ಜಿಲ್ಲೆಯಲ್ಲಿ ಎಲ್‌ಪಿಜಿ ಸಮಸ್ಯೆ ಇಲ್ಲ-ಸಾರ್ವಜನಿಕರು ಆತಂಕಕ್ಕೆ ಒಳಪಡಬಾರದು -ಜಿಲ್ಲಾಧಿಕಾರಿ

 ಜಿಲ್ಲೆಯಲ್ಲಿ ಎಲ್‌ಪಿಜಿ ಸಮಸ್ಯೆ ಇಲ್ಲ-ಸಾರ್ವಜನಿಕರು ಆತಂಕಕ್ಕೆ ಒಳಪಡಬಾರದು -ಜಿಲ್ಲಾಧಿಕಾರಿ  There is no LPG problem in the district - the public should not be worried - District Magistrate

ಲೋಕದರ್ಶನ ವರದಿ 

      ಹಾವೇರಿ 13 :  ಎಲ್‌ಪಿಜಿ ಸರಬರಾಜಿನ ಬಗ್ಗೆ  ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.  ಜಿಲ್ಲೆಯಲ್ಲಿ ಎಲ್‌.ಪಿ.ಜಿ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ  ಗೃಹಬಳಕೆ ಸಿಲೆಂಡರ್‌ಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆ   ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತವು ತೈಲ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೃಹ ಬಳಕೆಯ ಎಲ್‌ಪಿಜಿ ಸಿಲೆಂಡರ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಸಮಸ್ಯೆ ಇಲ್ಲದಿರುವ ಬಗ್ಗೆ, ತೈಲ ಕಂಪನಿಯ ಅಧಿಕಾರಿಗಳಿಂದ ಖಾತ್ರಿ ಪಡೆಸಿಕೊಳ್ಳಲಾಗಿದೆ ಎಂದು ತಿಳಿಸಿದರು. 

       ಅನಗತ್ಯ ಬುಕಿಂಗ್ ಬೇಡ: ಜಿಲ್ಲೆಯಲ್ಲಿ 4,56,725 ಗ್ರಾಹಕರಿದ್ದು, ಈ ಪೈಕಿ ಐಒಸಿ-67,837, ಬಿಪಿಸಿ-37936 ಎಚ್‌ಪಿಸಿ- 3,50,952 ಗ್ರಾಹಕರಿದ್ದು, ದೇಶದಲ್ಲಿ ಪ್ರಸ್ತುತ ಲಭ್ಯವಿರುವ ದೇಶೀಯ ಎಲ್‌ಪಿಜಿ ದಾಸ್ತಾನು ಗೃಹ ಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ಮಾಹಿತಿ ನೀಡಿದ್ದು,  ಜಿಲ್ಲೆಯ ಗ್ರಾಹಕರು ಎಲ್‌ಪಿಜಿ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕದಲ್ಲಿ ತುರ್ತು ಅನಗತ್ಯ ಬುಕ್ಕಿಂಗ್ ಮಾಡದೇ, ಕೃತಕ ಬೇಡಿಕೆ ಸೃಷ್ಟಿಯಾಗದಂತೆ ಸಮರ​‍್ಕವಾಗಿ ಬಳಕೆ ಮಾಡಲು ಹಾಗೂ ಸಮತೋಲನ  ಕಾಪಾಡಲು ಕೋರಲಾಗಿದೆ.