20 ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ಕೊಡುವ ಸಂಕಲ್ಪವಿದೆ: ಶಾಸಕ ಪಠಾಣ

20 ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ಕೊಡುವ ಸಂಕಲ್ಪವಿದೆ: ಶಾಸಕ ಪಠಾಣ There is a determination to issue title deeds to 20,000 family members: MLA Pathana

ಶಿಗ್ಗಾವಿ  21 : ತಾಲೂಕಿನಲ್ಲಿ ಸುಮಾರು 20 ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ಕೊಡುವ ಸಂಕಲ್ಪವಿದೆ ಇಲ್ಲಿಯವರೆಗೂ 8 ಸಾವಿರ ಹಕ್ಕು ಪತ್ರ ನೀಡಿದ್ದೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.  ಪಟ್ಟಣದ ಮೌಲಾಲಿ ನಗರದಲ್ಲಿ ನಡೆದ 16, 17, 18 ವಾರ್ಡಿನ ನಿವಾಸಿಗಳಿಗೆ ಹಕ್ಕು ಪತ್ರ, ಇ ಆಸ್ತಿ ಹಾಗೂ ಹೈ ಮಾಸ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣ ಮತ್ತು ಗ್ರಾಮಗಳಲ್ಲಿ ಹಕ್ಕು ಪತ್ರ ನೀಡುವ ವಿಷಯವಾಗಿ ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಗ್ಗೆ ನನ್ನ ಗಮನಕ್ಕೆ ಬಂದರೆ ನಾನು ನಿದ್ರಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿ ವಿಶೇಷ ಅನುಧಾನ ಅಡಿಯಲ್ಲಿ 1400 ಕೋಟಿ ಅನುಧಾನ ಕ್ಷೇತ್ರಕ್ಕೆ ತಂದಿದ್ದೇನೆ.

ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 350 ಕೋಟಿ ಹಣ ಮಂಜೂರಾಗಿದ್ದು ಅದರಲ್ಲಿ ಸತತವಾಗಿ 24 ಗಂಟೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ 109 ಕೋಟಿ ಹಣ ಮೀಸಲಿಡಲಾಗಿದೆ. 5 ಗ್ಯಾರಂಟಿಗಳನ್ನು ಉಚಿತವಾಗಿ ನೀಡಿದ್ದೇವೆ ಬಿಜೆಪಿಯವರಿಗೆ ಏಕೆ ಉಚಿತವಾಗಿ ನೀಡಲು ಆಗುವುದಿಲ್ಲ? ಕ್ಷೇತ್ರದ ಒಂದರಲ್ಲಿ ಕೋಟಿ ಹಣ ಪ್ರತಿ ತಿಂಗಳು ಗೃಹ ಲಕ್ಮೀ ಹಣ ಖರ್ಚಾಗುತ್ತದೆ , 6 ಸಾವಿರ ಕಡು ಬಡುವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದೇನೆ , ಬರುವ ಪುರಸಭೆ ಚುನಾವಣೆಯಲ್ಲಿ 23 ವಾರ್ಡಿನಲ್ಲಿ 23 ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದರು.

ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ ಮಾತನಾಡಿ 1986 ರಿಂದ ಇಲ್ಲಿಯವರೆಗೂ ವಾಸಿಸುತ್ತಿರುವ ಎಲ್ಲ ಜನಾಂಗದ ಕಡು ಬಡವರಿಗೆ ಇಲ್ಲಿಯವರೆಗೂ ಹೋರಾಟ ಮಾಡಿದರು ಮನೆಯ ಹಕ್ಕು ಪತ್ರ ಕೊಡಲು ಆಗಿರಲಿಲ್ಲ ಅಲ್ಲದೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಆಗದೆ ಇದ್ದ ಕಾರ್ಯವನ್ನು ಇಂದು ಶಾಸಕ ಪಠಾಣ ಅವರಿಂದ ನನಸ್ಸಾಗಿದೆ ಎಂದರು.  ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಮುಸ್ತಾಕ ಅಹ್ಮದ ತಹಶಿಲ್ದಾರ, ವಸಂತಾ ಬಾಗೂರ, ನಾಗರಾಜ ಹಾವೇರಿ, ಮಲ್ಲಮ್ಮ ಸೋಮನಕಟ್ಟಿ, ಚಂದ್ರು ಕೊಡ್ಲಿವಾಡ, ಖಾಜಾಮೊಹಿದ್ದೀನ ಚೂಡಿಗಾರ, ಮಂಜುನಾಥ ತಿಮ್ಮಾಪೂರ,ಅಬ್ದುಲ್ ರೆಹಮಾನಸಾಬ ತೌಕಲ್ಲಿ, ಅಣ್ಣಪ್ಪ ಲಮಾಣಿ, ಮಹ್ಮದಸಾಬ ಗೋಟಗೋಡಿ, ರಾಮು ಪೂಜಾರ, ಲಕ್ಮೀ ಕಟ್ಟಿಮನಿ, ಮಹ್ಮದಲಿ ಬೀಜಾನವರ, ಯುವ ಮುಖಂಡ ಹಜರತಲಿ ಚೂಡಿಗಾರ ಸೇರಿದಂತೆ 3 ವಾರ್ಡಿನ ಫಲಾನುಭವಿಗಳು ಉಪಸ್ಥಿತರಿದ್ದರು.