಪಾಟೀಲ, ರಂಗನಗೌಡ ಪಾಟೀಲ ಮಾತನಾಡಿದರು ಸಂಘದ ಅಧ್ಯಕ್ಷ ಪ್ರವೀಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಉಮೇಶ ಪೂಜಾರಿ ಅಶೋಕ ಚಿಮ್ಮಡ, ಮಹಾಲಿಂಗ ಬಳಗಾರ, ಬಾಳಪ್ಪ ಗಡೆಪ್ಪನವರ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂಧರ್ಬದಲ್ಲಿ ತಾವೇ ದುಡಿದು ಕುಟುಂಬ ಸಲಹುತ್ತಿರುವ ವಿಕಲಚೇತನ ಮಹಿಳೆಯರನ್ನು ಸತ್ಕರಿಸಿ ಗೌರವಿಸಲಾಯಿತು. 

ಬಹುಮಾನ ವಿತರಣೆ; ಪ್ರಥಮ ಬಹುಮಾನ ಮಾರುತೇಶ್ವರ ಕಬ್ಬಡ್ಡಿ ತಂಡ ಸೋರಗಾವಿ, ದ್ವಿತೀಯ ಬಸವೇಶ್ವರ ಕಬ್ಬಡ್ಡಿ ತಂಡ ಅರಳಿಮಟ್ಟಿ, ತ್ರತೀಯ ಮಾಯಕ್ಕ ಕಬ್ಬಡ್ಡಿ ತಂಡ ಚಿಂಚಲಿ, ಚಥುರ್ತ ನ್ಯೂ ಶ್ರೀನಿಧಿ ಕಬ್ಬಡ್ಡಿ ತಂಡ ಚಿಮ್ಮಡ ಪಡೆದುಕೊಂಡಿತು.