ಸರ್ಕಾರಿ ನೌಕರರ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ತೆರೆ

ಸರ್ಕಾರಿ ನೌಕರರ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ತೆರೆ  Theater training camp for children of government employees opens

ಲೋಕದರ್ಶನ ವರದಿ 

ಕೊಪ್ಪಳ  28: ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಜಿಲ್ಲಾ ಘಟಕ ಕೊಪ್ಪಳ, ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ ಇವರ ಸಹಯೋಗದಲ್ಲಿ ಸರ್ಕಾರಿ ನೌಕರರ ಮಕ್ಕಳಿಗಾಗಿ ರಂಗ ತರಬೇತಿ ಶಿಬಿರವನ್ನು ಉಚಿತವಾಗಿ ಏರಿ​‍್ಡಸಲಾಗಿತ್ತು.  

ಮಕ್ಕಳ ರಂಗ ತರಬೇತಿ ಶಿಬಿರವು ಒಂದು ವಾರಗಳ ಕಾಲ, 8 ವಯಸ್ಸಿನಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಬಿರ ಜರುಗಿತು. ಶಿಬಿರವು ಒಂದು ವಾರಗಳ ಕಾಲ ಜರುಗಿತು. ಮಕ್ಕಳ ರಂಗ ತರಬೇತಿ ಶಿಬಿರವನ್ನು ನಾಟಕ ಶಿಕ್ಷಕರಾದ ಗುರುರಾಜ ಎಲ್‌. ಹಾಗೂ  ಶಾಂತಾಮಣಿ ತರಬೇತಿ ನೀಡಿದರು. ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರಂಗಾಟ, ಹಾಡು, ಕುಣಿತ, ವಾಚಿಕ, ಆಂಗಿಕ, ನಟನೆ, ಇತ್ಯಾದಿಗಳನ್ನು ಕಲಿಸಲಾಯಿತು. ಶಿಬಿರವು ನೌಕರರ ಸಾಂಸ್ಕೃತಿಕ ಭವನದಲ್ಲಿ ಜರುಗಿತು.  

ಮಕ್ಕಳ ರಂಗ ತರಬೇತಿ ಶಿಬಿರವನ್ನುದ್ದೇಶಿಸಿ ಮಾತನಾಡಿದ ಪ್ರಾಣೇಶ ಪೂಜಾರ ಒಂದು ವಾರಗಳ ಕಾಲ ಮಕ್ಕಳು ಸಂತೋಷದಿಂದ ಪಾಲ್ಗೊಂಡು, ಪಠ್ಯೇತರ ಮತ್ತು ರಂಗ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.  ಶಿಬಿರದಲ್ಲಿನ ರಂಗಾಟ, ಹಾಡು, ಕುಣಿತ, ನಟನೆ, ಚಿತ್ರ ಬಿಡಿಸುವುದು ಹೀಗೆ ಎಲ್ಲದರಲ್ಲೂ ಪಾಲ್ಗೊಂಡರು. ದಿನವೂ ಸಮಯಕ್ಕೆ ಸರಿಯಾಗಿ ಬಂದು ಶಿಸ್ತಿನಿಂದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದರು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಮಕ್ಕಳ ರಂಗ ತರಬೇತಿ ಶಿಬಿರವನ್ನು ಹೆಚ್ಚಿನ ದಿನಕ್ಕೆ ವಿಸ್ತರಿಸಲಾಗುವುದು ಎಂದರು.  

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಶಿಕ್ಷಕರಾದ ಪಾಂಡುರಂಗ ಅಲ್ಲೂರ, ರಾಮಣ್ಣ ಶ್ಯಾವಿ ಉಪಸ್ಥಿತರಿದ್ದರು. ನಾಗರಾಜನಾಯಕ ಡಿ,ಡೊಳ್ಳಿನ ನಿರೂಪಿಸಿದರು. ಪರಶುರಾಮ ಬಾವಿ ವಂದಿಸಿದರು.