ಜಗತ್ತಿನೊಳಗೆ ಅನೇಕ ಸಂಬಂಧಗಳು ಬರುತ್ತವೆ ಅದರಲ್ಲಿ ಎಲ್ಲಾವನ್ನು ಮೀರಿರುವಂತಹ ಸಂಬಂಧ ಗುರುಶಿಷ್ಯರ ಸಂಬಂಧ

ಜಗತ್ತಿನೊಳಗೆ ಅನೇಕ ಸಂಬಂಧಗಳು ಬರುತ್ತವೆ ಅದರಲ್ಲಿ ಎಲ್ಲಾವನ್ನು ಮೀರಿರುವಂತಹ ಸಂಬಂಧ ಗುರುಶಿಷ್ಯರ ಸಂಬಂಧ There are many relationships in the world, but the one that transcends all of them is the relationsh

ಲೋಕದರ್ಶನ ವರದಿ

ಬೀಳಗಿ 06:  ಜಗತ್ತಿನೊಳಗೆ ಅನೇಕ ಸಂಬಂಧಗಳು ಬರುತ್ತವೆ ಅದರಲ್ಲಿ ಎಲ್ಲಾವನ್ನು ಮೀರಿರುವಂತಹ ಸಂಬಂಧ ಗುರುಶಿಷ್ಯರ ಸಂಬಂಧ, ಮರಿವು ಮನುಷ್ಯನಿಗೆ ಸಹಜವಾದ ಗುಣ ಆದರೆ ಸುಮಾರು ವರ್ಷಗಳ ನಂತರ ಗುರುಗಳನ್ನು ನೆನೆದು ಗುರುವಂದನೆ ಮಾಡುವದು ಬಹಳ ವಿಶೇಷ. ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋದವರನ್ನು ನಮ್ಮ ಜೀವನದಲ್ಲಿ ಎಂದಿಗೂ ಮರಿಯಬಾರದು. ಎಂದು ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರು ಹೇಳಿದರು  

ರಾಮಲಿಂಗೇಶ್ವರ ಪ್ರೌಢ ಶಾಲಾ ಆವರಣದಲ್ಲಿ 2013-14 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ/ನಿಯರು ಹಮ್ಮಿಕೊಂಡ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.  

ಶಿಕ್ಷಕರು ಮತ್ತು ಸಾಹಿತಿಗಳಾದ ರವಿ ಕಂಗಳ ಉಪನ್ಯಾಸ ನೀಡಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮಹತ್ವದಾಗಿದೆ, ಯಾಕೆ ಗುರು ಮುಖ್ಯ ಅಂದರೆ ಮಕ್ಕಳ ಜೀವನದಲ್ಲಿ ಅಂದಕಾರವನ್ನು ಹೊಗಲಾಡಿಸಿ ಜ್ಞಾನದ ಬೆಳಕನ್ನು ನೀಡುವ ಒಂದು ದಿವ್ಯ ಶಕ್ತಿಯಾಗಿದೆ. ಜ್ಞಾನ ದೊಡ್ಡದಲ್ಲ ಸಂಸ್ಕಾರ ದೊಡ್ಡದು. ನಾವು ಇವತ್ತಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಮಕ್ಕಳನ್ನು ದೊಡ್ಡ ದೊಡ್ಡ ಶಾಲೆಗಳಲ್ಲಿ ಕಲಿಸಿ, ನಂತರ ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ, ತಂದೆ ತಾಯಿಗಳು ಪರದೇಶಿಗಳಾಗಿದ್ದಾರೆ. ಎಂದು ಹೇಳಿದರು 

ಹಳೆಯ ವಿದ್ಯಾರ್ಥಿಗಳಾದ ಗೀರೀಶ ಜುಂಜುರಿ ಮಂಜು ಗಾಣಿಗೇರ ತೇಜಶ್ವಿನಿ ಸಂಕಣ್ಣವರ ಮಾತನಾಡಿ,ನಮಗೆ ವಿಧ್ಯೆ ಕಲಿಸಿದ ಗುರಗಳಿಗೆ ಗುರುವಂದನೆ ಕಾರ್ಯಕ್ರಮ ಮಾಡಬೇಕು ಎಂಬ ಆಶೆ ಇತ್ತು, ಆದರೆ ಇವತ್ತು ಕಾಲ ಕೂಡಿ ಬಂತು ನಮಗೆ ಬಹಾಳ ಸಂತೋಷವಾಯಿತು ಎಂದು ಹೇಳಿದರು. 

 ಇದೆ ಸಂದರ್ಭದಲ್ಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ರಾಮಲಿಂಗೇಶ್ವರ ದೇವರ ಮೂರ್ತಿಗೆ ರುದ್ರಾಭಿಷೆಕ ಸಲ್ಲಿಸಿದರು ಹಾಗೂ 2013-14 ನೇ ಸಾಲಿನ ಕಲೆತ ವಿದ್ಯಾರ್ಥಿಗಳು ಕಲಿಸಿದ ಗುರುಗಳೊಂದಿಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಪ್ರೌಢಶಾಲೆಯವರೆಗೆ ಕರಡಿಮಜಲು ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ನಡೆಯಿತು. ಗ್ರಾಮದ ದೇವಾಲಯಗಳ ದರ್ಶನ ಪಡೆದರು.