ಶಿಕ್ಷಕನ ಮನೆಯಲ್ಲಿ ಕಳ್ಳತನ
Theft at teacher's house: Karwar News
ಕಾರವಾರ 15: ಶಾಲೆಗೆ ತೆರಳಿದ್ದ ಶಿಕ್ಷಕನ ಮನೆಗೆ ನುಗ್ಗಿದ ಕಳ್ಳರು ಹಣ ದೋಚಿದ ಘಟನೆ ಕಾರವಾರ ತಾಲೂಕಿನ ಸದಾಶಿವಗಡದ ಚಿಂಚೆವಾಡಾದಲ್ಲಿ ನಡೆದಿದೆ. ಮನೆ ಕಳ್ಳತನವಾಗಿದೆ ಎಂದು ಸುನೀಲ ರಾಮಚಂದ್ರ ಗಾಂವಕರ್ ಠಾಣೆಗೆ ದೂರು ನೀಡಿದ್ದಾರೆ. ಫೆ.13 ರ ಬೆಳಗ್ಗೆ 9.15 ರ ಸುಮಾರಿಗೆ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ಶಾಲೆಗೆ ತೆರಳಿದ್ದರು.
ಚಿಂಚೆವಾಡಾದಲ್ಲಿರುವ ಅಮೃತಾ ವಿದ್ಯಾಲಯ ಹೈಸ್ಕೂಲಿಗೆ ಹೋಗಿದ್ದ ಮಗಳು , ಸಾಯಂಕಲ ನಾಲ್ಕು ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಸಿದ್ದರದ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಕಳ್ಳರು ಮನೆಯ ಮುಖ್ಯ ಬಾಗಿಲಿಗೆ ಹಾಕಿದ್ದ ಬೀಗದ ಕೊಂಡಿಯನ್ನು ಮುರಿದು, ಒಳಹೊಕ್ಕಿ ಮನೆಯ ಬೆಡ್ ರೂಮ್ನಲ್ಲಿದ್ದ ಕಟ್ಟಿಗೆಯ ಕಪಾಟು ಮತ್ತು ಚಾವಿ ಹಾಕಿದ ಕಬ್ಬಿಣದ ಕಪಾಟನ್ನು ಮುರಿದು ಅದರಲ್ಲಿದ್ದ ಸಾವಿರಾರು ರೂಪಾಯಿಗಳನ್ನು ಕದ್ದಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 