ದೇವರನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಿಲ್ಲ: ಆಶಾ ಯಮಕನಮರಡಿ
There is no need to go anywhere in search of God: Asha Yamakanamaradi
ಲೋಕದರ್ಶನ ವರದಿ
ಬೆಳಗಾವಿ 25: ದೇವರನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಿಲ್ಲ, ನಿಷ್ಕಲ್ಮಷವಾಗಿ, ಪರಿಶುದ್ಧವಾಗಿ, ರಾಗಬದ್ಧವಾಗಿ, ಲಯಬದ್ಧವಾಗಿ ಸ್ತೋತ್ರ ಪಠಿಸಿದ ನಾದಸುಧಾದ ಈ ಮಕ್ಕಳೇ ದೇವರಿಗೆ ಸಮ ಎಂದು ಗಾಯಕಿ, ಲೇಖಕಿ, ಉದ್ಯಮಿ ಆಶಾ ಯಮಕನಮರಡಿ ಶ್ಲಾಘಿಸಿದರು.
ಟಿಳಕವಾಡಿಯ ನಾದ ಸುಧಾ ಸಂಗೀತ ಶಾಲೆಯ ಆವರಣದಲ್ಲಿ ನಡೆದ ಅಧಿಕ ಮಾಸದ ಶಿವಪಂಚಾಕ್ಷರಿ ನಕ್ಷತ್ರ ಮಾಲಾ ಪಠಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ನಮಗೆ ಬಹಳ ಬೇಸರವಾದಾಗ, ಪದೇ ಪದೇ ಒಂದು ಸ್ಥಳಕ್ಕೆ ನೆಮ್ಮದಿ, ಶಾಂತಿಗಾಗಿ ಹುಡುಕಿಕೊಂಡು ಸಮಾಧಾನ ನೀಡುವಂತಹ ಸ್ಥಳಕ್ಕೆ ಹೋಗುತ್ತೇವೆ, ನಾನು ಈ ದಿನ, ಮತ್ತೊಮ್ಮೆ ಈ ಜಾಗಕ್ಕೆ ಬಂದಿದ್ದೇನೆ ಅಂದರೆ ನನಗೆ ಈ ಜಾಗ ದೇವಸ್ಥಾನಕ್ಕೆ ಸಮ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳ ಶಿವ ಪಂಚಾಕ್ಷರಿ ನಕ್ಷತ್ರ ಮಾಲಾ ಪಠಣವನ್ನು ಆಲಿಸಿದ ಅವರು, ನಾದ ಸುಧಾ ಬರೀ ಸಂಗೀತ ಶಾಲೆ ಅಲ್ಲ,ಇದೊಂದು ಸಂಸ್ಕೃತಿ ತಿಳಿಸಿ, ಸಂಸ್ಕಾರ ನೀಡುವ ಕೇಂದ್ರ. ಪುಟ್ಟ ಮಕ್ಕಳ ಹೂ ಮನವನ್ನು ಸಂಗೀತದ ಸಂಸ್ಕಾರ ನೀಡುವುದರ ಜೊತೆಗೆ, ಮನಸ್ಸನ್ನು ವಿಕಸನಗೊಳಿಸಿ ಬುದ್ಧಿ, ಚೈತನ್ಯ ತುಂಬಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬಲು ದೊಡ್ಡ ಕೊಡುಗೆಯಾಗಿ ನೀಡುತ್ತಿರುವ ಒಂದು ಜ್ಞಾನ ದೇಗುಲವಾಗಿದೆ ಎಂದು ಹೇಳಿದರು.
ಶಿಕ್ಷಕಿ ಪೂರ್ಣಿಮಾ ಪತ್ತಾರ ಮಾತನಾಡಿ, ನಾದ ಸುಧಾ ಸಂಗೀತ ಶಾಲೆ ಪ್ರತಿಯೊಬ್ಬ, ಶಿಕ್ಷಕರಾಗಲೀ, ಕಲಾಕಾರರಾಗಲೀ, ಅವರ ಪ್ರತಿಭೆಗೆ ಅನುಗುಣವಾಗಿ ಗುರುತಿಸಿ ಕಲಾತ್ಮಕ ವೇದಿಕೆಯಲ್ಲಿ ಆಮಂತ್ರಿಸಿ ಸನ್ಮಾನಿಸುತ್ತಿರುವ ಡಾ. ಸತ್ಯನಾರಾಯಣ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮನದಾಳದಿಂದ ನುಡಿದರು.
ಆಶಾ ಯಮಕಮರಡಿ ಅವರಿಗೆ ದಶಕದ ಅತ್ಯುತ್ತಮ ಲೇಖಕಿ ಹಾಗೂ ಪೂರ್ಣಿಮಾ ಪತ್ತಾರ ಅವರಿಗೆ ದಶಕದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಲವಾರು ಕಾರ್ಯಕ್ರಮಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಕ್ಕಳಿಗೆ ಸೂಕ್ತ ಬಹುಮಾನ ನೀಡಲಾಯಿತು. ನಾದ ಸುಧಾ ಸಂಗೀತ ಶಾಲೆಯ ಸಂಸ್ಥಾಪಕ ಡಾ. ಸತ್ಯನಾರಾಯಣ್ ಸ್ವಾಗತಿಸಿದರು. ಮಹಾದೇವಿ ಬೆಳಕೂಡ ನಿರೂಪಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 