ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಅನಗತ್ಯ ಖರ್ಚು ಆಗಿಲ್ಲ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಅನಗತ್ಯ ಖರ್ಚು ಆಗಿಲ್ಲ : ಸಚಿವ ಡಾ.ಶರಣಪ್ರಕಾಶ ಪಾಟೀಲ There has been no unnecessary expenditure in Karnataka Skill Development Corporation: Minister Dr. S
ಬೆಳಗಾವಿ ಸುವರ್ಣ ವಿಧಾನಸೌಧ (ಡಿ.16):  ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅವ್ಯವಹಾರ ಮತ್ತು ಅನಗತ್ಯ ಖರ್ಚು ವೆಚ್ಚಗಳು ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.


ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಮಂಡಳಿಯಲ್ಲಿ ಅವ್ಯವಹಾರ ಮತ್ತು ಅನಗತ್ಯ ಖರ್ಚುವೆಚ್ಚಗಳ ಬಗ್ಗೆ ಹಾಗೂ ಟೈಲರಿಂಗ್, ಪ್ಲಂಬಿಂಗ್ ಇತರೆ ಜೀವನೋಪಾಯಕ್ಕೆ ಅನುಕೂಲವಾಗುವ ತರಬೇತಿ ನೀಡದೇ ಈ ನಿಗಮದಿಂದ ನಿರುದ್ಯೋಗಿಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಭಾರತಿ ಶೆಟ್ಟಿ ಅವರು ನಿಯಮ 72 ರಡಿ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ 2017-18ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಟೈಲರಿಂಗ್, ಪ್ಲಂಬಿಂಗ್ ಒಳಗೊಂಡಂತೆ ಇತರೆ ಜೀವನೋಪಾಯಕ್ಕೆ ಅನುಕೂಲವಾಗುವ ತರಬೇತಿಗಳನ್ನು ವಿವಿಧ ಸರ್ಕಾರಿ ಹಾಗೂ ಖಾಸಗಿ ತರಬೇತಿದಾರ ಸಂಸ್ಥೆಗಳ ಮುಖೇನ ಉಚಿತ ಕೌಶಲ್ಯಾಧಾರಿತ ತರಬೇತಿಯನ್ನು ಒಟ್ಟಾರೆ 256193 ಅಭ್ಯರ್ಥಿಗಳಿಗೆ ನೀಡಲಾಗಿದ್ದು, ಒಟ್ಟಾರೆ 35620 ಅಭ್ಯರ್ಥಿಗಳು ಉದ್ಯೋಗಾವಕಾಶ / ಸ್ವಯಂಉದ್ಯೋಗವನ್ನು ಪಡೆದಿರುತ್ತಾರೆ.

 ಈ ಅವಧಿಯಲ್ಲಿ ಅಪೆರೆಲ್ಸ್ ಸೆಕ್ಟರ್‍ನ ಹಾಗೂ ಪ್ಲಂಬಿಂಗ್ ಸೇರಿದಂತೆ ವಿವಿಧ ಜಾಬ್ ರೋಲ್‍ಗಳಡಿ 37811 ಅಭ್ಯರ್ಥಿಗಳು ಉಚಿತ ಕೌಶಲ್ಯಾಧಾರಿತ ತರಬೇತಿ ಪಡೆದಿದ್ದು, 9744 ಅಭ್ಯರ್ಥಿಗಳು ಅಪೆರೆಲ್ಸ್ ಸೆಕ್ಟರ್‍ನಡಿ ಉದ್ಯೋಗಾವಕಾಶ / ಸ್ವ ಉದ್ಯೋಗ ಪಡೆದಿರುತ್ತಾರೆ.

ಮುಂದುವರೆದು, 2025-26ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಇಒಐ ಮುಖೇನ ಪ್ರಸಕ್ತ ಸಾಲಿನಲ್ಲಿ ಅಪೆರೆಲ್ಸ್ ಸೆಕ್ಟರ್‍ನ ಸ್ವೆಯಿಂಗ್ ಮಿಷಿನ್ ಆಪರೇಟರ್ ((Sewing Machine operator) ಜಾಬ್ ರೋಲ್‍ನಡಿ 4 ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದ್ದು, 150 ಅಭ್ಯರ್ಥಿಗಳಿಗೆ ತರಬೇತಿಯು ಪ್ರಗತಿಯಲ್ಲಿದೆ.

ಪುಸಕ್ತ ಸಾಲಿನಲ್ಲಿ ನಿಗಮದಿಂದ ಕೈಗೊಳ್ಳಲಾಗುವ ಯೋಜನೆ/ಕಾರ್ಯಕ್ರಮಗಳ ಮುಖೇನ ಜೀವನೋಪಾಯಕ್ಕೆ ಅಗತ್ಯವಿರುವ ಕೌಶಲ್ಯಾಧಾರಿತ ತರಬೇತಿಗಳನ್ನು ಒಳಗೊಂಡಂತೆ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಹಾಗೂ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗನುಗುಣವಾಗಿ, ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಕೆ, ಉದ್ಯೋಗ ಮಾರ್ಗದರ್ಶನ, ತರಬೇತಿ ಮತ್ತು ಮೌಲ್ಯಮಾಪನ ಮಾಡುವುದು ಹಾಗೂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದರ ಜೊತೆಗೆ, ಉದ್ಯಮಶೀಲತೆ ಮತ್ತು ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದಾಗಿದೆ ಹಾಗೂ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಕೌಶಲ್ಯದೊಂದಿಗೆ ಪೆÇ್ರೀತ್ಸಾಹಿಸಲು ಕ್ರಮವಹಿಸಲಾಗಿದ್ದು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.