ಮೋದಿ ಸರ್ಕಾರ ಆರಂಭಿಸಿರುವ ಯುದ್ಧಕ್ಕೆ ಯಾವುದೇ ಯುದ್ಧ ವಿರಾಮವಿಲ್ಲ: ಹಿರಿಯ ಚಿಂತಕ ಶಿವಸುಂದರ್ ಜನರ ಮೆಲೆ ನಿರಂತರವಾಗಿ ಒಂದಾದ ಮೇಲೊಂದು ಯುದ್ಧ ಮಾಡುತ್ತಾ ಬಂದಿದೆ
There is no ceasefire in the war started by the Modi government: Senior thinker Shivsunder, it has b
ಕೊಪ್ಪಳ 03: ಜಗತ್ತಿನಲ್ಲಿ ನಡೆಯುವ ಯುದ್ಧಗಳಿಗೆ ಯುದ್ಧ ವಿರಾಮ ಎಂಬುದು ಇರುತ್ತೆ ಆದ್ರೆ, ಮೋದಿ ಸರ್ಕಾರ ಆರಂಭಿಸಿರುವ ಯುದ್ಧಕ್ಕೆ ಯಾವುದೇ ಯುದ್ಧ ವಿರಾಮ ವಿಲ್ಲ, ಜನರ ಮೆಲೆ ನಿರಂತರವಾಗಿ ಒಂದಾದ ಮೇಲೊಂದು ಯುದ್ಧ ಮಾಡುತ್ತಾ ಬಂದಿದೆ ಎಂದು ನಾಡಿನ ಹಿರಿಯ ಚಿಂತಕ ಶಿವಸುಂದರ್ ಅವರು ಹೇಳಿದರು.ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಮೇ ಸಾಹಿತ್ಯ ಮೇಳ ಮತ್ತು ಸಮಾನ ಮನಸ್ಕರ ಸಂಘಟನೆಗಳ ಒಕ್ಕೂಟ ದಿಂದ ಹಮ್ಮಿಕೊಂಡಿದ್ದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಇಂದು ನಡೆಯುತ್ತಿರುವುದು ಆಘಾತಕಾರಿ ಬೇಳವಣಿಗೆಗಳ ಕುರಿತು ಚರ್ಚೆ ಮಾಡಲೇ ಬೇಕು, ಸಂವಿಧಾನ ಮೂಲ ಆಶಯಗನ್ನು ಬುಡಮೇಲು ಮಾಡುವಂತಹ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿ ಮತ್ತು ಪ್ರತಿ ಸ್ಪರ್ಧಿಗಳಾಗುವುದರ ಜೊತೆಗೆ ಪರಿಷ್ಕರಣೆ ಹೆಸರಿನಲ್ಲಿ ತಮ್ಮ ರಾಜಕೀಯ ಅಜೆಂಡಗಳನ್ನು ಜಾರಿಗೊಳಿಸುತ್ತಿರುವ ರಾಜಕೀಯ ಪಕ್ಷಗಳ ನಡೆಗಳ ವಿರುದ್ಧ ನಾವು ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ದೇಶದಲ್ಲಿ ಇಂದು ಇಂತಹವರೇ ವೋಟ್ ಹಾಕಬೇಕು ಇಂತವರಿಗೆ ವೋಟ್ ಹಾಕುವ ಅಧಿಕಾರ ಇಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತಿದೆ. ಮತ ಪಟ್ಟಿ ಪರಿಷ್ಕರಣೆ ಮಾಡುದಕ್ಕೆ ನಮ್ಮ ವಿರೋಧವಿಲ್ಲ, ಇದು ಹೊಸಬರನ್ನು ಸೇರಿಸುವ ಮತ್ತು ಸತ್ತವರನ್ನ ಮತ ಪಟ್ಟಿಯಿಂದ ಕೈ ಬಿಡುವ ನಿರಂತರವಾದ ಪ್ರಕ್ರೀಯೆ, ಆದ್ರೆ ಮತ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಪೌರತ್ವ ಪರೀಕ್ಷೆ ಮಾಡುವುದಕ್ಕೆ ನಮ್ಮ ವಿರೋಧ ಎಂದರು. ವಿದೇಶಿಗರನ್ನು ಹುಡುಕುವ ನೆಪದಲ್ಲಿ ಈ ದೇಶದ ಮೂಲ ನಿವಾಸಿಗಳನ್ನು ಚುನಾವಣೆಯಿಂದ ದೂರ ಇಡುವ ಸಂಚು ಇದಾಗಿದ್ದು, ಆಸ್ತಿ ಅಂತಸ್ತು ಇಲ್ಲದ ಈ ದೇಶದ ದಲಿತರು, ಮುಸಲ್ಮಾನ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಹೆಚ್ಚಾಗಿ ಹೆಣ್ಣು ಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳುವ ಯೋಜನೆ ಇದಾಗಿದ್ದು, ಈ ದೇಶದ ಮೊದಲ ಚುನಾವಣೆ ನಡೆದಿದ್ದು ಅವಾಗ ಸ್ಥಿತಿವಂತರಿಗೆ ಮಾತ್ರ ಮತದಾನ ಮಾಡುವ ಹಕ್ಕಿತ್ತು. ಆದ್ರೆ ಅಂಬೇಡ್ಕರ್ ಅವರ ಶ್ರಮದಿಂದ ದೇಶದಲ್ಲಿ ಹುಟ್ಟಿದ ಎಲ್ಲಾ ನಾಗರಿಕರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು ಅವಾಗ ನಡೆದ ಚುನಾವಣೆ ಸಾರ್ವತಿಕ ಚುನಾವಣೆ ಆಯಿತು , ಜೊತೆಗೆ ಒಂದು, ಮತ ಒಂದು ಮತಕ್ಕೆ ಮೌಲ್ಯ ಎಂದು ಹೇಳಲಾಯಿತು ಎಂದು ಹೇಳಿದರು.ಎಸ್‌ಐಆರ್ ನೇರವಾಗಿ ನಮ್ಮ ಪೌರತ್ವದ ಮೇಲೆ ಪರಿಣಾಮ ಬೀರುತ್ತದೆ,
ನಾವು ಪೌರತ್ವ ವನ್ನು ಕಳೆದು ಕೊಂಡರೆ ದೇಶದ ಸಂವಿಧಾನ ನಮ್ಮ ರಕ್ಷಣೆಗೆ ಬರುವುದಿಲ್ಲ ಅವಾಗ ನಾವು ಎರಡನೇ ದರ್ಜೆಯ ನಾಗರಿಕರಾಗುತ್ತೇವೆ, ಸ್ವಾತಂತ್ರ್ಯ ಎಂದರೆ ಎಲ್ಲ ಬಗೆಯ ಗುಲಾಮಗಿರಿಯಿಂದ ಹೊರಬರುವುದು. ಕೇಂದ್ರ ಸರಕಾರದ ಎಸ್‌ಐಆರ್ ಎಂದರೆ ಕೇವಲ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಮಾತ್ರವಲ್ಲದೆ ಇದು ಈ ದೇಶದ ನಾಗರಿಕರ ಪರೀಶೀಲನೆಯಾಗಿದೆ. ಎಸ್‌ಐಆರ್ ರದ್ದಾಗಬೇಕು. ಒಂದು ವೇಳೆ ಜಾರಿಯಾದರೆ ನಮ್ಮನ್ನು ರದ್ದು ಮಾಡುತ್ತದೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಶಿವಸುಂದರ್ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂವೀ ನಮ್ಮ ದೇಶದ ಆಕ್ಸಿಜನ್ ಅಲ್ಪಸಂಖ್ಯಾತರು, ಇಂಡಿಯಾ ಗೇಟ್‌ನಲ್ಲಿ ನಾವೂ ಇವಾಗೂ ದೇಶಕ್ಕೆ ಪ್ರಾಣ ತ್ಯಾಗ ಮಾಡಿದವರ ಹೆಸರನ್ನು ನೋಡಿದರೆ ಅದರಲ್ಲಿ ಅರ್ಧಕ್ಕೂ ಹೆಚ್ಚು ಹೆಸರುಗಳು ಮುಸ್ಲಿಂರದ್ದೆ, ಇಂತಹದರಲ್ಲಿ ಮೋದಿ ಏನು ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.ನಮ್ಮ ಒಗಟ್ಟನ್ನು ಒಡೆತಲು ಸಾಧ್ಯವಿಲ್ಲ, ಇವೆಲ್ಲಾ ದುಃಸ್ವಪ್ನಗಳಂತೆ ಬರುತ್ತವೆ ಹೋಗುತ್ತವೆ,
ಅಲ್ಪಸಂಖ್ಯಾತರು ದೃತಿಗೆಡಬಾರದು, ಯಾರು ಶಾಶ್ವತ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಪರಸ್ಪರ ಸಹಕಾರದಿಂದ ಮಾತ್ರ ದೇಶ ಆರೋಗ್ಯವಾಗಿರಲು ಸಾದ್ಯ ಒಂದು ಅಂಗ ತೆಗೆದರೆ ದೇಹ ಕೆಡುತ್ತೋ ಹಾಗೆ ಒಂದು ಸಮುದಾಯವನ್ನು ಹೊರಗಿಟ್ಟರೆ ದೇಶ ಕೆಡುತ್ತೆ ಎಂದು ಎಚ್ಚರಿಕೆ ನೀಡಿದರು.ಯಾರಿಂದಲೂ ದೇಶದ ಐಕ್ಯತೆ ಮತ್ತು ಭಾವೈಕ್ಯತೆ ಕೆಡಿಸಲು ಸಾಧ್ಯವಿಲ್ಲ ಏಕೆಂದರೆ ಈ ದೇಶಹ ಸಣ್ಣ ದೇಶವಲ್ಲಿ, ಈ ದೇಶದ ವಾಸ್ತು ತುಂಬಾ ಗಟ್ಟಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಟಿ.ರತ್ನಾಕರ್, ಶುಕ್ರಜ್ ತಾಲಕೇರಿ, ಸಾವಿತ್ರಿ ಮುಜುದಾರ್, ಸಲೀಮ್ ಪಲ್ಟಾನ್, ಶರಣು ಶೆಟ್ಟರ್, ಜ್ಯೋತಿ ಗೊಂಡಬಾಳ, ಚನ್ನಬಸಪ್ಪ ಅಪ್ಪಣ್ಣವರ, ಶೈಲಜಾ ಹಿರೇಮಠ್, ಡಬ್ಲ್ಯುಪಿಐ ಮಹಿಳಾ ಘಟಕ ರಾಜ್ಯ ಅಧ್ಯಕ್ಷೆ ಸಾಭಿಹಾ ಪಟೇಲ್ ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 