ಅಕ್ರಮ ಚಟುವಟಿಕೆ ಬಂದ್ ಮಾಡಲು ಯೋಗ್ಯತೆ ಇಲ್ಲ..! ಬಿಜೆಪಿ ಆಫೀಸನ್ನು ಮುಚ್ಚಲು ಹೊರಟ ಕಾಂಗ್ರೆಸ್‌

ಅಕ್ರಮ ಚಟುವಟಿಕೆ ಬಂದ್ ಮಾಡಲು ಯೋಗ್ಯತೆ ಇಲ್ಲ..! ಬಿಜೆಪಿ ಆಫೀಸನ್ನು ಮುಚ್ಚಲು ಹೊರಟ ಕಾಂಗ್ರೆಸ್‌ There is no merit in stopping illegal activities..! Congress moves to close BJP office

ಅಕ್ರಮ ಚಟುವಟಿಕೆ ಬಂದ್ ಮಾಡಲು ಯೋಗ್ಯತೆ ಇಲ್ಲ..! ಬಿಜೆಪಿ ಆಫೀಸನ್ನು ಮುಚ್ಚಲು ಹೊರಟ ಕಾಂಗ್ರೆಸ್‌

ರಾಣೆಬೇನ್ನೂರು 18: ತಾಲೂಕಿಗೆ ಶಾಸಕರಾಗಿ ಎರಡು ವರ್ಷದಲ್ಲಿ ಎಷ್ಟು ಬಾರಿ ಡಾ.ಬಿ.ಆರ್‌. ಅಂಬೇಡ್ಕರ್ ಜಯಂತಿಗೆ ಹಾಗೂ ಅಹಿಂದ ನಾಯಕರ ಜಯಂತಿಗೆ ಹಾಜರಾಗಿದ್ದೀರಿ ಎಂದು ಶಾಸಕ ಪ್ರಕಾಶ ಕೋಳಿವಾಡಗೆ ಪ್ರಶ್ನೆ ಮಾಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಕೇಳಿದರು. ನಗರದ ಭಾಜಪ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕನ ಆದೇಶ ಮೇರೆಗೆ ದಲಿತ ಹಾಗೂ ಅಹಿಂದ ಸಮುದಾಯದ ವಿರೋಧಿ ಮಾಜಿಶಾಸಕ ಎಂದು ಪೋಸ್ಟ್‌ ಹಾಕುತ್ತಿದ್ದಾರೆ. ಆದರೆ ಅವರಿಗೆ ನಿಜವಾದ ದಲಿತ ವಿರೋಧಿ ಯಾರು ಎಂಬುದನ್ನು ಸ್ವಲ್ಪ ಅವರ ಮಾಡಿರುವು ಕೆಲಸದ ಬಗ್ಗೆ ಗಮನಹರಿಸಿ ನೋಡಲಿ. ತಾಲೂಕಿನಲ್ಲಿ ಎರಡು ಬಾರಿ ಅಂಬೇಡ್ಕರ್ ಜಯಂತಿ ನಡೆದಿದೆ ಆದರೆ ನೀವು ಎಷ್ಟು ಬಾರಿ ಹಾಜರಾಗಿದ್ದೀರಿ ಎಂಬುದನ್ನು ಇಲ್ಲಿ ನೋಡಿ ಎಂದು ಅಂಬೇಡ್ಕರ್ ಜಯಂತಿ ಭಾವಚಿತ್ರ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ತಾಲೂಕಿನಲ್ಲಿ ಅಹಿಂದ ಸಮುದಾಯಕ್ಕೆ ನಾನು ಏನು ಮಾಡಿದ್ದೇನೆ ಎಂಬುದನ್ನು ಚರ್ಚೆ ಮಾಡಬೇಕಾರೆ ನೀವು ನೇರಾನೇರ ವೇದಿಕೆ ಸಿದ್ದತೆ ಮಾಡಿಕೊಂಡು ಚರ್ಚೆ ಮಾಡೋಣ ಬನ್ನಿ. ಅದನ್ನು ಬಿಟ್ಟು ಎಲ್ಲೊ ದೂರು ಕೂತು ಚಿಲ್ಲರ ರಾಜಕಾರಣ ಮಾಡೋಕೆ ನಮಗೆ ಬರಲ್ಲ ಎಂದರು. ನಗರದಲ್ಲಿ ಸುಮಾರು ಐವತ್ತು ವರ್ಷದಿಂದ ಬಿಜೆಪಿ ಕಾರ್ಯಾಲಯ ಎಂದು ಗುರುತಿಸಿಕೊಂಡು ಬಂದಿದೆ. ಆದರೆ ದ್ವೇಷದ ರಾಜಕಾರಣದಿಂದ ಕಾಂಗ್ರೆಸ್ ಅಧ್ಯಕ್ಷರದಿಂದ ನಮ್ಮ ಕಚೇರಿಯ ಮೇಲೆ ನ್ಯಾಯಲಯದಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆ ನಮ್ಮ ಎಲ್ಲಾ ಮುಖಂಡರ ಹಾಗೂ ಸದಸ್ಯರ ಒಮ್ಮತದ ಮೇರೆಗೆ ಅಂದು ನಾವು ಸಾಮಾನ್ಯ ಸಭೆಗೆ ಗೈರಾಗಿದ್ದೆವೆ ಹೊರತು ಅಭಿವೃದ್ಧಿಗೆ ಹಿನ್ನಡೆ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಅದನ್ನೆ ಇವರು ಬಂಡವಾಳ ಮಾಡಿಕೊಂಡು ದಲಿತ ವಿರೋಧಿ, ಅಹಿಂದ ವಿರೋಧಿ ಎಂದು ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ವಿಷಯ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರ ಘಟಕ ಅಧ್ಯಕ್ಷ ಮಂಜಣ್ಣ ಕಾಟಿ,  ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ,, ಭಾರತಿ ಜಂಬಿಗಿ, ರೂಪಾ ಚಿನ್ನಿಕಟ್ಟಿ, ಪ್ರಭಾವತಿ ತಿಳವಳ್ಳಿ, ರಮೇಶ್ ಕರಡೆಣ್ಣವರ್,  ಮಂಜುಳಾ ಹತ್ತಿ, ಪ್ರಕಾಶ ಬುರಡಿಕಟ್ಟಿ, ಮುಖಂಡರಾದ ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಸಿದ್ದಣ್ಣ ಚಿಕ್ಕಬಿದರಿ, ಚೋಳಪ್ಪ ಕಸವಾಳ ಅಮೋಘ ಬಾದಾಮಿ,ಸೇರಿದಂತೆ ಮತ್ತಿತರರ ಉಪಸ್ಥಿತರಿದ್ದರು