ಕನ್ನಡ ಪದವಿಧರರಿಗೆ ಇವೆ ಹೇರಳ ಅವಕಾಶ: ಡಾ. ಎ.ಯು ರಾಠೋಡ
There are many opportunities for Kannada graduates: Dr. Rathoda
ಬಾಗಲಕೋಟೆ 09: ಶಿಕ್ಷಣ ನಿಂತ ನೀರಲ್ಲ ಜೀವನದುದ್ದಕ್ಕೂ ನಡೆಯುವ ಪ್ರಕ್ರಿಯೆ. ಸ್ನಾತಕೋತ್ತರದ ಬೀಳ್ಕೊಡುಗೆ ಜೀವನದ ಮುಂದಿನ ಘಟ್ಟದ ನಿರ್ಧಾರ ಕೈಗೊಳ್ಳುವ ಹಂತ. ಮೌಲ್ಯಯುತ ಜೀವನಕ್ಕಾಗಿ ನಿರ್ಧಿಷ್ಟ ಗುರಿ ಇರಬೇಕು ಎಂದು ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಎ.ಯು. ರಾಠೋಡ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನುಡಿ ವೇದಿಕೆ ಕಾರ್ಯಚಟುವಟಿಕೆಗಳ ಮುಕ್ತಾಯ ಹಾಗೂ ಕನ್ನಡ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ಅವರು ಮಾತನಾಡಿದರು. ಸ್ನಾತಕೋತ್ತರದ ನಂತರ ಪಿ.ಎಚ್.ಡಿ ಹೊರತು ಪಡಿಸಿ ಹೇರಳ ಅವಕಾಶಗಳಿವೆ. ಸೆಟ್, ನೆಟ್, ಜಿಆರ್.ಎಫ್, ರಾಜೀವ ಗಾಂಧಿ ಫಿಲೋಸಿಪ್ ನಂತಹ ಪರೀಕ್ಷೆಗಳತ್ತ ಗಮನ ಹರಿಸಬೇಕು. ಹಲವಾರು ವಿವಿಗಳು ಸಂಶೋಧನೆಗಾಗಿ ಕೇಂದ್ರದಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಯೋಜನೆ ಇದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳವ ಕೆಲಸ ಮಾಡಬೇಕು ಎಂದರು.
ಕನ್ನಡ ವಿಭಾಗಕ್ಕೆ ಅಂತರಾಜ್ಯದಲ್ಲಿಯೂ ಬೇಡಿಕೆಗಳಿದ್ದು ಅದನ್ನು ಹುಡುಕಬೇಕು. ದೃಡ ನಿರ್ಧಾರ ಮತ್ತು ಕನಸುಗಳನ್ನು ಬೆನ್ನಟ್ಟಿ ಅಲ್ಪಾವಧಿ ಕೆಸಗಳಲ್ಲಿ ಕಾಲಹರಣ ಬೇಡ. ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಿದ್ದರೂ ಸಂಶೋಧನಾ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಆದ್ದರಿಂದ ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಅವಕಾಶ ಮತ್ತು ಸೌಲಭ್ಯಗಳಿದ್ದು ಅವುಗಳತ್ತ ಗಮನಹರಿಸಬೇಕು. ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಂಶೋಧನಾ ಕೇಂದ್ರವಿದ್ದು ಈ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಪ್ರತಿಭೆ ಎನ್ನುವುದು ಬೆಳಕಿನ ಪರ್ವತ ಇದ್ದಹಾಗೆ ಅದರ ಮೇಲೆ ದೂಳು ಕೂರದಂತೆ ನೋಡಿಕೊಳ್ಳಬೇಕು. ಅಧ್ಯಯನಕ್ಕೆ ವಿಶ್ರಾಂತಿ ಇಲ್ಲ ಅದು ಉಸಿರಾಟದ ಪ್ರಕ್ರಿಯೆ ಇದ್ದಂತೆ. ನಿರಂತರ ಚಟುವಟಿಕೆ, ಬಾಷಾ ಕೌಶಲ್ಯವನ್ನು ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಸಾಧನೆ ಗುರುವಿಗೆ ಸಂತೋಷ ನೀಡುತ್ತದೆ. ನಡೆಯುವವರೇ ಎಡುವಲು ಸಾಧ್ಯ ಆದ್ದರಿಂದ ಸೋಲುಗಳು ನಮ್ಮನ್ನು ದೃಡವಾಗಿಸುತ್ತವೆ ಇದರಿಂದ ಗೆಲವು ಸಾಧ್ಯ. ಸಂತೃಪ್ತ ಭಾವ ಕೌಶಲ್ಯಗಳನ್ನು ಮಸುಕಗೊಳಿಸುತ್ತದೆ ಕೊರತೆ ಮತ್ತು ಹಸಿವು ಗುರಿಯಕಡೆ ಗಮನವನ್ನು ಕೇಂದ್ರಿಕರಿಸುತ್ತದೆ. ಅವಕಾಶಗಳನ್ನು ನಿರಂತರವಾಗಿ ಹುಡುಕುವ ಕೆಲಸ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ವೀಣಾ ಕಲ್ಮಠ, ಡಾ. ಬಸವರಾಜ ಕುಂಬಾರ, ಡಾ. ಶ್ರೀಹರಿ ದೂಪದ್, ಪ್ರಾ. ವ್ಹಿ.ಎಸ್ ಚಿಗರಿ, ಬಿಳಗಿ ಮಹಾವಿದ್ಯಾಲಯದ ಪ್ರಾ. ಸಂಪತ್ ಲಮಾಣಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 